ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕವಲು /ಮರ್ಯಾದೆ ೧೯೭
ಕಮಲಾ ಒಳನಡೆದಳು * * * ಊಟ ಮುಗಿಸಿ ಹಾಸಿಗೆಯ ಮೇಲೆ ಆಡ್ಡಾದಾಗ ಕಮಲಾಗೆ ಕಣ್ಣು ತುಂಬ ನಿದ್ರೆ ಬಂದಿತ್ತು .ಇಡೀ ರಾತ್ರಿ ಪ್ರವಾಸದಲ್ಲಿ ನಿದ್ರೆಗೆಟ್ಟಿದ್ಧರಿಂದ ಮೈ-ಕೈ ನೋವು.ಆರ್ಧ ಗಂಟೆಯಾದರೂ ಮಲಗಿ ಎದ್ಧರೆ ಮೈ ಹಗುರಾದಿತೆಂದು ಆಕೆ ಮಗ್ಗುಲಾದಳು. ತಾಯಿ ಇದ್ದಾಗ ಉಪಯೋಗಿಸುತ್ತಿದ್ದ ದೊಡ್ಡ ಕರೀ ಮರದ ಮಂಚ. ಎಲ್ಲ ರೂಮುಗಳಿಗೂ ಹೊಸ ಸನ್ ಮೇಕಾ ಮಂಚಗಳು ಬಂದ ನಂತರ ಇದನ್ನು ನದುಮನೆಯಲ್ಲಿನ ಮೂಲೆಗೆ ಹಾಕಿದ್ದರು ಉಳಿದ ಹೆಚ್ಚಿನ ಸಾಮಾನುಗಳ ಜೊತೆ . ಆವಳಿಗೆ ಈ ಮಂಜದ ಮೇಲೆ ವಿಶೇಷ ಮೋಹ. ಹಿರಿಯ ಮಗಳ ಜೊತೆ ಹೆಚ್ಚಿನ ಸಲುಗಯಿಂದಿದ್ದ ತಾಯಿ ಆಕೆಗೊಮ್ಮೆ ನಾಚುತ್ತ ಹೇಳಿದ್ದರು. 'ಇದ್ದನ್ನು ನಾವು ಹೊಸದಾಗಿ ಸೊಲ್ಲಾಪೂರದಾಗ ಸಂಸಾರ ಹೂಡೀದ ಮ್ಯಾಲ ನಿಮ್ಮಪ್ಪ ಮಾಡಿಸಿತಂದ್ರು ಕಮಲಾ'. ತಾಯ ಮಡಿಲಲ್ಲಿ ಮಲಗಿದ ಅನುಭವ ಆಕೆಗೆ.ಆದರೆ ಯಾಕೋ ನಿದ್ರೆ ಹತ್ತುವ ಹಾಗೆ ತೋರಲಿಲ್ಲ. ಮಗ್ಗುಲು ಬದಲಿಸುತ್ತ ಆಕೆ ಒಮ್ಮೆ ಬಲವಾಗಿ ಕಣ್ಣು ಮುಚ್ಚಿ ಎರಡೂ ಕೈಗಳಿಂದಲೂ ಸಿದಿಯುತ್ತಿದ್ದ ತಲೆಯನ್ನು ಗಟ್ಟಿಯಾಗಿ ಒತ್ತಿಹಿಡಿದಳು. ಹಾಲ್ ನಲ್ಲಿ ಸೇರಿದ್ದ ಎಲ್ಲರೂ ತಾವು ಪಿಸುಧ್ವನಿಯಲ್ಲೇ ಮಾತಾಡುತ್ತಿದ್ದೇವೆಂದು ತಿಳಿದಿದ್ದರೂನಡುಮನೆಯಲ್ಲಿ ಮಲಗಿದ್ದ ಕಮಲಾಗೆ ಎಲ್ಲ ಕೇಳಿಸುತ್ತಿತ್ತು -ಆದೇ ವಿಷಯ,ಆದೇ ಚರ್ಚೆ,ಆದೇ ಅಸಹನೆ, ಅದೇ ಆತ್ಂಕ, ಆದೇ, ಅದೇ..... "ಖರೇ ಆಂದ್ರ ನನಗನಸ್ತದ - ಆವ್ವ ಸತ್ತ ಮ್ಯಾಲ ನಾವು ಕೆಲಸಕ್ಕಂತ ಆಕಿನ್ನ ಮನೀಯೋಳಗ ಸೇರಿಸಿದ್ದೇ ತಪ್ಪತು. ದೊಡ್ಡ ಮೈನೀ ಎಲ್ಲಾ ನೋಡಿಕೊಂಡು ಹೋಗ್ಬೇಕಾಗಿತ್ತು. ಅಂಥಾದ್ದೇನು ಮಹಾ ಕೆಲಸ ಇರ್ತದ ಮನ್ಯಾಗ? ಅವ್ವ ಎಲ್ಲಾ ಸಂಭಾಳಿಸಿಖಕೊಂಡು ಹೋಗ್ತಿದ್ದಿಲ್ಲೇ?" -ವಿಮಲಾ. ಹಿರಿಯ ಸೊಸೆ ರಮಾಗೆ ಈ ಆಪವಾದ ಹಿಡಿಸಲಿಲ್ಲ: "ಒಂದ ನೂರ ಮಂದಿ ಬಂಧು-ಬಳಗ,ಗೆಸ್ಡ್ಸ್-ಬರೋ ಮನೀಗೆ ಸರ್ವಂಟ್ ಬ್ಯಾಡಾ ಅಂದರ ಹ್ಯಾಂಗ? ಅಲ್ಲಾ,ನನಗರೆ ಹಿಂಗಾಗತದಂತ ಕಲ್ವನಾ ಹ್ಯಾಂಗ ಬರ್ಬೇಕು? ಯಾರರೇ ಮನೀ ಯಜಮಾನ್ರು ಕೆಲಸದ ಹೆಂಗಸಿನ್ನ ಲಗ್ನಾಗ್ತೀನಿ ಆಂತಾರೇನು ? ಆಸಹ್ಯ." "ವಿಮಲಾ ಆನ್ನೊದು ಒಂದ ರೀತೀ ಖರೇ."-ಸುರೇಶ ಗಂಭೀರವಾಗಿ