ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

. ಮಧುಸೂದನ.

         ಒಂದನೆಯ ಅಧ್ಯಾಯ
               (ಮದವಣಿಗನೆಲ್ಲಿ)                           ಈ ದಿವಸ ವಾಸವಪುರದ ಜಹಗೀರ್‌ದಾರ್‌ ಸೋಮಸುಂದರನ ಮನೆಯಲ್ಲಿ ಬಹುಕಲಕಲ. ಮನೆಯು ತಳಿರ್ದೊರಣಗಳಿಂದಲೂ ಬಾಳೆಯಕಂಬಗಳಿಂದಲೂ ವಿವಿಧ ವಾಗಿ ಅಲಂಕೃತವಾಗಿರುವುದು. ಜನಗಳು ವಿವಿಧವೇಷಭೂಷಾದಿಗಳನ್ನು ಧರಿಸಿ ಕೊಂಡು ಬರುತ್ತಿರುವರು. ಅಧಿಕಾರಿಗಳನೇಕರು ಕುದುರೇಗಾಡಿಗಳಲ್ಲಿ ಕುಳಿತುಬಂದು ಈ ಸೋಮಸುಂದರನ ಮನೇಬಾಗಿಲಲ್ಲಿ ಕೆಳಗಿಳಿದು ಒಳಹೊಗುತ್ತಿದ್ದಾರೆ. ಸೇವಕರ ಸಡಗರವೂ ವೈದಿಕರ ಪ್ರೌಢಾವಿವಾಹ, ಸಮುದ್ರಯಾನಗಳ ಖಂಡನರೂಪವಾದ ಮಾತುಗಳೂ ಮಂಗಳವಾದ್ಯಗಳ ರವವೂ ಎಲ್ಲೆಲ್ಲಿಯೂ ಕೇಳಿಬರುತ್ತಲಿದೆ. ಈ ಸಂಭ್ರ ಮಕ್ಕೆ ಕಾರಣವೇನೆಂದು ನಾವು ವಿಚಾರಿಸಿದಾಗ ಸೋಮಸುಂದರನ ಏಕಮಾತ್ರ ಪುತ್ರ ನಾದ ಮಧುಸೂದನಿಗೆ ಮಹೋಪಾಧ್ಯಾಯ ತ್ರಿಯಂಬಕ ಶಾಸ್ತ್ರಿಗಳ ಮಗಳು ಸರಳ ಬಾಲೆಯನ್ನು ಕೊಟ್ಟು ವಿವಾಹವೆಂದು ತಿಳಿದುಬಂದಿತು.

ಸೋಮಸುಂದರನು ಶುದ್ಧ ಲೌಕಿಕನಾಗಿದ್ದಾಗ್ಯು ವೈದಿಕರಲ್ಲೂ, ವೇದಶಾಸ್ಸ್ತ್ರಗಳಲ್ಲಿಯೂ ಅಕೃತ್ರಿಮವಾದ ಭಕ್ತಿಯನ್ನಿಟ್ಟಿದ್ದನು. ಆಧುನಿಕರ ಸಂಘಸಂಸ್ಕಾರಗಳನ್ನು (ಪ್ರೌಢಾ ವಿವಾಹಾದಿಗಳನ್ನು) ಇವನು ಅನುಮೋದಿಸದೆ, ತನ್ನ ಮಗನಿಗೆ 9ವರ್ಷ ವಯಸ್ಸಿನ ಸರಳಬಾಲೆಯನ್ನು ತಂದುಕೊಂಡನು. ಬೆಳಿಗ್ಗೆ ಹತ್ತು ಗಂಟೆಗೆ ಸುರಿಯಾಗಿ ವಿವಾಹ ಲಗ್ನವು ನಿಷ್ಕರ್ಷಿಸಲ್ಪಟ್ಟಿದ್ದಿತು. ಒಂಭತ್ತು ಗಂಟೆಗೆ ಕಾಶೀಯಾತ್ರಾ ಮಹೋತ್ಸವವು ನಡೆದು ಅನುಕ್ರಮವಾಗಿ, ಪ್ರವರ ಪಾರಾಯಣ, ಮಧುಪರ್ಕ, ವಾಗ್ದಾನಗಳೇ ಮೊದಲಾದ ಶಾಸ್ತ್ರಗಳು ನೆರವೇರಿದ್ದುವು. ಮಾಂಗಲ್ಯ ಧಾರಣವು ಬೆಳೆಯುವದಕ್ಕೆ ಮೂರು ನಿಮಿಷ ನಿದೆಯನ್ನು ವಾಗ ಯುವಕನೊ