ಈ ಪುಟವನ್ನು ಪರಿಶೀಲಿಸಲಾಗಿದೆ
ಮಧುಸೂದನ. ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಸೋಮಸುಂದರನು ಭಾಸ್ಕರನ ಅಪ್ಪಣೆಯನ್ನು ಹೊಂದಿ ಒಳಕ್ಕೆಹೋಗಿ ಸಾವಿರದ ಐನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸಿದನು. ಭಾಸ್ಕರನು ಭೋಜನವಾದಮೇಲೆ ತನ್ನ ಆಕಾರವನ್ನು ಬದಲಾಯಿಸಲು ಕೂತನು.ಯಾತಕ್ಕಂದರೆ ಕಲ್ಕತ್ತದಲ್ಲಿ ಎದುರಿಗೆ ಅನೇಕರು ಇವನನ್ನು ನೋಡಿಯೂ ಮತ್ತು ಫೋಟೋಗಳ ಮೂಲಕ ನೋಡಿಯೂ ಬಲ್ಲರು. ಈಗ ನಿಜರೂಪದಿಂದ ಸೋದರೆ ಸಂಶ ಯಕ್ಕಾಸ್ಪದವಾಗಬಹುದು:-ಆದ್ದರಿಂದ ಕೃತ್ರಿಮವಾದ ಬಿಳೀದಾಡೀ ಮೀಶೆಗಳನ್ನೂ ಕೂದಲನ್ನೂ ಕಟ್ಟಿಕೊಂಡು ಶರೀರಕ್ಕೆಲ್ಲಾ ಯಾವುದೋ ಒಂದು ವಿಧವಾದ ದ್ರಾವಕವನ್ನು ಬಳಿದುಕೊಳ್ಳಲು ದೇಹವೆಲ್ಲಾ ಮುದುಕರ ದೇಹದಂತೆ ಸುಕ್ಕುಬಿದ್ದಿರುವ ಹಾಗೆ ಕಾಣಬಂದಿತು. ಹೀಗೆ ಕಂಡುಹಿಡಿಯಸಾಧ್ಯವಾದ ಮುದುಕವೇಷವನ್ನು ಧರಿಸಿ ತನ್ನ ಸಾಮಗ್ರಿಗಳನ್ನೆಲ್ಲಾ ತೆಗೆಸಿಕೊಂಡು ಸೋಮಸುಂದರನ ಗಾಡಿಯಲ್ಲಿ ಸಮಿಾಪದ ರೈಲ್ವೇ ಸ್ಟೇಷನನ್ನು ತಲಪಿ ರೈಲುಗಾಡಿಯ ಮುಖಾಂತರ ಅದೇ ದಿವಸ ಕಲ್ಕತ್ತಾ ಮಹಾನಗರವನ್ನು ತಲಪಿ ತನ್ನ ಸ್ನೇಹಿತನಾದ ಗೋವಿಂದನ ಮನೆಯನ್ನು ಸೇರಿದನು.
ಐ ದ ನೆ ಯ ಅ ಧ್ಯಾ ಯ, ________________ (ಸೋಮಾರಿಗಳ ಗುಹೆ.) ಕಲ್ಕತ್ತಾ ನಗರವು ಇಂಗ್ಲೀಷರು ಇಂಡಿಯಾ ದೇಶಕ್ಕೆ ಬಂದು ನೆಲಸಿದಾಗಲಿಂದಲೂ ದಿನೇದಿನೇ ವೃದಿಯನ್ನು ಹೊಂದಿ ಈಗ ಇಂಡಿಯಾದಲ್ಲೆಲ್ಲಾ ಜನಸಂಖ್ಯೆಯಲ್ಲಿ ಎರಡನೆಯದೆನಿಸಿಕೊಂಡಿರುವುದು ಸಕಲರಿಗೂ ತಿಳಿದ ವಿಷಯವಾಗಿದೆ. ಪುರಾತನಕಾಲದಿಂದಲೂ ಈ ನಗರವು ಸಂಪತ್ತುಳ್ಳದ್ದಾಗಿರುವುದು. ಇಂಗ್ಲೀಷರು ಇಲ್ಲಿ ನೆಲಸಿದಮೇಲೆ ಇದರ ಪ್ರಾಮುಖ್ಯತೆಯು ಮತ್ತೂ ಹೆಚ್ಚಿತು. ಸುತ್ತುಮುತಲೂ ಇರುವ ರಾಜ್ಯಗಳು ಗಂಗಾ ಮತ್ತು ಹೂಗ್ಲಿ ಈ ನದಿಗಳ ಸಹಾಯದಿಂದ ಇಂಡಿಯುದಲ್ಲೆಲ್ಲಾ ಅತ್ಯಂತ ಫಲವತ್ತಾದ ಪ್ರದೇಶಗಳಾಗಿ, ಅಲ್ಲಿನ ಜನಗಳು ಅತ್ಯಂತ ಧನಿಕರಾಗಲು ಕಾರಣವಾದವು. ವ್ಯಾಪಾರಾದಿಗಳಿಗೆ ಮಧ್ಯಭಾಗವಾಗಿಯೂ, ಇಂಡಿಯಾ ದೇಶಕ್ಕೇ ರಾಜಧಾನಿಯಾಗಿಯೂ ಇದ್ದದ್ದರಿಂದ ಕಲ್ಕತ್ತಾ ಪಟ್ಟಣವು ಜನಸಂಖ್ಯೆಯಲ್ಲಿಯೂ ಐಶ್ವರದಲ್ಲಿಯೂ ಬಹಳ ಮುಂದಕ್ಕೆ ಬಂದಿತು. ಇಲ್ಲಿನ ಜನಗಳು ಅಧಿಕ ಕಷ್ಟವಿಲ್ಲದೇ ತಮ್ಮ ಆಹಾರ ಸಾಮಗ್ರಿಗಳನ್ನು ಹೊಂದುವರಾದ್ದರಿಂದ ಜೀವನಕ್ಕೆ ಕಷ್ಟಪಡದೆ ತಮ್ಮ