ಪುಟ:Mrutyunjaya.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್‍ಯುಂಜಯ ಅವನ ಸಹಿ ಒಂದು ಸಾಧನೆ. ಇಪ್‍ಯುವರ್ ಬರೆದ ಕೊಟ್ಟ ಸಂಕೇತ ರೂಪವನ್ನು ಅನುಕರಿಸಿ, ಮೆನೆಪ್ಟಾ ತನ್ನ ಅಂಕಿತವನ್ನು ಹಾಕಿದ. ಸುರುಳಿ ಯನ್ನು ಸುತ್ತಿ ಸೆಣಬಿನ ನಾರಿನಿಂದ ಬಿಗಿದರು, ಬಟಾ ಅದನ್ನು ಖೈಮ್ ಹೊಟೆಪನ ಮನೆಗೆ ఒయ్నే ಮುಟ್ಟಿಸಿದ.

  • * * * * *

ಅಯನ ಸಂಕ್ರಮಣ ಬಿಂದುವನ್ನು ಸೂರ್ಯ ತಲಪಿದ್ದ, ಅದು ದೀರ್ಘ ಹಗಲು. ಇನ್ನು ಉತ್ತರಕ್ಕೆ ಪಯಣ. ರಾಜದೂತರು ಮರಳಿ ಹೋದ ಮಾರನೆಯ ದಿನ, ಅದು. ಅಂದು ಡ್ಂಗುರ : "ಕೇಳಿರಿ ! ಕೇಳಿರಿ ! ನಮ್ಮ ನಾಯಕ ಮೆನೆಪ್ಟಾ ಪೆರೋನ ಆಮಂತ್ರಣ ಸ್ವೀಕರಿಸಿ ಸೆಡ್ ಮಹೋತ್‍ವವದಲ್ಲಿ ಭಾಗಿಯಾಗುವುದಕ್ಕಾಗಿ, ಮೆಂಫಿಸ್ಗೆ ಹೋಗಲಿದ್ದಾರೆ!” ತನಗೆ ತಿಳಿದಿದ್ದ ವಿಶಯವೇ. ಆದರು ನೆಫಿಸ್ ಅರೆತೆರೆದ ಭಾಗಿಲಿನೆಡೆ ಯಿಂದ ಡಂಗುರದವನ ಧನಿಯನ್ನು ಅಲಿಸಿ, ಗೋಡಗೊರಗಿ ನಿಂತಳು. ಭೇರಿ ಮಗ್‍ಲುಲು ಬೀದಿಗೆ ಹೋಮೇಲೆ, ಮೂರು ಮನೆಯಾಚೆಗಿನ ಹುಡುಗರ ತಂಡ ಅಣಕುಧ್ವನಿಯಲ್ಲಿ ಡಂಗುರವನ್ನು ಮತ್ತೆ ಸಾರಿತು : “ "ಕೇಳಿರಿ ! ಕೀಳಿರಿ !........." ಪೆರೋಗೆ ಕಾಣಿಕೆ ಒಯ್ಯಬೇಕೆ ಬೇಡವೆ? ಮುಖಂಡರಲ್ಲಿ ಚರ್ಚೆ ನಡೆಯಿತು. ಅವರೊಂದು ತೀರ್ಮಾನಕ್ಕೆ ಬಂದರು : ಕಾಣಿಕೆ ಕಪ್ಪವಲ್ಲ; ಶಿಷ್ಟಾಚಾರದಂತೆ ಏನನಾದರೂ ಒಪ್ಪಿಸಿದರೆ ಅದರಿಂದ ನಾಡಿನ ಸಾತಂತ್ರ್ಯಕ್ಕೆ ಚ್‍ಯುತಿ ಇಲ್ಲ. ಕೊಡುವುದು ಏನನ್ನು ? “ ಕೆಫ್‍ಟುವಿನ ಕಾಣಿಕೆಗಳಲ್ಲಿ ಯಾವುದಾದರೂ ಒಂದು ?” “ ಛೆ ! ಸರಿಯಲ್ಲ ! " ಸೆತಾನನ್ನು ಕರೆದು ಅಭಿಪ್ರಾಯ ಕೇಳಿದರು. " ಬೇಕಾದರೆ ಆ ಗಡಯಾರ ಕೊಟ್ಟುರು ಬಿಡಿ. ಕೆಫ್‍ಟು ಗೋಸ್ಕರ ಮಾಡ್ತಾ ಇದೇನಲ್ಲ. ಅದರಲ್ಲೊಂದು ಇಲ್ಲಿಡ್ತೇನೆ," ಎಂದು ಆತ.