೩೬೬ ರಾಮಚಂದ್ರ ಚರಿತ ಪುರಾಣಂ ಸನಮಂ ಮಯಿಸಿ ದನುಜೇ೦ ದ್ರನಿ೦ದ್ರನಿರ್ವ೦ತಿರೋಲಗಂಗೊಟ್ಟಿರ್ದ೦ ೧ ೪೬ || ಅ೦ತಿ ರ್ಪುದು ಕಂ || ಚರನೊರ್ವ೦ ಬ೦ದು ವಸುಂ - ಧರೆಯೊಳ್ ಮೆಯ್ಕೆಕ್ಕೆ ಜಯಜಯ ಧ್ವನಿ ಪೊಣ್ಣು ತಿರೆ ನಿಂದು ನಿಟಿಲ ತಟಗತ ಕರ ಕುಟ್ಟಲನಾಗಳಸುರ ಸತಿಗಿಂತೆಂದಂ || ೪೭ 11 ಚ || ಭುವನದೊಳಿನ್ನೆಗಂ ಮರೆದು ಕ೦ಡ ಯೆಂ ದನುಜೇ೦ದ್ರ ದೇವ ದಾ | ನವ ಖಚರಾಧಿನಾಯಕರೊಳಾಹವದೊಳ್ ನಿನಗುರ್ಕಿ ಸೊರ್ಕಿ ಮಿಾ || ಯುವ ತಲೆದೋಯುವುತರನೀಗಳಿದಚ್ಚರಿ ಕಂಡೆನಾಂ ಮಹೋ | ತೃವದೊಳೆ ಬಂದಪರ್ ಮನುಜರಾಹನ ಕೇಳಿಗೆ ರಾಮಲಕ್ಷ್ಮಣ || ೪೮ || ಮ | ಬಲ ನಾರಾಯಣರಂ ನೆರಂಬಡೆದು ನಿಮ್ಮೊಳ್ ಕಾದುವುದ್ಯೋಗದಿಂ 1 ಪಲವುಂದ್ವೀಪದ ಖೇಚರರ್ ನೆರೆದು ಹಂಸದ್ವೀಪದೊಳ್ ಬಿಟ್ಟು ಮು೦ || ಕಲಹಕ್ಕಲ್ಲದ ನಮ್ಮನೊಲ್ಲದವರೆಲ್ಲಂ ತಮ್ಮೊಳೊಂದಾದರಾ | ಕಲಿಗಳ್ ದಾನವ ಚಕ್ರವರ್ತಿ ನಿಜ ದೋರ್ದಂಡಂಬರಂ ಗಂಡರೇ ? ೪೯ ಎಂದು ಬಿನ್ನವಿಸಿದ ಚರನ ವಚನಮನವಧರಿಸಿ ಬೀರಸಿರಿಯ ಬೆಳಸದನದ ಬೆಳಗಿನಂತೆ ದಂತಕಾ೦ತಿ ಪಸರಿಸೆ ಮಂದಸ್ಮಿತ ಮುಖಂ ವಿದ್ಯಾಧರವೀರ ಪ್ರಮುಖ ನಪ್ಪ ದಶಮುಖನಿಂತೆಂದಂ ಶಾ || ತಂದೆಂ ಸೀತೆಯನಾಂ ಪರಾಭವಮನನ್ನೊಳ್ ಕಾದಿ ನೀಗಲ್ ಮನಂ | ದಂದೇಕಾಕಿಗಳೆತ್ತಿ ಬರ್ಸರವರೊಳ್ ಸಂಧಾನಮಂ ಮಾಡಿ ಮು || ನೆಂದುಂ ಕಪ್ಪವನಿತ್ತು ಬಾಳ್ವೆ ಖಚರರ್ ಕೈವಾರದಿಂ ಕಾದಿಸಲ್ | ಬಂದಪ್ಪರ್ ಪರ ಹಸ್ತದಿಂ ಮೋಲಿನಿಡಲ್ ಬರ್ಪಂತೆ ಕಾಳಾಹಿಯ೦ | ೫೦ || ಕಂ || ಮೃಗರಾಜ೦ ಗರ್ಜಿಪುದುಂ ನಗದೊಳ್ ಮಾರ್ದನಿಗಳುಣ್ಯವಂತೊಡನೊಡನಿ೦ 1 ದಗಿ ಮೇಘವಾಹನಾದಿಗ ಆಗುರ್ವು ಪರ್ವುವಿನಮಸುರನೆಂದುದನೆಂದರ್ || ೫೧ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೬
ಗೋಚರ