ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೫ ದ್ವಾದಶಾಶ್ವಾಸಂ ಸನತ೦ಮಾಡಿದ ಯಮ ದಂ ಡ ನಿಭಮದಾರಳಿ ನಳನ ಬಾಹಾದಂಡಂ | ೪೦ || ಅ೦ತಾ ದ್ವೀಪದೊಳ್ ಬೀಡಂಬಿಟ್ಟು ಲಕ್ಷ್ಮೀಧರಂ ಪ್ರಭಾಮಂಡಲಂಗೆ ಬಬಿಯನಟ್ಟ ಸೆವುಂದ್ರೀಪಾಂತರದ ವಿದ್ಯಾಧರಾಧಿರಾಜರನಾಜ್ಞಾವಿಧೇಯರಂ ಮಾಡುತ್ತು ಮಿರ್ಸಿನಮಿತ್ತಲ್‌ ಚ || ಅರುಣಮಣಿ ಪ್ರಭಾ ಪಟಲದಿಂದರುಣಾತಪಮಂ ತಗುಟ್ಟು ಬಿ | ತರಿಸುವ ಸಿಂಹಪೀಠದೊಳದೇನೆಸೆದಿರ್ದನೊ ರಾಹುಮಂಡಲಂ | ತರುಣ ದಿನೇಶ ಮಂಡಲಮನಾದರಿಸಿರ್ದಪೊಲಿಂದ್ರನೀಲ ಭಾ || ಸುರತರ ದೇಹದೀಪ್ತಿ ಪುದಿಯಲೈ ದಿಶಾನನಮಂ ದಶಾನನಂ || ೪೧ ॥ ಕಂ || ಉರದಿಂದಗಲದ ಲಕ್ಷ್ಮಿಯ ತರಲೇಕ್ಷಣ ಮಾಲೆ ಹಾರಲತೆ ದನುಜನ ಸೇ | ರುರದೊಳ್ ಸೊಗಯಿಸಿದುದು ಕಾ ರಿರುಳೊಳ್ ತಲೆದೋರ್ಪ ತರಳ ತಾರಾವಳಿವೋಲ್ | ೪೨ 11 ಅಂಗದ ಮಣಿಭೂಷಣ ಕಿರ ಣಂಗಳ ಜಗದೊಳಗಣರಸುಗಳ ಜಯ ವಧುವಂ || ಪಿಂಗದ ನಿಲೆಕಟ್ಟುವ ಪಾ ಶ೦ಗಳಿವೆನೆ ಭ.ಜದೊಳೇಂ ಮನಂಗೊಳಿಸಿದುವೋ || ೪೩ || ಅವತಂಸ ಪಾರಿಜಾತಾ ಸವಮಂ ಸವಿದಾಡಿ ಪಾಡುವಳಿಗಳ ನಿನದ೦ | ಸವಿವಡೆಯ ಸೈರಿಸಂ ಚಮ ರವಿಕ್ಕುವಬಲೆಯರ ಪಿಂಡುಗಂಕಣದುಲಿಯಂ || ೪೪ 13 ತನುಜರುಮನುಜರುಮುಚಿತಾ ಸನದೊಳ್ ಮಂತ್ರಿಗಳುಮಿರೆ ವಿಲಾಸದಿನಿರ್ದ೦ || ದನುಜಾಧೀಶಂ ಪ್ರತ್ಯಂ ತ ನಗ೦ ಬಳಸಿರ್ದ ನೀಲ ಕುಲದವೋಲ್ ಜನಕಸುತೆ ಮನದೊಳಿರೆ ಪರಿ ಜನಮಿರಿ ನಿಯತ ಪ್ರದೇಶದೊಳ್ ವಿರಹದ್ದೀ 1) ೪೫ 1.