ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అము ದಿಂದ ಹಂಜಡಗಿದ್ದಳು; ಆದರೆ ಈ ಜಾರು-ಬಾರಿಸೋಣವು ಯಾರಿಗೆ ಬೇಕಾ ಗಿತ್ತು?ಧಾನ್ಯ ಸಂಗ್ರಹವು ತೀರಿದ್ದರಿಂದಲೂ, ಹೊಸ ಧಾನ್ಯವನ್ನು ಪೂರಯಿಸುವ ದು ಆಗದ್ದರಿಂದಲೂ ಛಾವಣೆಯಲ್ಲಿ ದುರ್ಭಿಕ್ಷ ಬಿದ್ದು, ದಂಡಿನವರು ಉಪವಾಸ ಸಾಯಕ್ಕಾದರು. ಎಲ್ಲ ಬಗೆಯಿಂದಲೂ ಛಾವಣೆಯಲ್ಲಿ ಅವ್ಯವಸ್ಥೆಯುಂಟಾ ಯಿತು. ನಿರಾಶೆಯಿ೦ದ ಸಿಪಾಯಿಗಳು ತಮ್ಮ ಸರದಾರರ ಮಾತು ಕೇಳದಾದರು. ಮಲ್ಲಾರರಾವಳಕರನು ಹಿಂದಿರುಗಿ ಬಂದದ್ದರಿ೦ದ, ಸೈನಿಕರಲ್ಲಿ ಆತನ ಒಗರು ಕಡಿಮೆಯಾಗಿತ್ತು. ಅಂತಃಕಲಹ, ಜಾತಿಮತ್ಸರ ಇವುಗಳಿಂದ ಸರದಾರ ರಲ್ಲಿ ಎರಡು-ಮೂರು ಬಣಗಳಾಗಿದ್ದವು. ಒಬ್ಬರ ನೀರು ಕಡಿಮೆಯಾದರೆ ಮತ್ತೂ ಬ್ಬರಿಗೆ ಸಂತೋಷವಾಗುತ್ತಿತ್ತು. ಪ್ರತಿಯೊಬ್ಬನು ತನ್ನ ಪ್ರತಿಷ್ಠೆ ಯನ್ನೂಲಾಭವನ್ನೂ ನೋಡಿಕೊಳ್ಳುತ್ತಿದ್ದನಲ್ಲದೆ, ಸಾಮಾನ್ಯ ಹಿತಕ್ಕೆ ಯಾವನೂ ಲಕ್ಷ ಗೊಡುತ್ತಿದ್ದಿಲ್ಲ. ದನಗಳ ಮೇವು-ಮಿಡಚಿ ತೀರಿ, ಅವು ಪಟ-ಪಟ ಸಾಯಹ ದವು. ಧಾನ್ಯದ ಬದಲು ದನ-ಕರುಗಳ ಮಾಂಸವನ್ನು ಉಪಯೋಗಿಸಹತ್ತಿದರೂ ದಂಡಿನವರ ಹಸಿವೆಯು ಹಿಂಗಲೊಲ್ಲದು. ಸತ್ತ ದನಗಳ ದುರ್ಗಂಧವು ನಾಲ್ಲೂ ಕಡೆಗೆ ಪಸರಿಸಿತು, ಪ್ರತ್ಯಕ್ಷ ದಂಡಾಳುಗಳೂ ಒಪ್ಪತ್ತಿನಊಟವನ್ನು ಕಾಣದಿರು ವಾಗ, ಬಾಜಾರಬುಣಗಿನವರ ಪಾಡೇನು? ಅವರು ಕೂಳಿಲ್ಲದೆ ಬಿದ್ದಲ್ಲಿ ಬಿದ್ದು ಬಾ ಯಹತ್ತಿದರು, ಸಿಪಾಯಿಗಳು ಮರ್ಯಾದೆ ಬಿಟ್ಟು ತಮ್ಮ ಸರದಾರರಿಗೆ ನಾವು ಎಷ್ಟು ದಿನ ಉಪವಾಸವಿರೋಣ? ನಿಮ್ಮ ಮನೆಯೊಳಗಿನ ಕಾಳಿನ ಚೀಲಗಳನ್ನು ಲೂಟಿಮಾಡಿ ಒಯುವವು. ನಿಮ್ಮ ಮುಂದಿನ ಬಡಿಸಿದ ಎಡೆಯನ್ನು ಎಳೆದು ಕೊಂಡು ಹೋಗುವವು. ನಿಮಗೆ ಊಟಮಾಡtಡಲಿಕ್ಕಿಲ್ಲ.' ಎಂದು ಬಾಯಿಗೆ ಬಂದಂತ ಮೋರೆಯ ಮು೦ದಯ ಮಾತಾಡಹತ್ತಿದರು ! ಪಾನಿಪತ್ಯದ ಊರೂ ಳಗಿನ ಧಾನ್ಯ ಸಂಗ್ರಹವಲ್ಲ ದಂಡಿನವರ ಪಾಲಾಯಿತು. ಧಾನ್ಯಗಳ ಚೀಲಗಳನ್ನು ತೋರಿಸದವರನ್ನು ಸಿಪಾಯಿಗಳು ಸಾಯಹೊಡೆಯುವರು. ಒಬ್ಬರನ್ನೊಬ್ಬರು ಕೇಳುವಹಾಗಿದ್ದಿಲ್ಲ. ಬಲವಂತನು ಬದುಕಿದನೆಂಬ ಭಯಂಕರಸ್ಥಿತಿಯು ಪ್ರಾಪ್ತ ವಾಯಿತು. ಭಾವು ಸಾಹೇಬನ ಹಂಗನ್ನೂ ದಂಡಿನವರು ಇಡದಾದರು. ಅವರ ಅಪಶಬ್ದಕ್ಕೆ ಆ ಮಾನಧನನೂ ಗುರಿಯಾದನು. ಈ ಸ್ಥಿತಿಯಲ್ಲಿ ಸಿಂದೇನ ಡೇರೆ ಯ ಮುಂದೆ ಹಾರುತ್ತಿರುವ ಸ್ತ್ರೀಯ ಹಾಡಿಕೆಯನ್ನು ಯಾರು ಕೇಳಬೇಕು ? ಆದರೂ ಮನುಷ್ಯ ಸ್ವಭಾವವು ಶಾಶ್ವತವಾಗಿ ಯಾವದನ್ನೂ ಹಚ್ಚಿಕೊಳ್ಳ ತಕ್ಕದ್ದಲ್ಲ. ಅದರಲ್ಲಿ ವೀರಪುರುಷರಂತು ತಮ್ಮ ವೀರ್ಯದ ಪ್ರಭಾವದಲ್ಲಿ ಕ್ಷು ದ್ರ ಮಾನಸಿಕ ವಿಕಾರಗಳನ್ನು ಸಂಪೂರ್ಣವಾಗಿ ಧಿಕ್ಕರಿಸುವರು. ಅದರಂತ, ಈಗ ಇಂಪಾದ ಗಾಯನ ನಿಯು ಕಿವಿಗೆ ಬಿದ್ದ ಕೂಡಲೇ, ನಮ್ಮ ಇಬ್ಬರು ಮ ಕಾಟವೀರರ ಔದಾಸೀನ್ಯವು ನಷ್ಟವಾಯಿತು. ಕೇವಲ ಉದಾಸೀನರಾಗಿದ್ದ ಅವ ರಿಗೆ ಆ ಗಾಯನವು ಬಹು ಸುಶ್ರಾವ್ಯವಾಯಿತು. ಮಹದಾಜಿಯ ಲಕ್ಷವಂತು ಆ ಗಾಯನ ಕೇಳುವಲ್ಲಿ ಮಗ್ನ ವಾಗಿಹೋಯಿತು. ಬರಬರುತ್ತ ಅವರು ಮಾತು ಬಿಟ್ಟು ಹಾಡು ಕೇಳುತ್ತ ಕುಳಿತುಕೊಂಡರು. ಗಾಯಕಿಯ ಧ್ವನಿಯು ಬಹು ಮಂಜುಲವಾದದ್ದು, ಅದು ವೀರ ನಾದದಲ್ಲಿ ಬೆರೆತು ಹೋಗಿ, ಆಳುವವರ ಚಿ