ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

21

ದ್ದುಗೆಯಿಂದಿಳಿಸಿ, ತಾನೇ ಆಸ್ಥಳದಲ್ಲಿ ಕೂತನು. ಆಹಾ! ಆತನ ಆಂತರ್ಯವಾದ ಅನುಭವಗಳನ್ನು ಹೇಗೆ ತಾನೆ ವರ್ಣಿಸಬಹುದು! ತತ್‌ಕ್ಷಣವೇ ಆತನ ಮನಸ್ಸು ನಿರ್ಮಲವಾಯಿತು. ಆತ ಕೊರತೆಗಳವು ಮಾಯವಾದವು, ತನ್ನ ರಾಜ್ವದಲ್ಲಿ ನಡೆಯುತಲಿದ್ದ ನ್ಯಾಯಾನ್ಯಾಯಗಳೆಲ್ಲವು ಆತನಿಗೆ ಸ್ಪಷ್ಟವಾಗಿ ಗೊತ್ತಾದವು ತನ್ನ ಪ್ರಜೆಗಳಲ್ಲಿ ಸಜ್ಜನರು ಯಾರು, ದುರ್ಜನರುಯಾರು ಎಂಬುದು ಆತನಿಗೆ ಸಂದೇಹವಿಲ್ಲದಂತೆ ತಿಳಿದು ಬಂದಿತು. ಪ್ರಜೆಗಳ ಕಷ್ಟಗಳನ್ನು ಹೋಗಲಾಡಿಸಿ, ಸುಖವನ್ನು ಹೆಚ್ಚಿಸಿ, ಲೋಕಕ್ಕೆ ಉಪಕಾರ ಮಾಡಬೇಕೆಂಬ ಕುತೂಹಲವು ಆತನಲ್ಲಿ ಕ್ಷಣೇ ಕ್ಷಣೆ ಬಲವಾಯಿತು. ವಾಚಕರೇ, ವಿಕ್ರಮಪೀಠದ ಮಹಿಮೆಯನ್ನು ನೋಡಿದಿರಾ?

ಭೋಜನು ಏನಾದರೂ ಮಾಡಿ ಅಸಿಂಹಾಸನವನ್ನು ಸ್ವಾಧೀನಪಡಿಸಿಕೊಳ್ಳ ಬೇಕೆಂದು ನಿರ್ಧರಿಸಿದನು. ಆ ಬಡಬ್ರಾಹ್ಮಣನಿಗೆ ಬೇಕಾದಷ್ಟು ಹಣವನ್ನೂ ವಸ್ತು ವಾಹನಗಳನ್ನೂ ಕೊಟ್ಟು ತನ್ನ ಅಭಿಪ್ರಾಯವನ್ನು ತಿಳಿಸಿದನು. ಅವನು ತನ್ನ ಆಶೆಯೆಲ್ಲವೂ ತೀರಿ ಹೋಯಿತೆಂದು ಆನಂದಿಸಿ, ಭೋಜನ ಇಷ್ಟಕ್ಕೆ ಸಮ್ಮತಿಸಿದನು. ರಾಜನ ಇಷ್ಟವು ನೆರವೇರುವುದೊಂದು ಕಸ್ಟವೆ? ಬೇಗನೆ ಒಡ್ಡರು ಬಂದು, ಗುದ್ದಲಿ ಹಾರೆಗಳನ್ನು ತಂದು, ಆ ಪ್ರದೇಶವನ್ನೆಲ್ಲಾ ಅಗೆದರು. ಸ್ವಲ್ಪ ಹೊತ್ತು ತೋಡಿದಮೇಲೆ, ಆದೋ! ನವರತ್ನ ಖಚಿತ