ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

‌‌ ೧೧

         ದೇವೇಂದ್ರ-ನಿನ್ನೆಯರಾತ್ರಿ ಆ ಕಾಗದವನ್ನು ಅವನು ನನ್ನ ಕೈಯಲ್ಲಿ ತಂದು ಕೊಟ್ಟನು. ಅಂತಹ ಆಶ್ಚರ್ಯವನ್ನುಂಟುಮಾಡುವ ಕಾಗದವನ್ನು ನಾನೆಲ್ಲಿಯೂ ನೋಡಿಲ್ಲ.
         ರಾಮ-ಅದೇನು ಆಶ್ಚರ್ಯವೋ ಅದನ್ನು ನಾನು ಕೇಳಬಾರದೆ?
         ದೇವೇದ್ರ- ಆ ಕಾಗದವು  ನನ್ನ ಹತ್ತಿರವೇ ಇರುವುದು. ಶ್ರೀಶನು ಕಾಗದದ ಚೂರುಗಳನ್ನು  ಸುಖವಾಗಿ ಓದುವುದಕ್ಕೆ ಅನುಕೂಲಿಸುವ ಕಾಗದವನ್ನಾಗಿ ಮಾಡಿಕೊಟ್ಟರುವನು. ಮೊದಲಲ್ಲಿ  ಕೆಲವು ಚೂರುಗಳೂ, ಮಧ್ಯದಲ್ಲಿ ಒಂದೆರಡು ಚೂರುಗಳೂ ಗೈರ್‌ವಿಲೆಯಾಗಿದ್ದುದರಿಂದ, ಆ ಸ್ಥಳಗಳಲ್ಲಿ ಶ್ರೀಶನು ತನ್ನ ಬುದ್ಧಿಯನ್ನು ಉಪಯೋಗಿಸಿ, ಸರಿಯಾಗಿ ಅರ್ಥವಾಗುವಂತೆ ಮಾತುಗಳನ್ನು ಸೇರಿಸಿರುವನು, ಓದಿ ನೋಡಿರಿ.
         ಹೀಗೆಹೇಳಿ ದೇವೇಂದ್ರ ವಿಜಯಮಿತ್ರನು ರಾಮಕೃಷ್ಣ ಬಾಬುವಿನ ಕೈಯಲ್ಲಿ ಆ ಕಾಗದವನ್ನು ಕೊಟ್ಟನು.
                      ಮೂರನೆಯ ಸಂಧಿ
                         ( ಹೊಸಕಾಗದ ) 
       ಕಾಗದದಲ್ಲಿ ಈರೀತಿಯಾಗಿ ಬರೆದಿದ್ದಿತು.........ಆಗಲಿಲ್ಲ. ನಿರೀಕ್ಷಿಸಿಕೊಂಡಿರುವುದಕ್ಕೆ ಅವಕಾಶವಿಲ್ಲ. ಇದ್ದಿದ್ದರೆ ಮಾಡುತ್ತಿದ್ದೆ.  ಏನು ಮಾಡಲಿ, ನನ್ನ  ದುರಾದೃಷ್ಟದಿಂದ 

ನಿನ್ನನ್ನು ನೋಡಲಾಗಲಿಲ್ಲ. ನಾನು ಯಾವುದೋ ಒಂದು ಕೆಲಸವನ್ನು ನಿಮಿತ್ತ ಮಾಡಿಕೊಂಡು ಬಾಲಿಗಂಜಿನ ಕಡೆಗೆ ಹೊರಟಿರುವೆನು. ನಾನು ಅಲ್ಲಿ ಸಿಕ್ಕಿಬಿದ್ದರೂ ಬೀಳಬಹು