20
ಲ್ಪನ ಸೇವೆ ಸತ್ಕಾರಗಳನ್ನು ಸ್ವೀಕರಿಸಬೇಕು. ತಮಗಿಂತಲೂ ಉತ್ತಮರಾದ ಅತಿಥಿಗಳು ನನಗೆಂದು ದೊರಕುವರು? ಇಂದು ನನ್ನ ಜನ್ಮವು ಸಫಲವಾಯಿತು. ದಯಮಾಡಿಬನ್ನಿರಿ. "ಎಂದು ವಿನಯದಿಂದ ಬೇಡಿ ಕೊಂಡನು, ಭೋಜನು ಆಪಾರ್ಥನೆಯಂತೆ ತನ್ನ ಪರಿವಾರ ಸಹಿತ ಭೂಮಿಯನ್ನು ಪ್ರವೇಶಿಸಿದನು. ಬ್ರಾಹ್ಮಣನು ಆತನನ್ನಿದಿರ್ಗೊಳ್ಳುವ ನಿಮಿತ್ತ ಗದ್ದುಗೆಯೊಂದಿಳಿದನು. ಸಂಗಡಲೆ ಅವನ ಬುದ್ದಿಯು ಬೇರೆ ಯಾಯಿತು. ಅವನು ಮಹಾರಾಜರೇ, ತಾವು ಹೀಗೆ ಬ್ರಾಹ್ಮಣನ ಭೂಮಿಗೆ ಪ್ರವೇಶಿಸಿ, ಅವನಬೆಳೆ ಯನ್ನು ಹಾಳುಮಾಡುವುದು ಉಚಿತವೆ? ಎಂದನು.
ಭೋಜರಾಜನು ಇಷ್ಟು ಬೇಗನೆ ಬ್ರಾಹ್ಮಣನ ಸ್ವಭಾವವು ಹೇಗೆ ವ್ಯತ್ಯಾಸವಾಯಿತೆಂದು ಆಶ್ಚರ್ಯಪಡುತ್ತಾ ಹಿಂದಡಿಯಿಟ್ಟನು. ಬ್ರಾಹ್ಮಣನೂ ಹಿಂದಕ್ಕೆ ಹೋಗಿ ಗದ್ದುಗೆಯನ್ನು ಹತ್ತಿದನು.ಒಡನೆಯೇ,ಅವನು ಹಿಂದಿನಂತೆ "ಹೇ ಮಹಾಸ್ವಾಮಿ, ನನ್ನ ಪ್ರಾರ್ಥನೆಯನ್ನು ಹೀಗೆ ನಿರಾಕರಿಸ ಬಹುದೆ? ನನ್ನ ಭೂಮಿಯು ಧಾನ್ಯ ಸಸ್ಯ ಫಲ ಜಲ ಸಮೃದ್ಧವಾಗಿರಲು, ಈ ಮಧ್ಯಾಹ್ನ ಕಾಲದಲ್ಲಿ ತಾವೂ ತಮ್ಮ ಪರಿಜನರೂ ಈ ಮಾರ್ಗ ದಲ್ಲಿ ಉಪವಾಸ ತಿರುಗ ಬೇಕೆ?" ಎಂದನು.
ಭೋಜರಾಜನು ತನ್ನ ಊಹೆಯು ಸರಿಯೆಂದು ನಿಶ್ಚಯಿಸಿದನು . ಆದರೂ,ತಾನೇ ಆ ವೈಚಿತ್ರ್ಯವನ್ನು ಆನುಭವಿಸಿ ತಿಳಿಯ ಬೇಕೆಂದು, ಆ ಬ್ರಾಹ್ಮಣನನ್ನು ಗ