ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೧
ದೇವೇಂದ್ರ-ನಿನ್ನೆಯರಾತ್ರಿ ಆ ಕಾಗದವನ್ನು ಅವನು ನನ್ನ ಕೈಯಲ್ಲಿ ತಂದು ಕೊಟ್ಟನು. ಅಂತಹ ಆಶ್ಚರ್ಯವನ್ನುಂಟುಮಾಡುವ ಕಾಗದವನ್ನು ನಾನೆಲ್ಲಿಯೂ ನೋಡಿಲ್ಲ. ರಾಮ-ಅದೇನು ಆಶ್ಚರ್ಯವೋ ಅದನ್ನು ನಾನು ಕೇಳಬಾರದೆ? ದೇವೇದ್ರ- ಆ ಕಾಗದವು ನನ್ನ ಹತ್ತಿರವೇ ಇರುವುದು. ಶ್ರೀಶನು ಕಾಗದದ ಚೂರುಗಳನ್ನು ಸುಖವಾಗಿ ಓದುವುದಕ್ಕೆ ಅನುಕೂಲಿಸುವ ಕಾಗದವನ್ನಾಗಿ ಮಾಡಿಕೊಟ್ಟರುವನು. ಮೊದಲಲ್ಲಿ ಕೆಲವು ಚೂರುಗಳೂ, ಮಧ್ಯದಲ್ಲಿ ಒಂದೆರಡು ಚೂರುಗಳೂ ಗೈರ್ವಿಲೆಯಾಗಿದ್ದುದರಿಂದ, ಆ ಸ್ಥಳಗಳಲ್ಲಿ ಶ್ರೀಶನು ತನ್ನ ಬುದ್ಧಿಯನ್ನು ಉಪಯೋಗಿಸಿ, ಸರಿಯಾಗಿ ಅರ್ಥವಾಗುವಂತೆ ಮಾತುಗಳನ್ನು ಸೇರಿಸಿರುವನು, ಓದಿ ನೋಡಿರಿ. ಹೀಗೆಹೇಳಿ ದೇವೇಂದ್ರ ವಿಜಯಮಿತ್ರನು ರಾಮಕೃಷ್ಣ ಬಾಬುವಿನ ಕೈಯಲ್ಲಿ ಆ ಕಾಗದವನ್ನು ಕೊಟ್ಟನು. ಮೂರನೆಯ ಸಂಧಿ ( ಹೊಸಕಾಗದ ) ಕಾಗದದಲ್ಲಿ ಈರೀತಿಯಾಗಿ ಬರೆದಿದ್ದಿತು.........ಆಗಲಿಲ್ಲ. ನಿರೀಕ್ಷಿಸಿಕೊಂಡಿರುವುದಕ್ಕೆ ಅವಕಾಶವಿಲ್ಲ. ಇದ್ದಿದ್ದರೆ ಮಾಡುತ್ತಿದ್ದೆ. ಏನು ಮಾಡಲಿ, ನನ್ನ ದುರಾದೃಷ್ಟದಿಂದ
ನಿನ್ನನ್ನು ನೋಡಲಾಗಲಿಲ್ಲ. ನಾನು ಯಾವುದೋ ಒಂದು ಕೆಲಸವನ್ನು ನಿಮಿತ್ತ ಮಾಡಿಕೊಂಡು ಬಾಲಿಗಂಜಿನ ಕಡೆಗೆ ಹೊರಟಿರುವೆನು. ನಾನು ಅಲ್ಲಿ ಸಿಕ್ಕಿಬಿದ್ದರೂ ಬೀಳಬಹು