ನನ್ನ ಸಂಸಾರ 55
ಚಂಡಕೇಶವ-ಲೋ, ನಾರಾಯಣ, ನಾಳೆಯ ದಿನವೂ ನನ್ನ ಜತೇಲಿ ಬರುತ್ತೀ ಯೇನೋ, ಶ್ಯಾಮಮೂರ್ತಿ, ಕೋದಂಡರಾಮ ಇವರನ್ನೂ ಕರೆದುಕೊಂಡು ಬಾ. ನನ್ನ ಹತ್ತಿರ ಮೂರು ಪಾವಲಿದೆ. ನಿಮಗೆಲ್ಲಾ ನಾಳೆಯೂ ತುಂಬಾ ತಿಂಡಿ ಕೊಡಿಸುತ್ತೇನೆ. ನಾರಾಯಣ-ಲೋ, ನಿನಗೆ ದುಡ್ಡೆಲ್ಲಿತ್ತೋ, ನಿಮ್ಮಜ್ಜಿ ಕಂಡರೆ ಬಯ್ಯುವದಿಲ್ಲ ವೇನೋ!ನಾನು ಬರುವುದಿಲ್ಲ ವಪ್ಪಾ, ನಮ್ಮ ಮನೆಯವರು ಬಯ್ಯುತ್ತಾರೆ. ಚಂಡ-ದುಡ್ಡೆ! ದುಡ್ಡಿಗೇನೊ, ನನ್ನ ಹತ್ತಿರ ಎಷ್ಟೊ ರೂಪಾಯಿ ಇದೆ. ಅದ ನ್ನೆಲ್ಲಾ ಒಂದು ಕಡೆ ಗುಟ್ಟಾಗಿಟ್ಟಿದೇನೆ. ಇನ್ನು ನಾಲೈದು ದಿನ ಕಳೆದ ಮೇಲೆ ಅದರಲ್ಲಿ ಒಂದೊ ದಾಗಿ ತೆಗೆದುಕೊಂಡು ತಿಂಡಿಯನ್ನು ತಿನ್ನುತ್ತೇನೆ.ನಿನಗೇಕೆ ಹೆದರಿಕೆಯೋ, ನನ್ನ ಜತೇಲಿಸುಮ್ಮನೆಬಾರೋ! ನಾರಾಯಣ-ಹಾಗೇನೋ!ಹಾಗಾದರೆ ನೀನು ಜಾಣ. ಆಗಲಪ್ಪಾ, ಶ್ಯಾಮೂ,ಕೋದಂಡ ಇವರನ್ನು ನಾಳೆ ಕರತರುತ್ತೇನೆ. ಚಂಡ-ನಾನು ಮನೆಗೆ ಹೋಗುತ್ತೇನಪ್ಪಾ. ನಮ್ಮ ಅಜ್ಜಿ ಬಯ್ಯುತ್ತಾಳೆ. ನನ್ನಹತ್ತಿರ ಒಂಭತ್ತು ಕಾಸಿದೆ. ಇದನ್ನು ತೆಗೆದುಕೊಂಡು ನಿನ್ನ ಹತ್ತಿರ ಇಟ್ಟಿರು. ನಾಳೆ ತಿಂಡಿತಿನ್ನು ವಾಗ ಕೊಡುವಿಯಂತೆ. ಈರೀತಿ ಆ ಹುಡುಗರು ಮಾತನಾಡಿಕೊಂಡು ತಮ್ಮ ತಮ್ಮ ಮನೆಗಳಿಗೆ ಬಂದು ಬಿಟ್ಟರು. ನಮ್ಮ ಭಾವನವರು ಆ ಹುಡುಗರ ಮಾತನ್ನು ಕೇಳುತ್ತಾ ಆಶ್ಚರ್ಯಪಟ್ಟು ತಮ್ಮ ಜೇಬಿನಲ್ಲಿದ್ದ 4 ಪಾವಲಿಗಳನ್ನು ಈ ಚಂಡಕೇಶವನೇ ತೆಗೆದುಕೊಂಡಿರಬಹು ದೆಂದು ಊಹಿಸಿದರು. ಹಾಗೆಯೇ ಅವನು ತನ್ನಲ್ಲಿ ತುಂಬಾ ರೂಪಾಯಿಗಳಿವೆ-ಎಂದು ಹೇಳಿದಾಗ ಅವರಿಗೆ ದಿಗ್ಭ್ರಮೆಯುಂಟಾಯಿತು.ಇದರ ನಿಜಸ್ಥಿತಿಯನ್ನು ಪರೀಕ್ಷಿಸ ಬೇಕೆಂದು ಅವರು ಸಂಧ್ಯಾವಂದನೆಯಾದ ಬಳಿಕ ಗುಟ್ಟಾಗಿ ಚಂಡಕೇಶವನನ್ನು ಕರೆದು ಉಪಾಯದಿಂದ ಮಗು! ನಿನ್ನ ಹತ್ತಿರ ದುಡ್ಡೆನಾದರು ಇದ್ದರೆಕೊಡು. ನಾಳೆ ಕೊಡುತ್ತೇನೆಂದು ಕೇಳಿದರು. ಅವನು ಇಲ್ಲ, ನನ್ನಲ್ಲಿ ದುಡ್ಡೆಲ್ಲಿರುತ್ತದೆ. ಎಂದನು. ಎಲೋ? ನೀನು ನಾರಾಯಣನ ಸಂಗಡ ಹೇಳುತ್ತಿರಲಿಲ್ಲವೇನೋ: ಆ ಮೂರು ಪಾವಲಿಯನ್ನು ನೀನು ನನಗೆ ತಂದುಕೊಟ್ಟರೆ ನಿನಗೆ 1ಪಾವಲಿಯನ್ನು ಇನಾಮಾಗಿ ಕೊಡುತ್ತೇನೆಂದು ಹೇಳಿದರು. ಅದಕ್ಕೆ ಅವನು, ನನ್ನ ಜೇಬಿನಲ್ಲಿ ನೋಡುತ್ತೇನೆ ಇದ್ದರೆ ಕೊಡುತ್ತೇನೆಂದು ದಿಗಿಲಿನಿಂದ ಹೇಳಿದನು. ಅವನ ಭಯವನ್ನು ನೋಡಿ ನಮ್ಮ ಭಾವನವರಿಗೆ ನಿಸ್ಸಂದೇಹವಾಗಿ ಅವನನ್ನು ಬಿಟ್ಟು ಬಿಟ್ಟರು. ಆ ಹುಡುಗನು