- - ° 4, cet T. ವಿಶಾಲಾಕ್ಷಿ ° ° °• =° ° ೧೮೬ _j - -- - == = " --> # == = =7 °7° k.! n - - - - - - -೨ ° ° ° ° ° °. orr- - -• ವಿಶಾಲಾಕ್ಷಿಯೂ ಗಂಗಾಧರನೂ ಎಡವುತ್ತ, ನಿಂತಿದ್ದವರನ್ನು ಬಳಸುತ್ತ, ಗಾಡಿಯ ಜತೆಯಲ್ಲೇ ಮುಂದಕ್ಕೆ ಓಡಿದರು. ಆ ಡಬ್ಬಿಯಿಂದ ಮೊದಲೇ ಇಳಿದವನು ರಂಗರಾಜ, ಪ್ರವಾಸದ ಫಲ ವಾಗಿ ಪೋಷಾಕು ಮಲಿನವಾಗಿದ್ದರೂ, ಆರೋಗ್ಯವೇ ಮೈವೆತ್ತ ಹಾಗಿದ್ದ ಆತ. ಉಲ್ಲಸಿತವಾಗಿ ಪ್ರಫುಲ್ಲವಾಗಿತ್ತು ಮುಖ, ಆತ್ಮವಿಶ್ವಾಸವನ್ನು ಹೆಜ್ಜೆ ಹೆಜ್ಜೆಗೊ. ಹೊರಸೂಸುತ್ತಿದ್ದ ಚಲನವಲನ, ರಷ್ಯದಲ್ಲಿ ತೊಟ್ಟಿದ್ದ ಸೂಟುಧರಿಸಿಯೇ ಅಣ್ಣ ಇಳಿಯಬಹುದು-ಎಂದೂ ವಿಶಾಲಾಕ್ಷಿ ಯೋಚಿಸಿದ್ದಳು, ಆ ನಿರೀಕ್ಷೆ ಮಾತ್ರ ಸುಳ್ಳಾಗಿತ್ತು. [ಹಾಗೆಂದು ಬೇಸರವಿಲ್ಲ. ತನ್ನ ಅಣ್ಣನದೂ ಸರಳ ವ್ಯಕ್ತಿತ್ವವೇ ಎನ್ನುವುದು ದೊಡ್ಡ ಸಮಾಧಾನ, ಗಂ ಗಾ ಧ ರ ನಿ ಗೂ ಅದು ಇಷ್ಟ.....]
- ಸಾಮಾನುಗಳನ್ನಿಳಿಸಲು 'ಪೋರ್ಟರಿ'ಗೆ ರಂಗರಾಜ ನಿರ್ದೇಶವೀಯು ಶಿದ್ದಂತೆ, ವಿಶಾಲಾಕ್ಷಿ ತೀರಾ ಬಳಿ ಸಾರಿ ಅಣ್ಣನ ಮಗ್ಗುಲಲ್ಲಿ ನಿಂತಳು, ಒಡ ಹುಟ್ಟಿದವರ ಮುಗುಳುನಗೆಗಳು, ಅರೆಕ್ಷಣದಲ್ಲೇ ಪರಸ್ಪರರಿಗೆ ಎಷ್ಟೊಂದನ್ನು ಹೇಳಿದುವು! ಅದನ್ನು ನೋಡುತ್ತ ನಿಂತಿದ್ದ ಗಂಗಾಧರ, ಕ್ಷಣಕಾಲ ತಡೆದು ಮುಂದೆ ಬಂದು, ಕೈಚಾಚಿದ.
“ನೆನಪಿದೆ, ಅಲ್ಲವೆ ?” “ ಓಹೋ !” ಹೃದಯಸ್ಪರ್ಶಿಯಾದ ಹಸ್ತಲಾಘವ. [ಜತೆಯಲ್ಲೇ ಇಬ್ಬರೂ ಬಂದಿದ್ದರು ಹಾಗಾದರೆ, ಹೊಸ ನೋಟ. ತನ್ನ ತಂಗಿಯೂ ಎಷ್ಟೊಂದು ದಿಟ್ಟೆಯಾಗಿದ್ದಳು ! ರಷ್ಯಾದಲ್ಲಾದರೆ ಗಂಡುಹೆಣ್ಣು ಹೀಗೆ ಜತೆಯಾಗಿ ಓಡಾಡುವುದು ತೀರಾ ಸಾಧಾರಣ.ಇದು ತಪ್ಪೇನೂ ಅಲ್ಲ. ಆದರೂ, ಹೊಸ ದೃಶ್ಯ ಕಣ್ಣಿಗೆ ] ಹಮಾಲ ಕೆಳಗೆ ಇರಿಸಿದ ಸಾಮಾನುಗಳನ್ನು ಕಂಡು, ಗಂಗಾಧರ ಕೇಳಿದ: “ಸಾಮಾನು ಇಷ್ಟೇ, ಅಲ್ಲವೆ?” ದೊಡ್ಡ ಸೂಟ್ ಕೇಸು. ಚಿಕ್ಕದು ಮತ್ತೊಂದು, [ತಮ್ಮಂದಿರಿಗಾಗಿ ಉಡುಗೊರೆಗಳು ಒಳಗೆ.] ಹೋಲ್ಲಾಲು, ಕ್ಯಾಲಿಕೋ ಅರಿವೆಯ ಬ್ಯಾಗು." ಅದರ ಹಿಡಿಗಳ ನಡುವೆ ಸಿಕ್ಕಿಸಿದ್ದ ವೃತ್ತ ಪತ್ರಿಕೆ.. -- - - - -. - q • • - - - - - - - - - - - - - -L_1 ° °---- - - - - - °• "