ಪುಟ:ನನ್ನ ಸಂಸಾರ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


14 ಕಾದಂಬರೀ ಸಂಗ್ರಹ ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^

  ಭಾಸ್ಕರ:-ನಾನು ಈಗ ಏನೂ ಹೇಳಲಾರೆನು. ಆದರೆ ಇಷ್ಟು ಮಾತ್ರ ಹೇಳ ಬಲ್ಲೆನು: ನಿಮ್ಮ ಪುತ್ರನು ಜೀವವಂತನಗಿಯೇ ಇರುತ್ತಾನೆ. ಅವನನ್ನು ತಿಳಿದವರೇ ಯಾರೋ ಅವನನ್ನು ಬಲವಂತದಿಂದ ಎತ್ತಿಕೊಂಡು ಹೋಗಿರುತ್ತಾರೆ.
  ಸೋಮಸುಂದರ: -ಹಾಗೆ ಅವನನ್ನು ಎತ್ತಿಕೊಂಡು ಹೋಗಲು ಕಾರಣವೇನು? ಧನದಾಶೆಯಿಂದ ಮಾಡಿದ್ದರೆ ಇಲ್ಲಿಯವರೆಗೂ ಏನನ್ನೂ ಕೇಳದೇ ಇರಲು ಕಾರಣವೇನು?
  ಭಾಸ್ಕರ:-ಅವರು ಧನಾಪೇಕ್ಷೆಯಿಂದ ಈ ಕೆಲಸವನ್ನು ಮಾಡಿರುವಹಾಗೆ ಕಂಡುಬರುವುದಿಲ್ಲ. ಮಧುಸೂದನನ ವಿವಾಹವಿಷಯದಲ್ಲೇ ಏನೋ ಬಹಳ ಒಳಸಂಚು ನಡೆದಿರುವಹಾಗೆ ನನಗೆಸಿಕ್ಕಿದ ಒಂದುಚೂರು ಕಾಗದದಿಂದ ತಿಳಿದುಬರುತ್ತದೆ. ಆದರೆ ಈಗ ನಾವು ಯಾವುದನ್ನೂ ಸರಿಯಾಗಿ ತೀರ್ಮಾನಿಸುವುದಕ್ಕಾಗುವುದಿಲ್ಲ.
  ಸೋಮಸುಂದರ:- ನನ್ನ ಪುತ್ರನಿಗೇನಾದರೂ ಅಪಾಯ ಸಂಭವಿಸಿರಬಹುದೋ ಎಂದು ನನ್ನ ಮನಸ್ಸು ಕಳವಳ ಪಡುತ್ತಿದೆ. ನೀವು ಇದರ ಮೂಲವನ್ನೆಲ್ಲಾ ಬೇಗ ಕಂಡು ಹಿಡಿದು ನನ್ನ ಪುತ್ರನನ್ನು ಬಿಡಿಸಿಕೊಟ್ಟರೆ ಬಹಳ ಒಳ್ಳೇದು. ಅದಕ್ಕಾಗಿ ಎಷ್ಟೇ ಖರ್ಚಾಗಲಿ ನಾನುಕೊಡಲು ಸಿದ್ಧನಾಗಿದ್ದೇನೆ.
   ಭಾಸ್ಕರ: - ನಿಮ್ಮ ಪುತ್ರನಿಗೇನೂ ಅಪಾಯಸಂಭವಿಸಿರಲಾರದೆಂದು ನಾನು ಯೋಚಿಸುತ್ತೇನೆ. ಇದೆಲ್ಲ ಇರಲಿ. ತಮಗೆ ಅವನು ಕಲ್ಕತ್ತಾನಗರದಲ್ಲಿದ್ದಾಗ ವಾಸವಿದ್ದ ಮನೆಯ ವಿಳಾಸ ಗೊತ್ತಿದೆಯೋ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.
   ಸೋಮಸುಂದರ:-ತಿಳಿಯದೇ ಏನು. ಅವನು ತನ್ನ ಸ್ನೇಹಿತ ರೊಡನೆ ಬೋಬಚಾರ್‌ ಬೀದಿಯಲ್ಲಿ ೩೦ನೇ ನಂಬರ್‌ಮನೆಯಲ್ಲಿ ವಾಸ ಮಾಡುತ್ತಿದ್ದನು. ಅವನು ಊಟವನ್ನು ಕಾಳೀ ಬೀದಿಯಲ್ಲಿರುವ ವೈದೀಕರಹೊಟಲ್ ಎಂಬುವುದರಲ್ಲಿ ಮಾಡುತ್ತಿದ್ದನು.
   ಭಾಸ್ಕರ:-ನಾನು ಈ ದಿವಸವೇ ಕಲ್ಕತ್ತೆಗೆ ಹೊರಡುತ್ತೇನೆ. ನೀವು ನನಗಾಗಿ ಮಾಡತಕ್ಕ ಒಂದು ಕೆಲಸವಿದೆ. ಅದೇನಂದರೆ ನಾನು ಈ ವಿಷಯದಲ್ಲಿ ಪ್ರವೇಶಮಾಡಿರುವುದನ್ನು ಯಾರಸಂಗಡಲೂ ತಿಳಿಸಕೂಡದು. ನನಗೇನಾದರೂ ಕಾಗದಗಳನ್ನು ಬರೆಯಬೇಕಾಗಿದ್ದರೆ ನನ್ನ ಸ್ನೇಹಿತನಾದ ಗೋವಿಂದನೆಂಬುವನ ಅಡ್ರೆಸ್ಸಿಗೆ ಬರೆಯಿರಿ. ಇದೋ ಇದೇ ಅವನವಿಳಾಸ.ಈಗ ಸದ್ಯಕ್ಕೆ ಖರ್ಚಿಗಾಗಿ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟರೆ ನಾನು ಕಲ್ಕತ್ತೆಯಿಂದ ಒಂದುವೇಳೆ ಕಾಗದವನ್ನು ಬರೆದರೂ ಬರೆದೆ. ಇಲ್ಲದಿದ್ದರೂ ಇಲ್ಲ. ಆದರೆ ತಾವು ಯಾವುದಕ್ಕೂ ಯೋಚಿಸಕೂಡದು.