೬ ಹಿಸುಕು mmmmmmmmmwwwmmmw ಈ ಫಕೀರಸು ಮುಂದಾಗಿ ಬಂದು ಸಮಾಜನ ರತ್ನ ಸಿಂಹಾಸನದೆದುರಿಗೆ ನಂತುಕೊಂಡನು. ಸಭಾಸದರೆಲ್ಲರೂ ಅನಿಂದ್ಯ ವಾದಾ ಕಾಂತಿಯನ್ನೂ ಅಪೂ ರ್ವವಾದಾ ಯೋಗಿಯ ಮೂರ್ತಿಯನ್ನೂ ದೃಷ್ಟಿಸಿ ನೋಡುತಿದ್ದರು. ಅವನ ಹಾಸಮಯವಾದ ಮುಖಮಂಡಲದಲ್ಲಿ ಬಿಳಿದಾದ ಸ್ಮಶುರಾಶಿಯ ಗಾಳಿಯ ಸ್ಪರ್ಶದಿಂದ ಅಲ್ಲಾಡುತಿದ್ದಿತು. ಶುಭ್ರವಾದ ಜಟಾಜೂಟವು ದೀರ್ಘವಾದ ಅವನಾ ವೀರದೇಹವನ್ನು ಅರ್ಧ ಮುಚ್ಚಿಕೊಂಡಿದ್ದಿತು, ಕಣ್ಣುಗಳಲ್ಲಿ ಉಚ್ಚ ಲವಾದ ಅಪಾರ್ಥಿವಕಾಂತಿ ವಿಸ್ತ್ರತಲಲಾಟವು ಸ್ವರ್ಗಿಯ ಜ್ಞಾನಗೌರವ ದಿಂದ ತೇಜಃ ಪುಂಜವಾಗಿ ಕಣ್ಮಳಿಸುತಿದ್ದಿತು. ಫಕೀರನು ತೇಜೋಮಯ ವಾದ ಕಟಾಕ್ಷದಿಂದ ಸಭಾಸದರಕ್ಷಿಸಿ ಸಾಲವೃಕ್ಷದಹಾಗಿದ್ದ ದೀರ್ಘ ವಾದ ಬಾಹುಗಳನ್ನು ಮೇಲಕ್ಕೆತ್ತಿ ತಾರಸ್ವರದಿಂದ ಹೇಳತೊಡಗಿದನು :- << ಕೇಳೋಣಾಗಲಿ, ಭಾರತಸಮಾಜನ ಸಭಾಸದರುಗಳಿರಾ ! ಸೇನಾಪತಿ ಅನ ಜುಲಾನನು ಹೇಳುವುದೆಲ್ಲಾ ನಿಜವಾದುದು, ಎಂಭತ್ತು ವರ್ಷಕಾಲ, ದೇವ ನಾದ ಮಹಮ್ಮದನ ಪವಿತ್ರವಾದ ಉದ್ದೇಶಗಳನ್ನೆಲ್ಲಾ ಅಧ್ಯಯನ ಮಾಡಿ ಅದ ರಿಂದ ಕಲಿತಿರುವ ಮಹಾಸವಿತ್ರವಾದ ನೀತಿಗಳನ್ನ ನುಸರಿಸಿ, ಅದೂರದರ್ಶಿಯಾ ಗಿಯೂ ನೀಚಾಶಯನಾಗಿಯ ಸ್ವಾರ್ಧನರನಾಗಿಯೂ ಇರುವ ಈ ಬಾದಷ ಹನ ನಿಷ್ಟುರವಾದ ರಾಜನೀತಿಗಳಿಗೆ ವಿರುದ್ದವಾಗಿ, ಅಸ್ತ್ರಧಾರಣೆಯನ್ನು ಮಾಡಿ ದೆನು. ಅಮಿತವಿಕ್ರಮಶಾಲಿಯಾದ ಮೊಗಲಸಮಾಜನಿಗೆ ವಿರುದ್ದವಾಗಿ, ನನ್ನ ಸಾಗಿರುವ ಸಂಸಾರತಾಗಿಯಾಗಿ ಹೀನಬಲವುಳ್ಳ ಫಕೀರನು ಮಾಡುವ ಬಲಸ್ರ ಯೋಗವು ಮದಿಸಿದ ಆನೆಯ ಸೊಂಡಿಲದ ಮೇಲೆ ಸೊಳ್ಳೆಯ ಕಡಿತದನಾಗಿರು ವುದು. ಆದರೆ ಈ ನಶ್ವರವಾದ ನರದೇಹದಲ್ಲಿ ಎಷ್ಟು ದಿನದತನಕ ರಕ್ತ ಸಂಚಾ ಲಸವಿರುವುದೋ, ಈ ಬಾಹುಗಳಲ್ಲಿ ಅಲ್ಪವಾದ ಶಿಶುಗಿರುವಷ್ಟು ಶಕ್ತಿಯಿರು ವುದೋ, ಅದುವರೆವಿಗೂ ನಾನು ಈಗಿನಹಾಗೆ ಪಾಸಕ್ಕೂ ಪುಣ್ಯ ಕ್ಕೂ ನಡೆ ಯುವ ಯುದ್ದದಲ್ಲಿ ಪಾಪಕ್ಕೆದುರಾಗಿ ನಿಂತು ಪ್ರಾಣದಮೇಲೆ ಮಮತೆಯಿಲ್ಲದೆ ಯುದ್ಧ ಮಾಡುತ್ತಿರುವೆನು, ಇದು ನನಗೆ ಇಹವರ ಲೋಕಗಳಿಗೆ ಸಾಧನವಾದ ಧರ್ಮವಾಗಿರುವುದು. ಇದು ನನ್ನ ಇಷ್ಟ ಗುರುದ ದೇವ ಮಹಮ್ಮದನ ಸತ್ಯ ವಾದ ಸನಾತನ ಧರ್ಮದಲ್ಲಿ ಸಾರವಾದ ಉಸದೇಶವಾಗಿರುವುದು, ೨ ಸಭಾಸದರ ಮಂಡಲಿಯು ಆಶ್ಚರ್ಯದಿಂದ ಸ್ತಂಭಿತವಾಯಿತು !* ಬಾದ ಸಹಸು ಕ್ಷಣಮಾತ್ರ ಸುಮ್ಮನಿದ್ದು ಮೆಲ್ಲಮೆಲ್ಲನೆ ಗಂಭೀರಸ್ವರದಿಂದ, “ ಕೇಳು,
ಪುಟ:ಕೋಹಿನೂರು.djvu/೪೪
ಗೋಚರ