ಹೃಷ್ಟ ಪುಷ್ಪಳಾಗಿದ್ದ ಲಲಿತಾ ಕಾಹಿಲೆ ಬೀಳುವಳೆಂದು ಯಾರೂ
ನಿರೀಕ್ಷಿಸಿರಲಿಲ್ಲ. ವರ್ಷಾಂತ್ಯದಲ್ಲಿ ತನಗೆ ದೊರೆತ ಕೊನೆಯ ಗಿರಾಕಿ
ಎಂದೋ ಏನೋ ವಿಷಮಜ್ವರ ಆಕೆಗೆ ಅಂಟಿಕೊಂಡಿತು. ಏಳನೆಯ
ದಿನ, ಒಂದುರೂಪಾಯಿ ಫೀಸಿನ ಸಮೀಪದ ಡಾಕ್ಟರು ಬಂದು
ನೋಡಿದರು.
ಹೆರಿಗೆಯ ಕೊಠಡಿಯಲ್ಲಿ ಜ್ವರ ಪೀಡಿತಳಾಗಿದ್ದ ಲಲಿತೆಯನ್ನು ಮಲಗಿ
ಸಿದ್ದರು. ಆ ಕೊಠಡಿಯಿಂದ ಸರಸಮ್ಮನೊಡನೆ ಹೊರಬಂದ ಡಾಕ್ಟರು
ಗೋಡೆಯ ಮರೆಯಲ್ಲಿ ನಿಂತು ಹೇಳಿದರು :
"ಟೈಫಾಯ್ಡ್. ದುರ್ಲಕ್ಷ್ಯ ಮಾಡ್ಬೇಡಿ. ಇಲ್ಲಿ ಎಷ್ಟೆಂದರೂ ಆರೈಕೆ
ಸರಿಯಾಗೊಲ್ಲ. ಆಸ್ಪತ್ರೆಗೆ ಸೇರಿಸಿ"
ಅಷ್ಟುಹೇಳಿ, ಫೀಸು ತೆಗೆದುಕೊಳ್ಲದೆಯೇ ಡಾಕ್ಟರರು ಹೊರಟು
ಹೋದರು ಸರಸಮ್ಮ ತಡಮಾಡಲಿಲ್ಲ. ಕಾರ್ಯದರ್ಶಿನಿಯ ಮನೆಗೆ
ಹೋಗಿ ಬಂದರು. ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಜನರಲ್ ವಾರ್ಡಿನಲ್ಲಿ
ಒಂದು ಬೆಡ್ ದೊರಕಿಸಿಕೊಂಡರು. ಆದರೆ ಆ ಹೊತ್ತಿಗೆ ಆಂಬ್ಯುಲೆನ್ಸ್
ಕಾರ್ ಸಿಗಲಿಲ್ಲ. ಕುಂಟುಕುದುರೆಯ ಜಟಕಾಗಾಡಿಯಲ್ಲಿ, ಜ್ವರದಗುಂಗಿನಲ್ಲಿ
ಏನೇನೋ ಒಂಟಿಸದದ ಮಾತುಗಳನ್ನಾಡುತ್ತಿದ್ದ ಲಲಿತೆಯನ್ನು ಆಸ್ಪತ್ರೆಗೆ
ಒಯ್ಯ ಬೇಕಾಯಿತು. ಸರಸಮ್ಮ, ತುಂಗಮ್ಮ ಮತ್ತು ಜಲಜ ಮೂವರೂ
ಆಸ್ಪತ್ರೆಯ ತನಕ ಹೋದರು.
ಅಭಯಧಾಮದ ಹುಡುಗಿ ತಾನೆ? ಚೆನ್ನಾಗಿ ದುಡ್ಡು ಖರ್ಚುಮಾಡ
ಬಲ್ಲವರಿಗೇ ಒಮ್ಮೊಮ್ಮೆ ಬೆಡ್ ಸಿಗದೇ ಹೋಗುವುದುಂಟು. ಅದರಲ್ಲಿ ಈ
ಹುಡುಗಿಗೆ?
ಅಂತೂ ದೊರಕಿತು, ಮಂಚದಮೇಲೂ ಕೆಳಗೆ ನೆಲದಲ್ಲೂ ರೋಗಿ