ಪುಟ:ಕೋಹಿನೂರು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ ೩೫ wwmwwmwwwmmam ಸ್ವರದಿಂದ ಸಭಾಸದರನ್ನು ಕುರಿತು, ಒಕ್ಕಣೆ ಒಕ್ಕಣೆಯಾಗಿ ಈಸರಿ, ಹೇಳಿ ದನು :- ಮುಸಲಮಾನ ಉಮ್ರಾಗಳಿರಾ ! ಸನಾತನಮಹಮ್ಮದೀಯ. ಧರ್ಮಪ್ರಚಾರಕರಾ ! ನಾವು ಇಷ್ಟು ದಿನದವರೆವಿಗೂ ಸಮಗ್ರಭಾರತ ವರ್ಷ ದಲ್ಲಿ ಮಹಮ್ಮದೀಯ ಧರ್ಮದ ಏಕಾಧಿಪತ್ಯವನ್ನು ವಿಸ್ತರಿಸಲು ಶ್ರಮಿಸಿ ಜರು ಗಿಸಿದ ಪ್ರಯತ್ನಗಳೆಲ್ಲಾ, ಈ ದಿನ ನಮಗೆ ಬಂದಿರುವ ಸುದ್ದಿಯು ನಿಜವಾಗಿ ದ್ದರೆ, ಗಾಳಿಯ ಮೈಯಲ್ಲಿ ಕತ್ತಿಯನ್ನು ಬೀಸಿದಹಾಗೆ ವಿಫಲವಾಗಿರುವುವು ! ಸೇನಾಪತಿ ಅಫಜುಲಖಾನನು ಹೇಳುವುದರಲ್ಲಿ, ಒಬ್ಬ ವೃದ್ದ ಮುಸಲಮಾನ ಫಕೀರನು ಮುಸಲಮಾನ ಧರ್ಮದ್ರೋಹಿಗಳಾದ ಹಿಂದೂಗಳ ಪಕ್ಷವನ್ನು ವಹಿಸಿ ಬಹುಸಂಖ್ಯಕ ಮುಸಲಮಾನ ಸೇನೆಯವರ ಪ್ರಾಣಸಂಹಾರ ಮಾಡಿದ ನೆಂದು ತಿಳಿಯಬರುತ್ತದೆ. ಆದುದರಿಂದ, ಸೇನಾಪತಿಯು ಆ ಮುಸಲಮಾನ ಫಕೀರನ ವಿಷಯವಾಗಿ ತಕ್ಕ ರಾಜದಂಡನೆಯು ವಿಧಿಸಲ್ಪಡಬೇಕೆಂದು, ಬೇಡಿ ಕೊಳುತ್ತಾನೆ, ಆದರೆ ನಾವು ಅಂತಹ ಅಪವಾದವನ್ನು ನಂಬಲಾರೆವು, ಅಷ್ಣ ಜುಲಖಾನನು ತಂದಿರುವ ಅಪವಾದದ ಸುದ್ದಿಯನ್ನು ತೃಪ್ತಿಕರವಾಗಿ ದೃಢಪಡಿಸಿ ಕೊಡದೆ ಹೋದರೆ ನಾವು ಅದನ್ನು ಅಮೂಲಕವಾದ ಅಸತ್ಯವೆಂದು ಅವಜ್ಞೆ ಮಾಡುವೆವು.೨೨ ವೃದ್ಧನಾಗಿದ್ದ ಸಭಾಸದನೊಬ್ಬನು ಕೋಷಭರಿತನಾಗಿ ಎದ್ದು ನಿಂತು, ೯ ಜಹಾಪನಾ ! ಇದು ಅಸಂಭವ ! ಸ್ವಯಂ ಮಹಮ್ಮದರ ಅವತಾರವಾಗಿ ಮೂರ್ತಿಗೊಳಿಸಿರುವ ಆಲಂಗೀರಬಾದಷಹರ ರಾಜ್ಯದಲ್ಲಿ ಫಕೀರನು ಕಾಫರರ ಸಂಗಡ ಸೇರಿರುವನೆಂಬುವುದನ್ನು ನಾವು ಸ್ವಷ್ಟ ದಲ್ಲಿ ಯೂ ನಂಬಲಾರೆವು, ಅಫ ಜುಲಖಾನನು ತಕ್ಕ ಪ್ರಮಾಣಗಳನ್ನು ತೋರಿಸಲಿ-ಇಲ್ಲವಾದರೆ ಅವನ ವಿಚಾ ರದಲ್ಲೇ ರಾಜದಂಡಾಜ್ಞೆಯು ಆವಶ್ಯಕವಾಗಿರುವುದು ' ಎಂದು ಹೇಳಿದನು | ಅಫಜುಲಖಾನನು ಕೈಮುಗಿದುಕೊಂಡು, “ ಆ ಫಕೀರನೇ ಸಭಾಸ್ಥಳ ದಲ್ಲಿ ರುವನು ; ಅವನನ್ನೇ ಕೇಳಬಹುದು ೨೨ ಎಂದು ಹೇಳಿದನು. ಅವರಂಗಜೇಬನು ನಗುಮುಖನಾಗಿ, ಫಕೀರನನ್ನು ನೋಡಿ, “ ತಾವು ಮುಂದಾಗಿ ಬಂದು ಇಲ್ಲಿ ಸೇರುವ ಸಭಾಸದರ ಸಮೀಪದಲ್ಲಿ ನಿಂತು ಫಕೀ. ರೆಂಬ ಪವಿತ್ರವಾದ ಹೆಸರಿಗೆ ಬಂದಿರುವ ಘೋರವಾದ ಕಳಂಕವನ್ನು ಹೋಗ ಲಾಡಿಸೋಣಾಗಲಿ ?” ಎಂದು ಹೇಳಿದನು,