ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನೈನಾಳದ ಕೆಳತುದಿಯಿಂದ ಆರಂಭವಾಗುವ ಜಠರವು ಜೀರ್ಣಾಂಗಗಳಲೆಲ್ಲಾ ಅತಿ ಹೆಚ್ಚು ಟೊಳ್ಳಾಗಿ ಊದಿಕೊಂಡಿರುವ ಅವಯವ. ಇಂಗ್ಲಿಷ್ j ಅಕ್ಷರದ ಆಕಾರದಲ್ಲಿರುವ ಜಠರ ಹೊಟ್ಟೆಯ ಕುಳಿ ಪ್ರದೇಶ (ಎಪಿಗ್ಯಾಸ್ಟ್ರಿಯಂ)ದ ಹಿಂದೆ ನೇತಾಡಿಕೊಂಡಿದ್ದು ಹೊಕ್ಕಳದ ಮಟ್ಟದಲ್ಲಿ ರುವ ಮುಂಗರುಳಿನಲ್ಲಿ (ಡುಯೋಡಿನಮ್) ಅಂತ್ಯವಾಗುತ್ತದೆ. ವಿಶಿಷ್ಟ ಆಕಾರವನ್ನು ಹೊಂದಿದ ಜಠರವನ್ನು ಮುಂಡ, ದೇಹ ಮತ್ತು ಅನ್ನಾಶಯ ( ಪೈಲೋರಸ್) ಗಳೆಂದು ವಿಂಗಡಿಸಲಾಗುಗಿದೆ. ವಿಚಿತ್ರ ರೀತಿಯ ಬಾಗಿದ ಆಕಾರವಿರುವ ಜಠರಕ್ಕೆ ಒಂದು "ಕಿರಿ ತಿರುವು" ಹಾಗೂ ಇನ್ನೊಂದು "ಹಿರಿ ತಿರುವು"ಗಳೂ ಸಹಾ ಇವೆ. (ಚಿತ್ರ ೧೪)

             ಎಲ್ಲಾ ಜೀರ್ಣಾಂಗಗಳಿಗೂ ಇರುವಂತೆ ಜಠರಕ್ಕೂ ಮೂರು ತೆರನ ಸ್ನಾಯು ಕವಚವಿದೆ. ಅವುಗಳ ಕ್ರಮವರಿತ ಚಲನೆ - "ತರಂಗ ಚಲನೆ"- (ಪೆರಿಸ್ಟಾಲ್ ಸಿಸ್)ಯಿಂದ ಜಠರದ ಕಾರ್ಯ ಚಟುವಟಿಕೆಗಳು ಸಸೂತ್ರವಾಗಿ ಜರುಗುತ್ತವೆ. ಅನ್ನಾಶಯದ ಕೊನೆಯ ಭಾಗದಲ್ಲಿರುವ ಸ್ನಾಯುಗಳ ವಿಶಿಷ್ಟ ತೆರನ ಅಳವಡಿಕೆಯಿಂದ ಅಲ್ಲೊಂದು ಬಿಗಿಸುತ್ತು ಅಥವಾ ಗೆಂಡೆ(ಸ್ಪಿಂಕ್ಟರ್)