ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವ ಕೊಡಲು ; ಆಗ ರಾವಣನ ಚಿಕ್ಕಮ್ಮನ ಮಗನಾದ ಖರಾಸುರನು ಶೂರ್ಪನಖಿಸಹಿತ ನಾಗಿ ಹೊರಟು ಜನಸ್ಥಾನಕ್ಕೆ ಬಂದು ಅಲ್ಲಿ ಸುಖದಿಂದಿರುತ್ತಿದ್ದನು. ಅಲ್ಲಿ ಹಾಗಿರಲು ; ಇತ್ತ ರಾವಣನು ರಾಕ್ಷಸಕುಲದೇವತೆಯಾದ ಕಾಳಿಕಾ ದೇವಿಯಿರುವ ನಿಕುಂಭಿಳೆಯೆಂಬ ಉದ್ಯಾನವನಕ್ಕೆ ಬಂದು ನೋಡಲು ; ಅಲ್ಲಿ ಶತ ಯಪಸ್ತಂಭಗಳನ್ನು ನೆಟ್ಟು ಆಸುರಮಂತ್ರಪಠನ ಧ್ವನಿಯಿಂದ ಕೂಡಿ ಆಶ್ಚರ್ಯ ವಾಗಿ ಶೋಭಿಸುತ್ತಿರುವ ಯಾಗಮಂಟಪದಲ್ಲಿ ಕೃಷ್ಣಾಜಿನ ಜಟಾಭಸ್ಮ ರುದ್ರಾಕ್ಷಿಗ ಛನ್ನು ಧರಿಸಿಕೊಂಡು ಯಜ್ಞದೀಕ್ಷಾ ಬದ್ಧನಾಗಿ ಕುಳಿತು ತದುಚಿತ ಕರ್ಮಗಳನ್ನು ಮಾಡುತ್ತಲಿರುವ ತನ್ನ ಕುಮಾರನಾದ ಮೇಘನಾದನನ್ನು ನೋಡಿ ಹರ್ಷದಿಂದ ಬಿಗಿ ದಪ್ಪಿ ಮುದ್ದಿಸಿ-ಇದೇನು ನಿನ್ನ ಮಹೋದ್ಯೋಗವು 1 ಶೀಘ್ರವಾಗಿ ತಿಳಿಸೆನಲು ; ಆಗ ಕುಲಗುರುವಾದ ಶುಕ್ರಾಚಾರ್ಯನು ರಾವಣನನ್ನು ಕುರಿತು--ಎಲೈ ರಾಕ್ಷ ಸರಾಜನೇ, ನಿನ್ನ ಕುಮಾರನಾದ ಮೇಘನಾದನು ಅಶ್ವಮೇಧ ಅಗ್ನಿ ಷೇಮ ಆಪ್ಲೊ ರ್ಯಾಮ ಗೋಮೇಧ ವೈಷ್ಣವ ರಾಜಸೂಯವಾಜಪೇಯಗಳೆಂಬ ಸಪ್ತಯಜ್ಞಗ ಳನ್ನು ಮಾಡಿ ಮುಗಿಸಿ ಆ ಮೇಲೆ ಮಾಹೇಶ್ವರ ಯಜ್ಞವನ್ನು ಆರಂಭಿಸಿದನು. ವಿಧ್ಯ ನುಸಾರವಾಗಿ ಅದೂ ಮುಗಿಯುವ ಕಾಲದಲ್ಲಿ ತುಷ್ಟನಾದ ಪರಮೇಶ್ವರನು ಪ್ರತ್ಯ ಕ್ಷನಾಗಿ ಬಂದು ಧನುರ್ಬಾಣ ಶಕ್ತಿಗದಾ ಖಡ್ಡ ಕುಠಾರಾದ್ಯಾಯುಧಗಳನ್ನೂ ರಣದಲ್ಲಿ ಅರಿದುರ್ಜಯವಾದ ರಥವನ್ನೂ ಯುದ್ದ ಕಾಲದಲ್ಲಿ ತಾನು ವೈರಿಗಳಿಗೆ ಗೋಚರನಾಗದೆ ಇದ್ದು ಕೊಂಡು ಅವರ ಮೇಲೆ ಬಾಣಪ್ರಯೋಗವನ್ನು ಮಾಡುತ್ತ ಅವರನ್ನು ಜಯಿಸುವುದಕ್ಕೆ ಸಹಾಯಭೂತವಾದ ತಾಮಸಿಯೆಂಬ ಮಾಯಾವಿದ್ಯೆ ಯನ್ನೂ ನಿನ್ನ ಮಗನಿಗೆ ಕರುಣಿಸಿದನು, ವಂಶರತ್ನ ಪ್ರಾಯನಾದ ಈ ಮೇಘನಾದ ನಿಂದ ಮುಂದೆ ನಿನಗೆ ಸಕಲಕಾರ್ಯಸಿದ್ದಿಯ ಉಂಟಾಗುವುದು ಎಂದನು. ರಾವ ಣನು ಆ ಮಾತನ್ನು ಕೇಳಿ ನಸುನಗುತ್ತ..ಎಲೈ ಪುತ್ರನೇ, ನಮಗೆ ವಿರೋಧಿಪಕ್ಷದ ಲ್ಲಿರುವ ಇಂದ್ರಾದಿ ದೇವತೆಗಳನ್ನು ಸೇವಿಸಬಹುದೇ ? ನೀನು ಬುದ್ಧಿಯಿಲ್ಲದವನೆಂದು ಹೇಳಿ ಮಗನ ಕೈಯನ್ನು ಹಿಡಿದು ಕರೆದುಕೊಂಡು ವಿಭೀಷಣಾದಿಗಳೊಡನೆ ತನ್ನ ರಮ ನೆಗೆ ಬಂದು ಅವರವರ ಮನೆಗಳಿಗೆ ಹೋಗುವಂತೆ ಸರ್ವರಿಗೂ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಏಕಾಂತಸ್ಥಳದಲ್ಲಿ ರಾವಣನನ್ನು ಕುರಿತು.ಎಲೈ ಅಣ್ಣನೇ, ನೀನು ದಿಗ್ವಿಜಯವನ್ನು ಮಾಡಿದುದು ಸರಿಯಾದ ಕಾರ್ಯವೇ, ಆದರೆ ನೀನು ಪರಪತ್ನಿ ಯರನ್ನು ಬಲಾತ್ಕಾರದಿಂದ ಹಿಡಿದು ತಂದುದು ಮಾತ್ರ ಬಲು ಕೆಟ್ಟ ಕೆಲಸವು, ಆ ಸ್ತ್ರೀಯರ ದುಃಖಾತಿರೇಕವು ನಿನ್ನ ಪರಾಕ್ರಮಾತಿಶಯಕ್ಕೆ ಅಮಂಗಲ ಕರವಾಗಿಯ ಹಾನಿಕರವಾಗಿಯ ಸಂಭವಿಸಿದ ವರ್ತಮಾನವನ್ನು ಹೇಳುವೆನು ಕೇಳು. ಮಧುವೆಂಬ ದನುಜನು ಬಂದು ನಿನ್ನ ಸೇನೆಯನ್ನು ಕೊಂದು ಉಳಿದುದನ್ನು ಹಿಂದಟ್ಟಿ ಅಂತಃಪುರದೊಳಹೊಕ್ಕು ನಮ್ಮ ತಾಯಿಯ ತಂಗಿಯಾದ ಕುಂಭೀನಸಿ ಯನ್ನು ಹಿಡಿದು ಕೊಂಡು ಹೋದನು. ಮಾಡಿದವರಿಗೆ ಮಾಡಿದಷ್ಟೆಂಬ ಗಾಧೆಯು ನಿನ್ನಲ್ಲೇ ನಿದರ್ಶನಕ್ಕೆ ಬಂದಿತೆಂದು ಹೇಳಲು ; ರಾವಣನು-ಇದೇನು ಮಹಾಶ್ವ