೪೩೨ ರಾಮಚಂದ್ರ ಚರಿತಪುರಾಣಂ ಬಹುಪ್ರಕಾರದಿಂ ಪರಿಭವಿಸುವನೆಂದು ಸಂತಯಿಸಿ ಶಾಂತಿಜಿನಭವನದೊಳ್ ಮಹಾ ಪೂಜೆಯಂ ಮಾಡಿಸಿ ನಿರ್ವತಿ್ರತ ನಿತ್ಯ ನಿಯಮನಮೃತಾಹಾರಮನಾರೋಗಿಸಿ ತದನಂತರಂ ಬಹುರೂಪಿಣೀ ವಿದ್ಯಾ ಪ್ರಭಾವಮಂ ಪರೀಕ್ಷಿಸಿ ಪ್ರಮೋದ ಮುದಿತ ಹೃದಯನಾಗಿ ಚ || ಸಮಧಿಕರಾರ್ ಜಗತ್ರಯದೊಳಿನ್ನೆನಗೆನ್ನೊಳಿದಿರ್ಚುವನ್ನರಾರ್ | ಸಮರದೊಳೆಂದು ತನ್ನ ಭುಜದಂಡನನೀಕ್ಷಿಸಿ ಜಾನಕೀ ಮುಖಾ 1 ಮನವಲೋಕಿಸಲ್ ಕರಮೆ ಕಾತರನಾಗಿ ವಿಯಚ್ಚರಾಧಿಪಂ | ಪ್ರಮದ ವನಕ್ಕೆ ಬಂದನರಲಂಬುಗಳಿಲ್ಲದ ಕಾಮನೆಂಬಿನಂ || ೧೦೬ || ಅಂತು ಭೋಂಕನೆ ಬರ್ಪ ರಾವಣನ ಗಂಡಗಾಡಿಯಂ ಕೆಲದೊಳಿರ್ದ ಖಚರ ಕಾಂತೆಯ ಸೀತಾದೇವಿಗೆ ತೋರ್ಪುದುಂ ಕಂ ॥ ರಾವಣನ ರೂಪು ಸೀತಾ ದೇವಿಗೆ ತೃಣ ಕಲ್ಪನಾಯ್ತು ಪತಿಭಕ್ತಿಯೊಳಾ | ರೀ ವನಿತೆಯ ತೆ ಆದಿಂ ಸ ದ್ಯಾವಮನೊಳಕೊಂಡ ಪುಣ್ಯ ವತಿಯರ್ ಸತಿಯರ್ || ೧೦೮ || ಏನಂ ಕೇಳ ಸೆನೋ ರಘು ಸೂನುವ ಲಕ್ಷ್ಮಣನ ಪೊಲ್ಲ ವಾರ್ತೆಯನಿನ್ನೆ | ದಾ ನಳಿನಾನನೆ ಬರ್ಪ ದ ಶಾನನಂ ಕಂಡು ತಾಳಿದ ತಲ್ಲಳಮಂ || ೧೦೯ || ಅಂತು ತಲ್ಲಳಿಸುತಿರ್ದ ಮಾನಿನಿಯನೆ ವಂದು ದಶಾನನನಿಂತೆಂದಂ ಬಹು ರೂಪಿಣೀ ವಿದ್ಯೆ ಸಾಧಿತವಾದುದಿನಗಸಾಧ್ಯಮಪ್ಪ ಮರುವಕ್ಕಮಿಲ್ಲ ನಿನ್ನ ನೆಚ್ಚಿನ ರಾಮನ ದೆಸೆಯಂ ಬಿಟ್ಟೆನಗೊಡಂಬಟ್ಟು ಸಾಮ್ರಾಜ್ಯ ಸುಖಮನನುಭವಿಸೆನೆ ಸೀತೆ ವಿಹ್ವಲೀಭೂತ ಚಿತ್ತೆಯಾಗಿ-- ಕಂ || ಕರುಣಿಸುವೊಡೆನಗೆ ದಶಕ೦ ಧರ ಧುರದೊಳ್ ರಘುತನೂಜನಾಯುಃಪ್ರಾಣಂ || ಬರೆಗ ಬಾರದಿರೆನುತುಂ ಧರಿತ್ರಿಯೊಳ್ ಮೆಯ್ಯನೊಕ್ಕು ಮೂರ್ಛಗೆ ಸಂದಭ್ 11 ೧೧೦|| 1. ನಾಸೆಯ, ಗ, ಫ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೨
ಗೋಚರ