ಈ ಪುಟವನ್ನು ಪ್ರಕಟಿಸಲಾಗಿದೆ
!! ಶ್ರೀ !!
ತೃ ತೀ ಯಾ ಂ ಕ .
ಶಾರದಾ ಸ್ತುತಿ.
ರಾಗ- ( ಚಾಮುಂಡಿ ಪಾಲಿಸು )
ಶ್ರೀವಾಣಿ ಕಲ್ಯಾಣಿ-ಬ್ರಹ್ಮಾಣಿ ಗೀರ್ವಾಣಿ -
ಕೈವಲ್ಯ ಮಾರ್ಗ ಪ್ರದರ್ಶಿನೀ-ಕವಿ ಜೀವಿನೀ ಮಜ್ಜನನೀ || ಪಲ ||
ಕಾಮಿನೀ ಗುಣಭರಣೀ-ಕಮನೀಯ ಸುಶ್ರೋಣಿ |
ರಾಮಣೀಯಕ ಪಲ್ಲವಪಾಣಿ-ಕೋಮಲ ಶುಕವಾಣಿ || ಶ್ರೀ ||೧||
ಮಂಗಳಂ ವಿಧಿರಮಣೀ-ಜಯಮಂಗಳಂ ಘನಕರುಣೀ |
ಸಂಗೀತಶಾಸ್ತ್ರವಿಲಾಸಿನೀ- ಪರಿಪಾಹಿಮಾಂ ಜನನೀ || ಶ್ರೀ ||೨||
ಭುವನೈಕ ಮೋಹಿನಿತರುಣಿ-ಭಾಷಾಭಿಮಾನಿನಿಜನನೀ |
ಶೇಷಶೈಲಾವಾಸಕೀರ್ತನಾ-ಮೋದದಾಯಿನಿ ರಮಣಿ || ಶ್ರೀ ||೩||
ಸ್ಥಳ ೧:- ವಿದ್ಯಾಶಾಲೆ.
( ನಳ-ಕಳಿಂಗರೊಡನೆ ರವಿವರ್ಮನ ಪ್ರವೇಶ.)
ನಳ:-( ಸಂಭ್ರಮದಿಂದ ) ಆಹಾ ! ಶಾಲಾ ಪ್ರವೇಶವಾದೊಡನೆಯೇ, ಎಂತಹ ಆನಂದವುಂಟಾಗುತ್ತಿರುವುದು ? ಇ೦ದಿನ ಇಷ್ಟು ಉತ್ಸಾಹಕ್ಕೆ ಕಾರಣವೇನು ? ಸುಶ್ರಾವ್ಯವಾದ ಶಾರದಾಸ್ತುತಿಯ ಗೀತಾಮೃತವನ್ನು ಸೇವಿಸಿದುದರಿಂದಲೋ ?
ಕಳಿಂಗ:-ಹಾಗಲ್ಲ,-ನಳನೇ! ನಮ್ಮ ಇಂದಿನ ಆನಂದಕ್ಕೆ ಕಾರಣವಿದೇನೂ ಅಲ್ಲ, ನಮ್ಮ ವೈರಿಯ ತೇಜೋವಧೆಗೆಂದು, ಈ ದಿನ ನಾವು ಹೂಡಿರುವ ಉಪಾಯವು ಫಲಕಾರಿಯಾಗುವುದಂಬ ಸಂತೋಷವೇ ಕಾರಣವೆಂದು ತಿಳಿ.
ರವಿ:-ನಿಜ! ನಮ್ಮ ಈಗಿನ ಮಾಟವು ಅವನನ್ನು ಹೇಗೂ ಬಿಡುವಂತಿಲ್ಲ.