೧೧೭
ಉ || ದೂರದೊಳಂಜದೀಕ್ಷಿಸುವ ಕಣ್ಣ ಲಿಗಳ್ ನೃಪರಾರುಮಿಲ್ಲೆನಲ್ |
ಸಾರೆವರ ಮನಂಗಿಡದ ಮೆಯ್ದ ಲಿಯಾವನೊ ಬಾಹುವೀರದಿ೦ ||
ದಾರಿವನೆತ್ತಲಾರ್ದನೆನಲೇಖಿಸುವುದ್ದ ತ ವೃತ್ತಿ ನಾಡೆಯುಂ |
ದೂರಮಿವರ್ಕೆ ಬಿಲ್ವೆಸರನಿಟ್ಟವನುರ್ವಿಗೆ ನಂಜನಿಟ್ಟವಂ || ೮೨ ||
ಎಂದು ನೆರೆದರಸುಮಕ್ಕಳೆಲ್ಲರಾಬಿಲ್ಲಂ ಕಂಡು ಬಲ್ಲ ರಂ ಪೊಡೆದಂತೆ ಪೆಡಂ
ಮಗುಳೆ -
ಶಾ || ದೇಶಾಧೀಶ ತನೂಭವರ್ ಸೆಡೆವುದುಂ ಸಾಕೇತ ಸಿಂಹಾಸನಾ |
ಧೀಶಂ ಕಂಡು ದರಸ್ಮಿತಂ ದಶರಥಂ ಭೂವಲ್ಲರೀ ಪಲ್ಲವಾ ||
ದೇಶಂ ನೋಡೆ ಮುಖಾಬ್ಬಮಂ ಸಭೆಯಿನೆಟ್ಟಿಂ ತುಂಗವಂಶಂ ಸುರೇ೦ |
ದ್ರಾಶಾದಂತಿ ಬಲಂ ಜಿತಾಹಿತಬಲಂ ದುರ್ವಾರ ಬಾಹಾಬಲಂ || ೮೩ ||
ಅ೦ತು ತಳರ್ವುದುಂ-
ಕಂ | ಜನ ನಯನ ಪ್ರತಿಬಿಂಬಂ
ತನುರುಚಿಯೊಳೋಳೆಯ ನಡೆವ ನೆಯ್ದಿ ಲೋಳನಂ ||
ನೆನೆಯಿಸಿ ನಾಣ್ಣನೆ ರಾಮಂ
ನೆನೆಯಿಸಿದನನುಕ್ಷಣಂ ಸಹಸ್ರೇಕ್ಷಣನಂ || ೮೪ ||
ಮ || ಬಲಭದ್ರಂ ರಜತಾದ್ರಿ ಬರ್ಸತೆಆದಿಂ ಬಂದಂ ಧನುರ್ದಶ್ರನಾ |
ಕುಲರಂ ರಾಜತನೂಜರಂ ಸ್ಮಿತಮುಖಂ ನೋಡುತ್ತು ಮುದ್ಮಲತಂ ||
ಕೆಲರಂ ಮಾರ್ಲೆಗೆ ಸಂದರಂ ಕೆಲಬರಂ ಬೆಳ್ಳುತ್ತು ಬೆನ್ನಿತರಂ |
ಕ್ಕಸಮುರಂ ಕೆಲಬರಂ ಶಂಕಾ ವಿಷಾತಂಕರಂ || ೮೫ ||
ಅಂತೆಯೇವರ್ಪುದುಂ-
ಚ || ಪದನಖ ದೀಪ್ತಿ ಮಂಜರಿ ನಿಚೋಳ ಕದಂತಿರೆ ತನ್ನ ನಾವಗಂ |
ಪುದಿಯಲೊಡಂ ಬಿಗುರ್ವಣೆ ರಘದೈಹ ಸನ್ನಿಧಿಯಿಂದದೃಶ್ಯಮ ||
ಪುದುಮಿಳಿದಾಯ್ತು ಚಾಪಲತೆ ರೋಹಣ ಶೈಲ ವಿಷಾಪಹಾರ ರ |
ತ್ನದ ವಿತತಾಂಶು ತಳಡರೆ ನಿರ್ವಿಷವಾದ ಮಹಾ ವಿಷಾಹಿವೋಲ್ || ೮೬ ||
ಆಗಳಾ ವಿಷಮ ಕೋದಂಡಮನೇರಂಡ ಕಾಂಡಮಂ ಬಗೆವಂತು ಬಗೆದು-
ಮ || ಪದುಳಂ ನಿಂದೆಡಗಯ್ಯೋಳೊ ರಘುಜಂ ಕೊಪ್ಪಂ ಪದಾಂಗುಷ್ಠಮೂ |
ಲದೊಳಿಟೈಆಸೆ ಕಾಲದಂಡ ನಿಭಮಂ ಕೋದಂಡಮಂ ಭೂತಳಂ ||
1. ಕೊಳ್ಳ೦. ಚ.