ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಸತೀಹಿತೈಷಿಣೀ

 ಏನೂ ಸಂಶಯವಿಲ್ಲ, ಆದರೂ ನೀನು ಭಗವತ್ಕೃಪಾಪಾತ್ರನಾಗಿ, ಉದ್ದೇಶಸಾಫಲ್ಯ ಹೊಂದಬೇಕೆಂದು ನಾವೆಲ್ಲರೂ ಅನವರತವೂ ಭಗವಂತನನ್ನು ಪ್ರಾರ್ಥಿಸುವೆವು.

( ತೆರೆಯಲ್ಲಿ ವಾದ್ಯಗಳಾಗುವುವು.)

ರಮಾ:- (ಸಂಭ್ರಮದಿಂದ) ಓಹೋ! ಸುಹೃದರೇ! ಆಗಲೇ ಭಗವನ್ನಾಮಸಂಕೀರ್ತನೆಗೆ ಮೊದಲಾಯಿತು, ನಾವು ಇನ್ನು ಇಲ್ಲಿ ವಿಳಂಬಿಸಬಾರದು, ನಡೆಯಿರಿ, ನಾವೂ ಭಜನೆಗೆ ಸೇರುವ.

(ಎಲ್ಲರೂ ಹೊರಡುವರು)

ಭ ಜ ನೆ.

ರಾಗ- ( ಜಯಜಯ ಗೋಕುಲಬಾಲ )

ಜಯ ಜಯ ದ್ವಾರಕಾವಾಸ-ಜಯ ಮುನಿಮಾನಸಹಂಸ |
ಜಯಕಂಸಾಸುರ ವಿಧ್ವಂಸ- ಯದುಕುಲಾವತಂಸ | ಜಯ ||ಪಲ್ಲ||
ಜಯವಸುದೇವ ಕುಮಾರ-ಜಯ ಬೃ೦ದಾವನವಿಹಾರ |
ಜಯ ಗೋಪಿಕಾಜನಜಾರ- ಜಯಕೌಸ್ತುಭಮಣಿಹಾರ | ಜಯ ॥೧॥
ಜಯಜಯ ಸನ್ನುತಕಾಯ-ಜಯಜಯ ಸುರಮುನಿಗೇಯ | 15
ಜಯಜಯ ಸಾಗರನಿಲಯ-ಜಯಶುಭಗುಣಸಮುದಾಯ |ಜಯ |೨ ||
ಜಯ ಜಯ ದೈತ್ಯ ವಿನಾಶ-ಜಯನುತಶೇಷಗಿರೀಶ |
ಜಯಜಯ ಮಂಜುಳಭಾಷ-ಜಯ ಪಾಂಡವಪರಿತೋಷ 11 ಜಯ ||೩||

- ಇಷ್ಟಕ್ಕೆ ದ್ವಿತಿಯಾಂಕವು