ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ರಾಯರು ಅವರಿಗಾಗಿಯೇ ಜಂತುರಸವನ್ನು ಸಿದ್ದಪಡಿಸಿ ಚುಟ್ಟಿ, ಅವರನ್ನು ಮೃತ್ಯುಮುಖದಿಂದ ಉಳಿಸಿದರು. ಹೀಗೆ ಲಕ್ಷ ಣರಾಯರು ಬೆಳೆಯುತ್ತ ಉತ್ಸಾಹದಲ್ಲಿ ಹತ್ತು ಹನ್ನೆರಡು ವರ್ಷಗಳನ್ನು ಕಲ್ಪನೆಯಿಲ್ಲದೆ ಕಳೆದರು. ಅವರು ಯಾಂತ್ರಿಕ ವಿದ್ಯಾಲಯದಿಂದ ೫೦ ರೂ, ಸಂಬಳ ಪಡೆಯುತ್ತಿದ್ದರು. ಆದರೆ ಆಕಸ್ಮಿಕವಾಗಿ ಕೆಲಸಕ್ಕೆ ರಾಜೀನಾಮೆ ಕೊಡುವ ಪ್ರಸಂಗ ಬಂದು ಸ್ವತಂತ್ರ ಉದ್ಯೋಗದ ಸಲುವಾಗಿ ಅತ್ತಿತ್ತ ಅಲೆದಾಡಬೇಕಾಯಿತು.