56 ಕಾದಂಬರಿ ಸಂಗ್ರಹ
ಒಳಕ್ಕೆ ಹೋಗಿ ಸೆಚ್ಚಾಗಿ ನಿಂತುಕೊಂಡನು. ಅವರಜ್ಜಿಯು ಇವನ ಸ್ಥಿತಿಯನ್ನು ನೋಡಿ ಇದೇಕೆ ! ಹೀಗಿರುವೆಯೆಂದು ಕೇಳಿದರು. ಉತ್ತರಹೊರಡಲಿಲ್ಲ. ಅಷ್ಟರಲ್ಲೆ ನಮ್ಮ ಭಾವನವರು ಹೋಗಿ ಮುದುಕಿಯೊಡನೆ, ನಡೆದವೃತ್ತಾಂತವನ್ನೂ ಹುಡು ಗರಿಬ್ಬರ ಸಂಭಾಷಣೆಯನ್ನೂ ತಿಳಿಸಿದರು. ಅದರ ಮೇಲೆ ಚಂಡಕೇಶವನ ಬೇಬನ್ನು ಶೋಧಿಸಲು ಮೂರುಪಾವಲಿಗಳು ಸಿಕ್ಕಿದುವು. ಅದನ್ನು ನೋಡಿ ಮುದುಕಿಯು ಆಹುಡುಗನನ್ನು ಹೊಡೆದು ಬಡೆದು ವಿಪರೀತವಾಗಿ ಶಿಕ್ಷಿಸಿಬಿಟ್ಟರು. ತುಂಬಾ ರೂಪಾಯಿಗಳಿವೆಯೆಂದು ನಾರಾಯಣನಸಂಗಡ ಹೇಳಿದೆಯಲ್ಲಾ, ಇಲ್ಲಿ ಕೊಡು ಅದನ್ನು ಕೊಟ್ಟರೆ ನಿನಗೆ ಎರಡುರೂಪಾಯಿ ಇನಾಮು ಕೊಡುವೆನೆಂದು ನಮ್ಮ ಭಾವನವರು ಹೇಳಲು ಆಹುಡುಗನು ಅಳುತ್ತಾ, ಇಲ್ಲ! ನನ್ನಲ್ಲಿಲ್ಲ! ಎಂದು ಹೇಳಿದನು. ಅವನನ್ನು ಎಲ್ಲರೂ ತುಂಬಾಹೆದರಿಸಿ, ನೀನು ಹೇಳದಿದ್ದರೆ ನಿನ್ನನ್ನು ಪೋಲೀಸಿಗೆ ಕೊಟ್ಟುಬಿಡುತ್ತೇನೆಂದು ಹೇಳಿದರು. ಆಹುಡುಗನು ಬಹು ಕಷ್ಟದಿಂದ ಹಿತ್ತಲಿಗೆ ಹೋಗಿ ಗೋಡೆಯಪಕ್ಕದಲ್ಲಿ ಒಂದು ಸ್ಥಳದಲ್ಲಿ ಬಗೆದು ಅಳುತ್ತಾನಿಂತುಕೊಂಡನು. ಎಲ್ಲರೂ ಹೋಗಿ ಆ ಸ್ಥಳದಲ್ಲಿ ನೋಡಲು ಮಣ್ಣು ಹಿಡಿಯಲಾರಂಭವಾಗಿದ್ದ ಬೆಳ್ಳಿಯ ರೂಪಾಯಿಗಳು ಕಾಣಬಂದುವು. ಭಾವನವರು ಅದನ್ನು ತೆಗೆದು ಎಣಿಸಲು ಅರವತ್ತೆರಡು ರೂಪಾಯಿಗಳಿದ್ದುವು. ಇಷ್ಟು ಹಣ ನಿನಗೆಲ್ಲಿ ಸಿಕ್ಕಿತೆಂದು ಕೇಳಲು ಅವನು ನಡುಗುತ್ತಾ ತನ್ನ ಅಜ್ಜಿಯನ್ನು ತೋರಿಸಿದನು. ಅದರ ಅರ್ಥವೇನೆಂದು ಎಲ್ಲರೂ ಕೇಳಲು, ನಾನು ಈಗ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೈಗೆ ಸಿಕ್ಕಿದ ಷ್ಟನ್ನು ತಂದು ನನ್ನ ಅಜ್ಜಿಯ ಕೈಗೆ ಕೊಡಲು ಅವಳು ಅದನ್ನು ನನ್ನೆದುರಾಗಿ ಇಲ್ಲಿ ಹೂಳಿಟ್ಟಳೆಂದು ಹೇಳಿದನು. ಪಾಠಕರೆ ! ಈಗ ಮುದುಕಿಯ ಮುಖವನ್ನು ಒಮ್ಮೆ ದೃಷ್ಟಿಸಿ ನೋಡಿರಿ, ಗುಟ್ಟು ಬಯಲಾಯಿತು. ಇನ್ನೊಂದು ಕ್ಷಣವೂ ತಮ್ಮ ಮನೆಯಲ್ಲಿ ರಲಾಗದೆಂದು ಮುದುಕಿಯನ್ನು ಆ ಹುಡುಗನೊಡನೆ ಹೊರಕ್ಕೆ ಕಳುಹಿಸಿಬಿಟ್ಟರು. ಈ ರೀತಿಯಾಗಿ ಶ್ರೀ ನಗರದಲ್ಲಿ ಕಳ್ಳತನ ಪತ್ತೆಯಾಯಿತು.
ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಹಿಂದೆ ಕಳುವಾದುದು ಐವತ್ತೈದು ರೂಪಾಯಿಗಳೆಂದೂ ನಿರ್ಧರವಾಯಿತಂತೆ! ಮುದುಕಿಯು ಆಹುಡುಗನೊಡನೆ ಮನೆಬಿಟ್ಟು ಹೊರಟು ಹೊದಮೇಲೆ ಮನೆಯವರೆಲ್ಲರೂ ಮಾತನಾಡಿಕೊಂಡು ನನ್ನನ್ನೂ ನಮ್ಮ ಯಜಮಾನರನ್ನೂ ಪುನಃ ಹಿಂತಿರುಗಿ ಮನೆಗೆ ಬರುವಂತೆ ಎಷ್ಟೋ ಉಪಚಾರವನ್ನು ಹೇಳಿದರು, ನಾನು ತಸ್ಕರಿಯಲ್ಲವೆಂದು ಆಗ ನಮ್ಮ ಮನೆಯವರಿಗೆ ಗೊತ್ತಾಗಿ ನನ್ನ ವಿಷಯದಲ್ಲಿ ಹಿಂದೆ ನಡೆಸಿದ ನಡವಳಿಕೆಗಾಗಿ ಒಹು ಪಶ್ಚಾತ್ತಾಪ ಪಟ್ಟರಂತೆ?