ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೬೪ ನಡೆದದ್ದೇ ದಾರಿ
ಗುಂಪಾಗುವವರೆಗೂ ಧಾವಿಸುತ್ತಿರುವುದೇ,ಇವುಗಳ ಕರ್ಮ .ಎಂದೂ ಕೊನೆಯಿಲ್ಲದ ಓಡಾಟ ಇವುಗಳದು. ಎಂಥ ಬೇಸರದ ಬದುಕು.... -ಯೋಚಿಸುತ್ತಿದ್ದಂತೆ ಶಶಿಗೆ ಬಹಳ ಬೇಸರವಾಗುತ್ತದೆ.ಆವಳ ತಲೆ ಗಿಮ್ಮೆನ್ನುತ್ತದೆ. ಯಾವ ಯಾವವೋ ನೆನಪುಗಳು, ಯಾರಯಾರವೋ ಮುಖದಳು, ಎಲ್ಲೆಲ್ಲಿಯವೋ ದೃಶ್ಯಗಳು ಏನೇನೋ ವಿಚಿತ್ರ ಆನಿಸಿಕೆಗಳು. 'ಎಲ್ಲಾ ನನ್ನ ದೈವ'ವೆಂದು ಕ್ಷೀಣವಾಗಿ ಹೇಳಿ ಆರೆಗಣ್ಣು ಮುಚ್ಚಿ ಮಲಗಿದ್ದ ಪೂರ್ಣಿಮಾ ಸಿಂಗ್ ಗಂಡನ ಪೋಸ್ಟ್ ಕಾರ್ಡು ಬಂತೆಂದು ಎಲ್ಲ ಮರೆತು ಬೀಗುತ್ತ ತಿರುಗಿ ಬಂದ ರೋಶನ್ ಬಿ ;ಪ್ರಮೋಶನ್ ಪಡೆದು ಲಗ್ನವಾಗಲಿರುವ ಖುಶಿಯಲ್ಲಿ ಬರಲಿರುವ ವಿಪತ್ತಿನ ಆರಿವಿಲ್ಲದ ಲೀಲಾ ಕುಲಕರ್ಣಿ; ಜೋತೆಗೆ ಶೋಷಣೆಯ ವರುದ್ದ ಬಂಡಾಯ ಹೂಡಬೇಕೆಂದು ಲೆಕ್ಚರ್ ಕೊಡುತ್ತ ತಿರುಗುವ ಮಾಲಿನಿಬಾಯಿ ಪಟೇಲ್ ಹಾಗೂ ಹಾಸಿಗೆ ಹಿಡಿದ ಆಕೆಯಗಂಡ ;ನಗುನಗುತ್ತಲಿದ್ದ ಆಪ್ಟೆ ದಂಪತಿಗಳು ;ದಿನವು ತಾನು ನೋಡುವ ನೂರಾರು ಪೇಶಂಟುಗಳು;ತನೋಂದಿಗೆ ಇಡಿಯ ಮಧ್ಯಾಹ್ನ-ಸಂಜೆ ಕಳೆದು ರಾತ್ರಿ ಹೆಂಡತಿಯ ಹೆದರಿಕೆಗಾಗಿ ಬೇಗ ಮನೆ ಸೇರಲು ಓಡುವ ತನ್ನ ಸಹೋದ್ಯೋಗಿ ಡಾಕ್ಟರುಗಳು; ಹಾಗೂ ಇವರೆಲ್ಲರ ಆಚೆ ಧೈರ್ಯ್ವಾವಾಗಿ ಎಲ್ಲ ಧಿಕ್ಕರಿಸಿ ದೂರ ಹೋಗಿ, ಕೆಲವಾರು ತಿಂಗಳಲ್ಲೇ ತಿರುಗಿ ತಾನು ಧಿಕ್ಕರಿಸಿ ಹೋಗಿದ್ದ ಬದುಕನ್ನೇ ಆಪ್ಪಿಕೊಳ್ಳಲು ಸ್ವ ಇಚ್ಛೆಯಿಂದ ವಾಪಸು ಬಂದಿದ್ದ ಕಮಲಾ.....ಇನೂ ಆಚೆ -ಯಾರದು? ವ್ಹಿ.ಟಿ. ಸ್ಟೇಶನ್ನಿನಲ್ಲಿ ಲೋಕಲ್ ಇಳಿದ ಶಶಿ ಪ್ಲಾಟ್ ಫಾರ್ಮಿನ ಮೇಲೆ ಗಿಜಿಗುಡುತ್ತಿರುವ ಜನಸಂದಣಿಯ ನಡುವೆಯೂ ದೂರದಲ್ಲಿ ಸೂಟ್ ಕೇಸು ಹಿಡಿದು ನಿಂತಿದ್ದ ಡಾ.ಸತೀಶ ದೇಶಪಾಂಡೆಯನ್ನು ಗುರ್ತಿಸಿದಳು, ಒಂದು ಕ್ಷಣ ಆಕೆಯ ತಲೆಯಿಂದ ಕಣ್ಣಿಂದ ಮನಸ್ಸಿನಿಂದ ಆ ಎಲ್ಲ ವಿಚಾರಗಳು, ದೃಶ್ಯಗಳು, ಜನಗಳು ಮರೆಯಾದವು. ಸುತ್ತಲೂ ಹಾಡೇ ಹಗಲಿನ ಆ ಉರಿಬಿಸಿಲಲ್ಲೂ ಕತ್ತಲು ಕವಿದಂತೆನಿಸಿತು .ತುಸುವೇ ಬೆಳಕು. ಆಕಡುತ್ತಲಲ್ಲಿ ನಸುಬೆಳಕಿನಲ್ಲಿ ಆಕೆಗೆ ಮೈಮನಗಳೆರಡೂ ಮರೆವಾಗಿ ತಲೆಸುತ್ತಿ ಬರುತ್ತಿರುವಂತೆನಿಸಿ ಬೀಳುವ ಮೊದಲೇ ಏನನ್ನಾದರೂ ಆಧರಿಸಿ ಹಿಡಿಯಬೇಕೆಂದು ಆಕೆ ಧಾವಿಸಿ ಮುಂದೆ ಬಂದಳು- -ಓಡಿ ಬಂದ ತನ್ನ ಕೈ ಹಿಡಿದ ಶಶಿಯನ್ನು ಸತೀಶ ಆಶ್ಚರ್ಯದಿಂದ ನೋಡಿದ. ಆತ ಮಾತನಾಡಲು ಬಾಯಿ ತೆರೆಯುವ ಮುನ್ನವೆ ಶಶಿ ಆಂದಳು."ನೀ ಊರಿಗೆ ಹೋಗಬ್ಯಾಡ ಸತೀಶ ,ಆಮ್ಯಾಲ ಬರ್ತೀನೀಂತ ನಿಮ್ಮ ತಾಯಿಗೆ ಟೆಲಿಗ್ರಾಂ ಕೊಟ್ಟುಬಿಡು."ನಂತರ ತನ್ನ ಮನಸ್ಸೆಲ್ಲಿ ಮತ್ತೆ ಬದಲಾಗಿ ಬಿಡುವುದೋ ಎಂಬ ಆವಸರದಲ್ಲಿ ಸುತ್ತಲಿನ ಪರಿಸರದ ಒಂದಿನಿತೂ ಪರಿವೆಯಿಲ್ಲದೆ ತೀರ