ಬೈಲುಗಂಬಾರನ ಸಾಮಾಜಿಕ ಕಾರ್ಯ ಲಕ್ಷ ಣರಾಯರೇನು ಸಮಾಜಸುಧಾರಕರಲ್ಲ, ಅವರೊಬ್ಬ ಕಾರ ಖಾನೆದಾರರು, ಅವರ ಶಬ್ದ ದಲ್ಲಿಯೇ ಹೇಳಬೇಕೆಂದರೆ, 'ನಾನೊಬ್ಬ ಬೈಲು ಗಬಾರ' ಎಂದು ಒಳ್ಳೆ ಅಭಿಮಾನದಿಂದ ಅವರು ನುಡಿಯುತ್ತಿದ್ದರು. ಯಾವಾಗಲೂ ಯಂತ್ರಗಳಲ್ಲಿಯೇ ಮಗ್ನರಾಗುತ್ತಿದ್ದ ಈ ಕಂಬಾರರು ಎಂತಹ ಸಾಮಾಜಿಕ ಸುಧಾರಣೆಗಳನ್ನು ಮಾಡಬಲ್ಲರು ? ಅದು ಅವರ ಕ್ಷೇತ್ರವೂ ಅಲ್ಲ. ನಮ್ಮ ಜೀವನವು ಸಾಮಾಜಿಕ, ರಾಜಕೀಯ, ಔದ್ಯೋಗಿಕ, ವಿಕಾಸ ಗಳಿಂದ ಹೆಣೆದದ್ದಾಗಿದೆ. ಆದುದರಿಂದ ಒಂದು ಕ್ಷೇತ್ರದಲ್ಲಿ ಸುಧಾರಣೆ ಮಾಡು ವಾಗ ಅದರೊಡನೆ ಇತರ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆ ಮುಂದೆ ಬೀಳು ವಂತೆ ವಿಚಾರ ಮಾಡಬೇಕಾಗುತ್ತದೆ, ಔದ್ಯೋಗಿಕ ಕ್ಷೇತ್ರದಲ್ಲಿ ಮುಂದೆ ಸಾಗುವಾಗ ರಾಯರಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಕೆಲವು ಬದಲಾ ವಣೆಗಳನ್ನು ಮಾಡಿಕೊಳ್ಳ ಬೇಕಾಯಿತು. ಹರಿಜನನಾದ ಸೀರಾನ ಸಂಗತಿಯನ್ನೇ ತಗೆದುಕೊಳ್ಳಿರಿ. ಅವನು ಸಾತಾರ ಜಿಲ್ಲೆಯ ಪ್ರಸಿದ್ಧ ದರವಡೆಖೋರ, ಮೈ-ಕೈಯಿಂದ ಭಾರೀ ವ್ಯಕ್ತಿ, ಅಷ್ಟೇ ಬಲಶಾಲಿ, ಆ ಭಾಗದಲ್ಲಿ ಅವನ ದರ್ಪ ಬಹಳ, ಆದರೆ ಪೋಲೀಸರ ಕೈಯಲ್ಲಿ ಸಿಕ್ಕು ನುಗ್ಗಾಗಿ ಚೇಲಿನಲ್ಲಿ ಕೊಳೆಯುತ್ತಿದ್ದ. ರಾಯರಿಗೆ ಇವನ ರಹಸ್ಯ ವೆಲ್ಲ ಗೊತ್ತು, ಕಿರ್ಲೋಸ್ಕರವಾಡಿಯ ರಕ್ಷಣೆಯ ಪ್ರಶ್ನೆ ಬಂದಾಗ ಸರಕಾರವು ಇಬ್ಬರು ಪೋಲೀಸರನ್ನು ಕೊಡುವೆನೆಂದಿತು, ಅದು ರಾಯರಿಗೆ ರುಚಿಸಲಿಲ್ಲ. ಅವರು ಬೇರೆ ಯುಕ್ತಿಯನ್ನೇ ಹುಡುಕಿದರು. “ಇನ್ನು ಮುಂದೆ ದರೋಡೆ ಬಿಟ್ಟು ಪ್ರಾಮಾಣಿಕ ರೀತಿಯಿಂದ ನಡೆ ಯಲು ಸಿದ್ದನಿದ್ದರೆ, ಜೇಲಿನಿಂದ ಬಿಡಿಸಿ ತಂದು ಕಾರಖಾನೆಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವ ಇಚ್ಛೆಯಿದೆ, ಆದರೆ ನೀನು ಹಾಗೆ ಪ್ರತಿಜ್ಞೆ ಮಾಡಬೇಕು? ಎಂದು ರಾಯರು ಸೀರಾನಿಗೆ ಹೇಳಿ ಕಳಿಸಿದರು. ಅದನ್ನು ಅವನು ಒಪ್ಪಿಕೊಂಡ.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೯
ಗೋಚರ