ಸುಗ್ರೀವಸಖ್ಯದ ಕಥೆ ಜನರು ಹಾಸಿಕೊಳ್ಳುವದಕ್ಕೆ ಹಾಸಿಗೆಯನ್ನೂ ಹೊದೆದು ಕೊಳ್ಳುವುದಕ್ಕೆ ಹೊದಿಕೆ ಯನ್ನೂ ಪೂರ್ಣವಾಗಿ ಅಪೇಕ್ಷಿಸದೆ ಮರದ ನೆಳಲುಗಳಲ್ಲಿ ಮಲಗಿ ಸುಖವಾಗಿ ನಿದ್ರಿ ಸುತ್ತಿರುವರು. ಈ ಕಾಲದಲ್ಲಿ ನಾಲ್ಕು ಆಶ್ರಮಗಳವರೂ ತೊರೆ ಕೆರೆ ಕಟ್ಟೆ ಕೊಳ ಕಾಲುವೆಗಳಲ್ಲಿ ತ್ರಿಕಾಲಗಳಲ್ಲೂ ಬಹಳ ಸಂತೋಷದಿಂದ ಮೀಾಯುತ್ತಿರುವರು. ಈ ನಿದಾಘಕಾಲದ ಹಗಲುಗಳು ಬಲು ಚೆಲುವಾಗಿ ಭೋಗ್ಯವಾಗಿರುವುವು, ಪುಣ್ಯಾತ್ಮ ರಾದವರು ದಾರಿಗಳಲ್ಲಿ ಅರವಟ್ಟಿಗೆಗಳನ್ಸಿ ಡಿಸಿ ಪರಿಶುದ್ಧರ ಮನಸ್ಸಿನ ಹಾಗೆ ನಿರ್ಮಲ ವಾಗಿಯ ಚಂದ್ರಿಕೆಯಂತೆ ಶೀತಲವಾಗಿಯ ಸತ್ಯ ವಾಕ್ಯದಂತೆ ಮಧುರವಾಗಿಯ ಇರುವ ನೀರು ಗಳನ್ನೂ ನಿಂಬೆಯ ಹುಳಿ ಶುಂಠಿ ಏಲಕ್ಕಿ ಕರಿಬೇವು ಇವುಗಳಿಂದ ಕೂಡಿದ ನೀರ್ಮಜ್ಜಿಗೆಯನ್ನೂ ಎಳೆನೀರುಗಳನ್ನೂ ದಣಿದುಬಂದ ದಾರಿಗರಿಗೆ ಕುಡಿಯುವುದ ಕ್ರೋಸ್ಕರ ಕೊಟ್ಟು ಮೈಗಳಿಗೆ ಘನಸಾರಮಿಶ್ರವಾದ ಶ್ರೀಗಂಧವನ್ನು ಪೂಸಿ ಜಾಜಿ ಪಾದರಿ ಮೊದಲಾದ ಪುಷ್ಪಮಾಲಿಕೆಗಳನ್ನು ಹಾಕಿ ಅವರ ಮಾರ್ಗಾಯಾಸವನ್ನು ಪರಿ ಹರಿಸಿ ಆದರಿಸುತ್ತಿರುವರು. ಸೂರ್ಯಾಶ್ವಗಳು ಬಿಸಲಿನಿಂದ ಬಳಲಿ ರಥವನ್ನು ಎಳೆಯ ಲಾರದೆ ಮಂದವಾಗಿ ನಡೆಯುವುದರಿಂದಲೋ ಎಂಬಂತೆ ಈ ಕಾಲದ ಹಗಲುಗಳು ದೀರ್ಘವಾಗಿರುವುವು. ಹಕ್ಕಿಗಳು ಮಧ್ಯಾನ್ನ ಕಾಲದಲ್ಲಿ ಬಿಸಿಲಿನ ಬೇಗೆಗಂಜಿ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹೊರಡದಿರುವುವು, ಭೋಗಿಗಳಾಗಿ ಸ್ತ್ರೀಪು ರುಷರು ಉನ್ನತವಾದ ಗಿರಿಶಿಖರಗಳಲ್ಲೂ ವಾಯು ಸಂಚಾರಕ್ಕೆ ಯೋಗ್ಯವಾಗಿ ಕಿಟ ಕಿಗಳಿಂದ ಕೂಡಿರುವ ಮನೆಗಳಲ್ಲೂ ಉನ್ನತವಾದ ಉಪ್ಪರಿಕೆಗಳ ಅಗ್ರಪ್ರದೇಶ ಗಳಲ್ಲೂ ನದ್ಯಾದಿ ಜಲಸ್ಥಾನ ಸಮಿಾಪದಲ್ಲೂ ವಾಸಮಾಡುತ್ತಿರುವರು ಪ್ರಜೆಗಳು ತಮ್ಮ ತಮ್ಮ ದನಕರುಗಳನ್ನು ಅನೇಕವಾದ ವೃಕ್ಷಗಳ ನೆಳಲುಗಳಿಂದ ಕೂಡಿರುವ ತೊರೆಹಳ್ಳ ಮೊದಲಾದುವುಗಳ ದಡಗಳಲ್ಲಿ ಬಿಟ್ಟು ಕೊಂಡು ಹುಲ್ಲುಗಳನ್ನು ಮೇಯಿ ಸುತ್ತ ನೀರುಗಳನ್ನು ಕುಡಿಸುತ್ತ ದಗೆಯು ಹತ್ತಿದ ಹಾಗೆ ಕಾಪಾಡುತ್ತಿರುವರು. ಮತ್ತು ಈ ಕಾಲದ ಸಂಜೆಹೊತ್ತುಗಳಲ್ಲಿ ಶೈತ್ಯ ಸೌರಭ್ಯಮಾಂದ್ಯ ಯುಕ್ತವಾದ ಗಾಳಿಯು ಬೀಸುತ್ತ ಜನರನ್ನು ಸಂತೋಷಪಡಿಸುತ್ತಿರುವುದು, ಜನರು ಜಲಕ್ರೀಡೆ ಯಲ್ಲೂ ಚೀನಾಂಬರಗಳನ್ನು ಧರಿಸುವುದರಲ್ಲೂ ಬಹಳ ಆಸಕ್ತರಾಗಿರುವರು ಎಂದು ಹೇಳುತ್ತ ಜೈಷ್ಣಾಷಾಢಮಾಸಗಳನ್ನು ಕಳೆಯುತ್ತಿದ್ದನು. - ಆ ಮೇಲೆ ರಾಮನು ವರ್ಷತರ್ುವು ಬಂದುದನ್ನು ನೋಡಿ ಲಕ್ಷ್ಮಣನನ್ನು ಕುರಿತು-ಎಲೈ ತಮ್ಮ ನೇ, ಇಗೋ, ನೋಡು, ಆಕಾಶವು ಪರ್ವತಗಳಿಗೆ ಸಮಾನ ವಾಗಿರುವ ಕಪ್ಪಾದ ಮುಗಿಲುಗಳಿಂದ ವ್ಯಾಪ್ತವಾಗಿದೆ. ಮೊದಲು ಸೂರ್ಯಕಿರಣ ಗಳ ಮುಖಾಂತರವಾಗಿ ಸಮುದ್ರದ ಕಾ ರೋದಕವನ್ನು ಕುಡಿದು ಬಂದು ಭೂಲೋ ಕಕ್ಕೆಲ್ಲಾ ನಿರ್ಮಲೋದಕಗಳನ್ನು ಕೊಡುತ್ತಿರುವ ಮೇಘಗಳು ಸ್ವಲ್ನೋಪಕಾರವನ್ನು ಹೊಂದಿ ಮಹೋಪಕಾರವನ್ನು ಮಾಡುವ ಸುಜನರಂತೆ ಒಪ್ಪುತ್ತಿರುವುವು, ಸುಕೃತಿ ಗಳು ಸ್ವರ್ಗಲೋಕಕ್ಕೆ ಹೋಗುವುದಕ್ಕೋಸ್ಕರ ಪ್ರತ್ಯಕ್ಷವಾಗಿ ಕಾಣುತ್ತಿರುವ ಸೋಪಾನಮಂಡ್ತಿಯೋ ಎಂಬಂತೆ ಆಕಾಶದಲ್ಲಿ ಮೇಘಮಾಲೆಗಳು ವಿರಾಜಿಸುತ್ತಿರುವುವು.
ಪುಟ:ಕಥಾ ಸಂಗ್ರಹ - ಭಾಗ ೨.djvu/೮೫
ಗೋಚರ