ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಕಥಾಸಂಗ್ರಹ-೪ ನೆಯ ಭಾಗ ವಾಗಿ ನಿನಗೆ ಪಟ್ಟಾಭಿಷೇಕವನ್ನು ಮಾಡುವೆನೆಂದು ಹೇಳಿ ಮನೆಗೆ ಹೋಗುವುದಕ್ಕೆ ಅಪ್ಪಣೆಯನ್ನೀಯಲು ; ರಾಮನು ತಂದೆಗೆ ನಮಸ್ಕಾರವನ್ನು ಮಾಡಿ ಅಲ್ಲಿಂದ ಹೊರಟು ತನ್ನ ತಾಯಿಯಾದ ಕೌಸಲ್ಯಾದೇವಿಯ ಮನೆಗೆ ಬಂದು ಆಕೆಗೆ ಅಭಿವಂದಿಸಿ ತಂದೆಯು ಹೇಳಿದ ಮಾತುಗಳನ್ನು ಹೇಳಿ ಲಕ್ಷ್ಮಣಾದಿಗಳಿಗೂ ತಿಳಿಸಿ ತನ್ನರಮನೆಗೆ ತಂದನು. ಆ ಮೇಲೆ ದಶರಥನು ಪುರೋಹಿತರಾದ ವಶಿಷ್ಠರನ್ನು ಕರಿಸಿ-ಸ್ಯಾಮಿ ಪುರೋಹಿತರೇ, ನೀವು ಹೋಗಿ ನಾಳೆ ನಡೆಯುವ ಪಟ್ಟಾಭಿಷೇಕಮಹೋತ್ಸವಾಂಗ ಭೂತವಾಗಿ ವಿಧ್ಯುಕ್ತದಂತೆ ರಾಮನಿಗೂ ಸೀತೆಗೂ ಕಂಕಣಧಾರಣೆಯನ್ನು ಮಾಡಿ ಈ ರಾತ್ರಿ ಉಪವಾಸವ್ರತವನ್ನು ನಡಿಸುವಂತೆ ನೇಮಿಸಿ ಬರಬೇಕೆಂದು ಹೇಳಲು ; ವಶಿಷ್ಟರು ಹೋಗಿ ಅದೇ ರೀತಿಯಾಗಿ ಮಾಡಿಸಿದರು, ಮಂತ್ರಿಗಳು ರಾಜಾಜ್ಞೆಯಂತೆ ಆ ದಿವಸವೇ ನಗರಾಲಂಕಾರಾದಿ ಸರ್ವಸಂವಿಧಾನಗಳನ್ನೂ ಮಾಡಿ ಅಭಿಷೇಕಕಾ ರ್ಯಕ್ಕೆ ಬೇಕಾದ ಸೋಪಸ್ಕರಗಳನ್ನು ಸಿದ್ಧ ಮಾಡಿದರು.

ಆಗ ಕುಬೈಯ ದುರ್ವೃತ್ತಲೂ ಆಗಿ ಕೈಕೇಯಿಯ ಸೈರೇಯಾದ ಮಂಧರೆ ಎಂಬವಳು ರಾಮಪಟ್ಟಾಭಿಷೇಕದ ವರ್ತಮಾನವನ್ನೂ ಪ್ರಯತ್ನವನ್ನೂ ತಿಳಿದು ಅಸೂಯೆಯಿಂದ ಕೂಡಿದವಳಾಗಿ ತನ್ನ ಒಡತಿಯಾದ ಕೈಕೇಯಿಯ ಬಳಿಗೆ ಹೋಗಿ ರಾಮಪಟ್ಟಾಭಿಷೇಕಕ್ಕೆ ಎಷ್ಟು ಕಾರಿಗಳಾದ ಅನೇಕ ದುರ್ಬೋಧನೆಗಳನ್ನು ಬೋಧಿಸಿ ಆಕೆಯ ಮನಸ್ಸನ್ನು ಕೆಡಿಸಿ--ನಿನ್ನ ಗಂಡನಾದ ದಶರಥರಾಜನು ಮೊದಲು ದೇವಾಸುರಯುದ್ಧ ಕಾಲದಲ್ಲಿ ನಿನಗೆ ಎರಡು ವರಗಳನ್ನು ಕೊಟ್ಟಿರುವನಷ್ಟೇ, ನೀನು ಅವುಗಳನ್ನು ಸಮಯ ಬಂದಾಗ ಕೇಳುವೆನೆಂದು ಆಗಲೇ ಹೇಳಿದ್ದೀಯೆ, ನಾನು ಈ ವರ್ತಮಾನವನ್ನು ನಿನ್ನಿಂದಲೇ ಕೇಳಿದ್ದೇನೆ. ಈಗ ಆ ಎರಡು ವರಗಳಲ್ಲಿ ಒಂದಕ್ಕೆ ಫಲರೂಪವಾಗಿ ರಾಮನು ಜಟಾಧಾರಿಯಾಗಿ ನಾರ್ಮಡಿಯನ್ನು ೬ು ಪಟ್ಟಣವನ್ನು ಬಿಟ್ಟು ಹದಿನಾಲ್ಕು ಸಂವತ್ಸರಗಳ ವರೆಗೂ ವನವಾಸಮಾಡುವುದನ್ನೂ ಮತ್ತೊಂದು ವರಕ್ಕೆ ಭರತನಿಗೆ ಈ ಕೋಸಲರಾಜ್ಯಾಭಿಷೇಕ ಮಾಡುವುದನ್ನೂ ಕೇಳಿಕೊಳ್ಳುವವ ಳಾಗು. ಸತ್ಯವಚನವುಳ್ಳವನಾದ ಅರಸು ತಪ್ಪದೆ ಈ ರೀತಿಯಾಗಿಯೇ ನಡಿಸುವನು. ಹೀಗಾಗುವುದರಿಂದ ನಿನ್ನ ಮಗನಾದ ಭರತನು ಆರೂಢಮಲನಾಗಿ ಈ ಕೋಸಲ ರಾಜ್ಯವನ್ನು ಆಳುವನು. ನೀನೂ ನಿನ್ನನ್ನು ನಂಬಿದ ನಾವೂ ಸುಖವಾಗಿರಬಹುದು ಎಂದು ಹೇಳಲು ; ಆಕೆಯು ಆ ಮಾತಿಗೆ ಒಡಂಬಟ್ಟು ತನ್ನ ತಲೆಯ ಕೂದಲು ಗಳನ್ನು ಕೆದರಿಕೊಂಡು ಆಭರಣಗಳನ್ನೂ ಅಮೂಲ್ಯಾಂಬರಗಳನ್ನೂ ತೆಗೆದು ಬಿಸುಟು ಬಿಳಿಯ ಸೀರೆಯನ್ನುಟ್ಟು ಬಿಟ್ಟೋಲೆಗಳನ್ನಿಟ್ಟುಕೊಂಡು ಭೋಜನೋಪಚಾರಗಳನ್ನು ತ್ಯಜಿಸಿ ದುಸ್ಸಂಕಲ್ಪ ಮಯವಾದ ಚಿತ್ರವುಳ್ಳವಳಾಗಿ ನೆಲದ ಮೇಲೆ ಬಿದ್ದು ಕೊಂಡಿ ದ್ದಳು. ಆಗ ದಶರಥರಾಜನು ರಾಮನಿಗೆ ಪಟ್ಟಾಭಿಷೇಕೋತ್ಸವವಾಗುವ ಸಂತೋಷ ವಾರ್ತೆಯನ್ನು ತನ್ನ ಪ್ರಿಯಪತ್ನಿಯಾದ ಕೈಕೇಯಿಗೆ ತಿಳಿಸಬೇಕೆಂದು ಹರ್ಷದಿಂದ ಆಕೆಯ ಮನೆಗೆ ಬಂದು ಅವಳ ದುಸ್ಸಿತಿಯನ್ನು ನೋಡಿ ಪರಿತಪಿತನಾಗಿ ಆಕೆಯನ್ನು ಕುರಿತು-ಇದೇನು ಆಶ್ಚರ್ಯ ? ಹೀಗಿರುವುದಕ್ಕೆ ಕಾರಣವನ್ನು ತಿಳಿಸು ಎಂದು