ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦

ಯ ಗೋರಿಯನ್ನು ನೋಡಬೇಕೆಂಬ ಆಸೆಯಿಂದ ಅದರ ಹತ್ತಿರಕ್ಕೆ ಹೋದನು. ಅಲ್ಲಿ ಜಮೆಲೆಯು ಆತನನ್ನು ವಿಪತ್ತಿನಲ್ಲಿ ಯಾವ ರೀತಿ ಸಿಕ್ಕಿಸಿ ನರಳಾಡಿಸಿದಳೋ, ಅದನ್ನು ಅವನೆಂದಿಗೂ ಮರೆಯುವ ಹಾಗಿಲ್ಲ. ಶ್ರೀಶಚಂದ್ರನು ವಯಸ್ಸಿನಲ್ಲಿ ಬಹಳ ಚಿಕ್ಕವನಾಗಿದ್ದರೂ ಬಲು ಚತುರನು, ಆತನ ದೃಷ್ಟಿಯೂ ಬಹಳ ತೀಕ್ಷ್ಣವಾಗಿರುವುದು. ಇದನ್ನು ಒಪ್ಪಿಕೊಂಡೇ ತೀರಬೇಕು. ಅವನು ಜಮೆಲಯ ಗೋರಿಯ ಮೇಲೆ ಮಣ್ಣು ಕೆದಕಿದ್ದುದನ್ನು ನೋಡಿ ಅವನಿಗೆ ಏನೋ ಸಂಶಯವುಂಟಾಯಿತು. ಅನಂತರ ಅವನು ಅಲ್ಲಿ ಒಂದು ಕಾಗದದಚೂರು ಬಿದ್ದಿದುದ್ದನ್ನು ಕಂಡನು, ಅದನ್ನು ನೋಡಿ ಅವನಸಂಶಯವು ಮತ್ತಷ್ಟು ಹೆಚ್ಚಿತು. ಅವನು ಕಾಗದವನ್ನು ತೆಗೆದುನೋಡುವಲ್ಲಿ ಅದರಲ್ಲಿ ಜಮೆಲೆಯ ಹೆಸರು ಬರೆದಿದ್ದಿ ತ್ತು. ಆ ಕೂಡಲೇ ಅವನು ಕಾಗದದ ಬಾಕಿ ಚೂರುಗಳನ್ನು ಹುಡುಕಲಾರಂಭಿಸಿದನು.ಅನೇಕ ಚೂರುಗಳು ದೂರದೂರ ಬಿದ್ದಿದ್ದವು. ಅವನು ಅವುಗಳೆಲ್ಲವನ್ನೂ ಒಂದೂ ಬಿಡದೆ ಆರಿಸಿಕೊಂಡು ಮನೆಗೆ ಬಂದನು. ಆಗ ಅವನು ನಡೆದ ಯಾವ ವಿಷಯವನ್ನೂ ತಿಳಿಸದೆ ತಾನು ತಂದಿದ್ದ ಸಣ್ಣ ಸಣ್ಣ ಕಾಗದದ ಚೂರುಗಳನ್ನು ಸರಿಯಾಗಿ ಜೋಡಿಸಿ ಮತ್ತೊಂದು ಕಾಗದದ ಮೇಲೆ ಗೋಂದು ಹಾಕಿ ಅಂಟಿಸಿಟ್ಟನು.

       ರಾಮ- ಶ್ರೀಶಚಂದ್ರನು ಕಾಗದದ ಚೂರುಗಳನ್ನು ಸರಿಯಾಗಿ ಜೋಡಿಸಿಟ್ಟಿದ್ದನೋ ?
       ದೇವೇಂದ್ರ-ಜೋಡಿಸಿಟ್ಟಿದ್ದನು.
       ರಾಮ-ಆವನು ಶಿಷ್ಯನೆಂದರೇನು?  ಒಳ್ಳೆಯದು ಆಮೇಲೆ?