ನೇಂದ್ರಿಯಕ್ಕೆ ತಿಳಿಯುವದು ರಸವು. ಚರ್ಮೇಂದ್ರಿಯಕ್ಕೆ ವಿಷಯವಾಗುವದು ಸ್ಪರ್ಶವು. ವಿಷಯಗಳನ್ನು ಉಪಯೋಗಿಸಿಕೊಳ್ಳುವ ಚಾತುರ್ಯವು ಮನುಷ್ಯಪ್ರಾಣಿಗೆ ವಿಶೇಷ ವಾಗಿರುತ್ತದೆ; ಆದ್ದರಿಂದ ಇತರ ಪ್ರಾಣಿಗಳಿಗಿಂತಲೂ ಮನಷ್ಯನನ್ನು ವಿಷಯಗಳು ಬಹು ತೀವ್ರವಾಗಿ ಅಂಟಿಕೊಳ್ಳುತ್ತವೆ. ಮನುಷ್ಯನು ಒಂದು ಸಾರೆ ವಿಷಯಗಳಲ್ಲಿ ಪ್ರವೇಶಮಾಡಿದರೆ ಸಾಕು. ಅವನಿಗೆ ಅವನ್ನು ಒದ್ದುಗೆದು ಹೊರಗೆ ಬರುವದಕ್ಕೆ ಆಗು ವದೇ ಇಲ್ಲ. ವಿಷಯಗಳಲ್ಲಿ ಏನೂ ಸ್ವಾರಸ್ಯವಿಲ್ಲದಿದ್ದರೂ ಚಿಂತೆಯಿಲ್ಲ, ಅವನ್ನು ಬಿಡುವಹಾಗಿಲ್ಲ. ಒಂದು ನಾಯಿಯು ಹಾದಿಹಿಡಿದು ಹೋಗುವಾಗ ಒಂದು ಎಲವು ಕಣ್ಣಿಗೆ ಬಿದರೆ ಅದನ್ನು ಮಾಂಸಭಮದಿಂದ ಬಾಯಿಯಲ್ಲಿ ಕಟ್ಟಿಕೊಳ್ಳುತ್ತದೆ. ಆ ಮೇಲೆ ಆ ನಾಯಿಗೆ ಆ ಎಲವನ್ನು ಬಿಡುವದಕ್ಕೆ ಆಗುವದಿಲ್ಲ. ಎಲ್ಲಿ ಹೋದರೂ ಆ ಎಲವನ್ನು ಬಾಯಿಯಲ್ಲಿ ಕಚ್ಚೇಇರುತ್ತದೆಂಬದು ಎಲ್ಲರಿಗೂ ಅನುಭವದ ಸಂಗತಿಯೇ ಇರುತ್ತದೆ. ಅದು ಯಾಕೆ ಬಿಡುವದಿಲ್ಲವೆಂದರೆ, ತನ್ನ ಬಾಯಿಯಲ್ಲಿರುವ ಮಧುರವಾದ ಜೊಲ್ಲು ಆ ಏಲವಿನ ಮೇಲೆ ಬಿದ್ದ ಕೂಡಲೆ ಆ ಎಲವು ಒಂದು ಪ್ರಕಾರವಾಗಿ ಅದಕ್ಕೆ ರುಚಿಸುತ್ತದೆ, ಬಾಯಿಯಲ್ಲಿ ಕಚ್ಚಿರುವದರಿಂದ ಯಾವಾಗಲಾ ಜೊಲ್ಲಿನಿಂದ ಅದು ಆರ್ದ್ರವಾಗಿರುತ್ತದೇ. ಅದನ್ನು ಇದು ಮತ್ತು ಮತ್ತು ನೆಕ್ಕುತ್ತಲೇ ಇರುತ್ತದೆ. ಈ ದೃಷ್ಟಾಂತದಿಂದ ಮನುಷ್ಯನು ನೀರಸವಾದ ವಿಷಯಗಳಲ್ಲಿ ತೊಡಗಿಕೊಂಡು ಪರಮಾರ್ಥ ವನ್ನು ಮರೆತುಬಿಡುತ್ತಾನೆ. ಆ ನಾಯಿಯು ಬಾಯಿಯಲ್ಲಿ ಎಲ್ಲವನ್ನು ಕಚ್ಚಿಕೊಂಡು ಆಹಾರ-ವಿಹಾರಗಳನ್ನು ಹ್ಯಾಗೆ ಬಿಡುತ್ತದೆಯೋ, ಹಾಗೆ ಮನುಷ್ಯನು ಪರಮಾರ್ಥವನ್ನು ಮರೆತು ವಿಷಯಭೋಗದಲ್ಲಿ ತೊಡಗುವನು. ಈ ವಿಷಯಗಳು ಯಾವಾಗಲೂ ಹಾನಿ ಕಾರಕಗಳೆಂಬ ಬಗ್ಯೆ ಪೌರಾಣಿಕರು "ಕುರಂಗಮಾತಂಗ ಪತಂಗಭೃಂಗ ವಿಾನಾಹತಾಃ ಪಂಚಭಿರೇವಪಂಚ | ಏಕಃಪ್ರಮಾದೀ ಸಕಥಂ ನ ಹನ್ಯತೇ ಯಃ ಸೇವತೆ ಪಂಚಭಿರೇವ ಪಂಚ |"ಅಂದರೆ “ ಕುರಂಗವೆಂದರೆ ಎರಳೆಯು, ಇದು ಶಬ್ದವೆಂಬ ವಿಷಯವನ್ನು ತನ್ನ ಶ್ರೋತ್ರೇಂದ್ರಿಯದಿಂದ ಅನುಭವಿಸಿ ನಾಶವನ್ನು ಹೊಂದುವದು. ಅದು ಹೇಗೆಂದರೆ- ಒಬ್ಬಚಿಗರಿಬೇಟೆಗಾರನು ಚಿಗರಿಗಳನ್ನು ಹಿಡಿಯುವದರಸಲುವಾಗಿ ತನ್ನ ಬಲೆಯನ್ನು ಸುತ್ತ ಲೂ ಬೀಸಿಕೊಂಡು, ದಿವ್ಯವಾದ ಗಾನವನ್ನು ಮಾಡುತ್ತಕುಳಿತಿರುತ್ತಾನೆ. ಅಷ್ಟರಲ್ಲಿ ಒಂದು ಜಿಂಕೆಯು ಆ ದಿವ್ಯವಾದ ಗಾನದಲ್ಲಿ ಲುಬ್ಬವಾಗಿ ಆ ಬಲೆಯಲ್ಲಿ ಬಿದ್ದು ಸಾಯು ತ್ತದೆ. ಮಾತಂಗವೆಂದರೆ ಆನೆಯು, ಇದು ಸ್ಪರ್ಶವೆಂಬ ವಿಷಯದಿಂದ ಹಾನಿಯನ್ನು ಹೊಂದುವದು. ಅದು ಹೇಗಂದರೆ, ಆನೆಯನ್ನು ಹಿಡಿಯುವದರಸಲುವಾಗಿ ತರುಣವಾದ ಹೆಣ್ಣಾನೆಯನ್ನು ಗಂಡಾನೆಯಹತ್ತರ ಒಯ್ಯುತ್ತಾರೆ. ಆಗ ಆ ಗಂಡಾನೆಯು, ಹಣ್ಣಾನೆಯ ಮೈಮೇಲೆ ತನ್ನ ಸೊಂಡಿಲವನ್ನಾಡಿಸಿ ಆ ಸ್ಪರ್ಶಕ್ಕೆ ಮೋಹಿತವಾಗಿ ಸಿಕ್ಕು ತನ್ನ ಸ್ವಾತಂತ್ರ್ಯ ವನ್ನು ಕಳೆದುಕೊಳ್ಳುತದೆ; ಆದ್ದರಿಂದ ನಾನಾವಿಧವಾದ ಭಂಗವನ್ನು ಹೊಂದುತ್ತದೆ. ಪತಂಗವೆಂದರೆ ದೀಪದಹುಳವು. ಇದು ದೀಪವನ್ನುನೋಡಿ ದಿವ್ಯವಾದ ಫಲವೆಂಬ ಭ್ರಾಂತಿ ಯಿಂದ ದೀಪದಮೇಲೆ ಬಿದ್ದು ಸತ್ತುಹೋಗುತ್ತದೆ. ಭ೦ಗವೆಂದರೆ ಗುಂಗೀಹುಳವು. ಇದು
ಪುಟ:ಭವತೀ ಕಾತ್ಯಾಯನೀ.djvu/೬೩
ಗೋಚರ