ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನಡೆದದ್ದೇ ದಾರಿ
ಮಧ್ಯಾಹ್ನ. ತನ್ನ ಬ್ರೇನ್ ಅದ್ಭುತ. ಸಾಧ್ಯವಿಲ್ಲವೆಂದುಕೊಂಡಿದ್ದೆಲ್ಲಾ ಸಾಧ್ಯವಾಗಿರಲಿಲ್ಲವೇ ಅದರಿಂದಾಗಿ?.... ಕಲಾ ಮತ್ತು ಚಂದೂಲಾಲರ ಪ್ರಕರಣ ಹೀಗೆ ಸುರಳೀತವಾಗಿ ಕೊನೆಗೊಳ್ಳುವುದು ಸಾಧ್ಯವೆಂದು ಯಾರಿಗೆ ಅನಿಸಿತ್ತು? ಸ್ವತಃ ಚಂದೂಲಾಲನಿಗೇ ಈ ಭಾನಗಡಿಯಿಂದ ತಾನು ಮುಕ್ತನಾಗುವುದು ಅಸಾಧ್ಯವೆನಿಸಿತ್ತಮಧ್ಯಾಹ್ನ. ತನ್ನ ಬ್ರೇನ್ ಅದ್ಭುತ. ಸಾಧ್ಯವಿಲ್ಲವೆಂದುಕೊಂಡಿದ್ದೆಲ್ಲಾ ಸಾಧ್ಯವಾಗಿರಲಿಲ್ಲವೇ ಅದರಿಂದಾಗಿ?.... ಕಲಾ ಮತ್ತು ಚಂದೂಲಾಲರ ಪ್ರಕರಣ ಹೀಗೆ ಸುರಳೀತವಾಗಿ ಕೊನೆಗೊಳ್ಳುವುದು ಸಾಧ್ಯವೆಂದು ಯಾರಿಗೆ ಅನಿಸಿತ್ತು? ಸ್ವತಃ ಚಂದೂಲಾಲನಿಗೇ ಈ ಭಾನಗಡಿಯಿಂದ ತಾನು ಮುಕ್ತನಾಗುವುದು ಅಸಾಧ್ಯವೆನಿಸಿತ್ತಂತೆ. ಈಗ-
-'ನಾ ಈಗ ಆ ಹುಚ್ಚಿನಿಂದ ಪೂರ್ಣ ಮುಕ್ತ ಆಗೀನಿ ಶಂಕರ ಮಾಮಾ, ನಾ ಈಗ ಖರೇನ ಆರಾಮ ಇದ್ದೀನಿ' ಅನ್ನುತ್ತಾನೆ. ಒಂದು ರಿತಿಯಿಂದ ಚಂದೂಲಾಲನಿಗೆ ತಾನು ಒಳ್ಳೆಯದನ್ನೇ ಮಾಡಿದಂತಾಯಿತು. ಕಲಾನನ್ನು ಕಟ್ಟಿಕೊಂಡಿದ್ದರೆ ಇವನಿಗೇನು ಸಿಗುತ್ತಿತ್ತು? ಈಗ ಶ್ರೀಮಂತ ಮಾವ, ಗ್ರಾಜುಯೇಟ್ ಹೆಂಡತಿ, ಕಾರು, ವರದಕ್ಷಿಣೆ, ಪ್ರಮೋಶನ್ -ಎಲ್ಲ ಸಿಗುತ್ತದೆ. ಅವನ ಹಿತಕ್ಕಾಗಿ ತಾನು ಬಹಳ ಶ್ರಮಿಸಿದೆನೆಂದು ಅವನಿಗೆ ತನ್ನ ಬಗ್ಗೆ ಗೌರವ ಸಹಜವೆ. ಚಂದೂಲಾಲನ ಹಿತದಂತೆ ಕಲಾನ ಹಿತವೂ ತನಗೆ ಬೇಕಾದದ್ದು. ಕಲಾ ತನ್ನ ಕಣ್ಣ ಮುಂದಿನ ಹುಡುಗಿ. ಅವಳ ಜೀವನವನ್ನು ದಾರಿಗೆ ಹುಚ್ಚುವುದು ತನ್ನ ಕರ್ತವ್ಯ. ತಂದೆಯಿಲ್ಲದ ಅವಳ ಪಾಲಿಗೇ ತಾನೇ ತಂದೆ ಅಲ್ಲವೆ? ಅವಳು ತಪ್ಪು ದಾರಿ ಹಿಡಿದಾಗ ಎಚ್ಚರಿಸದ್ದು ತಾನು ಮಾಡಲೇಬೇಕಾಗಿದ್ದ ಕೆಲಸ. ಬುದ್ಧಿಯಿಲ್ಲದ ಹುಡುಗಿ. ಅವಳನ್ನು ಹಾಗೇ ಬಿಟ್ಟಿದ್ದರೆ ಹಾಳಾಗಿಹೋಗುತ್ತಿದ್ದಳು. ತಾನು ಅವಳ ಸುಖಕ್ಕಾಗಿ ಶ್ರಮಿಸಿದ್ದೇನು ಸ್ವಲ್ಪವೆ? ಚಂದೂಲಾಲನ ಹುಚ್ಚು ಅವಳ ತಲೆಯಿಂದ ಇಳಿಯುವುದು ಸುಲಭವಾದ ವಿಷಯವಾಗಿರಲೇ ಇಲ್ಲ. ಎಂಥ ಹುಚ್ಚು ಅವರಿಬ್ಬರಿಗೂ! ಅದೊಂದು ದಿನ ರವಿವಾರ ಸಂಜಿ ಬಹಳ ಬೇಸರವಾಗಿತ್ತು ತನಗೆ. 'ಜುಹು ಬೀಚಿಗೆ ಹೋಗಿಬರೋಣ ಬರ್ತೀಯೇನೆ?'ಎಂದು ಕೇಳಿದ್ದ ಹೆಂಡತಿಯನ್ನು. 'ಅಯ್ಯೋ, ನನಗಲ್ಲಿ ಸವುಡು ಸಿಗತದ್ರೀ? ಕೂಸಿಗೆ ಜ್ವರ ಬಂದಾವ. ಕೆಲಸದಾಕಿ ಬಂದೇ ಇಲ್ಲ ಇವತ್ತ. ಹಿರೇ ಹುಡುಗನ ಕಾಲು ಇನ್ನೂ ಪೂರಾ ನೆಟ್ಟಗಾಗಿಲ್ಲ. ಅಡಗೀ ಮಾಡಿ-' -ಅವಳ ರಗಳೆಯಿಂದ ತಲೆ ಚಿಟ್ಟೆಂದಿತ್ತು. ಕೊನೆಯ ಮಗುವಿನ ಅಳು. ಹಿರಿಯ ಹುಡುಗರ ಧಾಂಧಲೆ, ತೊಳೆಯಲಾರದೇ ಬಿದ್ದ ಪಾತ್ರೆಗಳು. ಎಲ್ಲವುಗಳ