ಪುಟ:ಕಥಾ ಸಂಗ್ರಹ - ಭಾಗ ೨.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಕಥಾಸಂಗ್ರಹ-೪ ನೆಯ ಭಾಗ ಸಂಧ್ಯಾಕಾಲದ ಕೆಂಪು ಬಣ್ಣದಿಂದಲೂ ಮೇಘಗಳ ಬಿಳುಪು ಕಪ್ಪು ಬಣ್ಣಗಳಿಂದಲೂ ಕೂಡಿದ ಅಂತರಿಕ್ಷವು ಗಗನ ಲಕ್ಷ್ಮಿ ಯು ಧರಿಸಿದ ಚಿತ್ರಾ೦ಬರದಂತಿರುವುದು. ಮೇಘಗಳ ಗುಂಪಿನತ್ತಣಿಂದ ಹೊರಟು ವಿವಿಧ ಕುಸುಮಗಳ ಸುಗಂಧವನ್ನು ಧರಿಸಿ ಸುಳಿಯುತ್ತಿರುವ ವಾಯುವು ಆಹ್ಲಾದಕರವಾಗಿದೆ. ಮೇಘವೆಂಬ ಕೃಷ್ಣಾಜಿನವನ್ನೂ ಜಲಧಾರೆಗಳೆಂಬ ಯಜ್ಞ ಸೂತ್ರವನ್ನೂ ಧರಿಸಿ ತಮ್ಮ ಗುಹೆಗಳೆಂಬ ಹೊಟ್ಟೆ ಗಳಲ್ಲಿ ತಡೆಯಲ್ಪಟ್ಟ ವಾಯುವೆಂಬ ಪ್ರಾಣವಾಯುಗಳುಳ್ಳ ಪರ್ವತಗಳು ಯೋಗಿಗಳ ಹಾಗೆ ಕಾಣುತ್ತಿವೆ. ಪರಹಿತಚನ್ನಿ ಗಳಾದ ಮೇಘಗಳು ತಮ್ಮ ಮಿ೦ಚೆ೦ಬ ಕಡೆ ಗಣೋಟದಿಂದ ಜಗತ್ತನ್ನು ನೋಡಿ ಪರೋಪಕಾರಕರಣದಲ್ಲಿ ನಮ್ಮ ಮುಂದಾರುಂಟು ಎಂದು ಆರ್ಭಟಿಸುತ್ತಿವೆಯೋ ಎಂಬಂತೆ ಘನಗರ್ಜಿತವುಂಟಾಗಿ ಸರ್ವಲೋಕಜೀವನ ವಾದ ರಸವನ್ನು ಸುರಿಸುತ್ತಿವೆಯೋ ಎಂಬಂತೆ ಎಡೆಬಿಡದೆ ಮಳೆಯನ್ನು ಸುರಿಸುತ್ತಿರು ವುವುವೋಮಮಾರ್ಗದಲ್ಲಿ ವಿಹರಿಸುತ್ತಿರುವ ವಿದ್ಯಾಧರಾಂಗನೆಯರ ಕಂಠಗತವಾದ ಮುತ್ತಿನ ಹಾರಗಳು ಮೇಘಗಳಿಗೆ ಸಿಕ್ಕಿದುದರಿಂದ ಹರಿದು ಮುತ್ತುಗಳು ಕೆಳಗೆ ಉದುರುತ್ತಿವೆಯೋ ಎಂಬಂತೆ ಆಕಾಶದಿಂದ ಆನೆಕಲ್ಲುಗಳು ಸುರಿಯುತ್ತಿವೆ. ಅಂತರಿಕ್ಷ ಮಾರ್ಗದಲ್ಲಿ ಬೆಳ್ಳಕ್ಕಿಗಳು ಗುಂಪುಗುಂಪಾಗಿ ಹಾರಿಯಾಡುತ್ತಿವೆ. ತಾವರೆ ದಂಟುಗ ಳನ್ನು ಎತ್ತಿ ಕೊಂಡು ಮಾನಸ ಸರಸ್ಸನ್ನು ಕುರಿತು ಹೋಗುತ್ತಿರುವ ಹಂಸಪಕ್ಷಿಗಳು ಬುತ್ತಿಯನ್ನು ಕಟ್ಟಿ ತೆಗೆದು ಕೊಂಡು ಹೋಗುತ್ತಿರುವ ಮಾರ್ಗಸ್ಟರನ್ನು ಹೋಲುತ್ತಿವೆ. ಚಾತಕ ಪಕ್ಷಿಗಳು ಬಾಯಿಯನ್ನು ತೆರೆದು ಕೊಂಡು ಆಕಾಶದಲ್ಲಿ ಹಾರುತ್ತ ನವಮೇಘ ಗಳ ಜಲಬಿಂದುಗಳನ್ನು ಕುಡಿದು ತೃಪ್ತಿ ಹೊಂದುತ್ತಿವೆ ಆನೆಗಳೆಲ್ಲಾ ಮಳೆಯಿಂದ ನೆನೆದುವುಗಳಾಗಿ ಮೈಯುಬ್ಬಿ ಸಂತೋಷದಿಂದ ಕೊಬ್ಬಿರುವುವು. ಹೊಳೆಗಳು ಕೆಂಪಾದ ಹೊಸನೀರುಗಳಿಂದ ತುಂಬಿ ಎರಡು ದಡಗಳನ್ನೂ ಅತಿಕ್ರಮಿಸಿ ಪ್ರವಹಿಸುತ್ತಿರುವುವು. ಭೂಮಿಯೆಲ್ಲವೂ ನೀರಿನಿಂದಲೂ ಕೆಸರಿನಿಂದಲೂ ವ್ಯಾಪ್ತವಾಗಿರುವುದರಿಂದ ಸಂಚರಿಸು ಇದು ಅಶಕ್ಯ ವೆಂದು ಜನರು ವಿಶೇಷವಾಗಿ ಹೊರಗೆ ಹೊರಡದೆ ಮನೆಯಲ್ಲೇ ವಾಸ ಮಾಡಿಕೊಂಡಿರುವರು, ಅರಸುಗಳು ಶತ್ರುರಾಜರ ಮೇಲೆ ದಂಡಯಾತ್ರೆಗೆ ಹೊರಡು ವುದನ್ನು ನಿಲ್ಲಿಸಿ ಸ್ವಂತರಾಜ್ಯದಲ್ಲೇ ಸುಖದಿಂದ ವಾಸಮಾಡಿಕೊಂಡಿರುವರು. ನವಿಲು ಗಳು ಮೇಘಧ್ವನಿಯನ್ನು ಕೇಳಿ ಸಂತೋಷದಿಂದ ಕೇಕಾರಾವವನ್ನು ಮಾಡುತ್ತ ದೀರ್ಘವಾದ ಗರಿಗಳನ್ನು ಮೇಲಕ್ಕೆತ್ತಿ ಅಗಲಿಸಿಕೊಂಡು ನರ್ತನ ಮಾಡುತ್ತಿರುವುವು. ಭಿಕ್ಷುಕರು ಗೊರಗುಗಳನ್ನೂ ಕಂಬಳಿಗಳ ಗೊಂಗಡಿಗಳನ್ನೂ ಹಾಕಿಕೊಂಡು ಕೊಡೆ ಗಳನ್ನು ಹಿಡಿದು ಮರದಾವುಗೆಗಳನ್ನು ಮೆಟ್ಟು ಕೊಂಡು ಭಿಕ ಕ್ಕೆ ತಿರುಗುತ್ತ ಬಹಳ ಕಷ್ಟ ಪಡುತ್ತಿರುವರು, ಪ್ರಜೆಗಳು ಸಂತೋಷದಿಂದ ಹೊಲಗಳನ್ನು ಉತ್ತು ಬಿತ್ತಿ ಹರತೆಗಳನ್ನು ಮಾಡಿ ಕಳೆ ಕೀಳುತ್ತೆ ವ್ಯವಸಾಯ ಕೃತ್ಯಗಳಲ್ಲಿ ತೊಡಗಿರುವರು, ಮತ್ತು ಗದ್ದೆಗಳಿಗೆಲ್ಲಾ ನೀರು ಕಟ್ಟಿ ಅಟ್ಟಕ್ಕೆಗಳನ್ನು ತು ಸೊಪ್ಪ ಗೊಬ್ಬರಗಳನ್ನು ತುಳಿದು ಮೊದಲು ಅಗೆ ಹಾಕಿದ್ದ ಪೈರುಗಳನ್ನು ಕಿತ್ತು ತಂದು ಕೆಸರ್ಗದ್ದೆ ಗಳಲ್ಲಿ ನೆಟ್ಟು ಆ ಪೈರುಗಳಿಗೆ ಹದವರಿತು ನೀರನ್ನು ಹಾಯಿಸುತ್ತ ಒಂದು ಗಳಿಗೆಯಾದರೂ ವಿರಾಮವಿ