ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ೨೭೯


  ಪಲವುಕಾಲಂ ಕಳೆಯೆ ವಾಣಿಯು| ಒಲಜಪುತ್ರನ ತೊಡೆಯನೇರುತೆ| 

ಸಲಿಗೆಯಿಂದಲಿವಸನಮಿಲ್ಲದೆ ಸಿತಗೆಶಂಕಿಸದೆ ||

  ಕೆಲದೆಕುಳ್ಳಿರೆ ಜಪದಕೊನೆಯೊಳು | ನಲಿದುನೋಡಿದನಜನುವಾಣಿಯ | 

ನಲುಪಮತಿಯಿಂದಾತನಾಕೆಯಮೇಲೆ ಮೋಹಿಸಿದ || ೨೧ ||

  ಮನದೊಳಜನುವಿಮೋಹವಾಂತನು | ಮನಸಿಚಾರ್ತಿಯ ನೊಂದಿತಾ ಕಾ| 

ಮಿನಿಯಸಿಟ್ಟಿಸಿಯಾಕೆ ರಂಭೆಯೊರತಿಯೊ ದೇವತೆಯೊ ||

  ಎನತುತಪವನು ಕೆಡಿಸಲಿಂದ್ರನು | ಮನದೆಯೋಚಿಸಿ ಕಳುಪಿಶಚಿಯನು| 

ಬಿನದಗೈವನೋ ನಾಗಕನ್ನೆಯೊ ಯಿವಳೆ ರೋಹಿಣಿಯೊ || ೨೨ ||

  ಇವಳು ವಿದ್ಯಾಧರಿಯೊ ಗುಹ್ಯೆಯೊ| ಇವಳು ಯಕ್ಷಿಯೊ ಯಾತುಧಾನೆಯೊ | 

ಇವಳು ಲಕುಮಿಯೊ ಹರಿಯಮಾಯೆಯು ಬಂದು ಮೋಹಿಪುದೊ ||

  ಬವಣೆಯೇನಿದೆನುತ್ತೆ ಬೊಮ್ಮನು| ತವೆ ವಿಮೂರ್ಛಿತೆನಾಗೆ ಕಾಮದೊ| 

ಳವನ ಮೆಯ್ಯಿಂ ಜಾರ್ದವಸನವಕಂಡು ಸರಸತಿಯು || ೨೩ ||

  ಬಿದಿಯೆ ಧರಿಯಿಸು ಬೇಗಬಟ್ಟೆಯ| ನೆದೆಗೆ ಶಾಂತಿಯ ಬೇಗಮೊಂದಿಸು | 

ವಿದಿತ ತತ್ವಗೆ ತಕ್ಕುದಲ್ಲವಿದೆಂಬ ನುಡಿಗೇಳಿ ||

 ಸುದತಿಯೆನ್ನಯವಾಂಛಿತಾರ್ಥವ| ನೊದವಿಸೀ ಗಳೆನಿಪ್ಪನುಡಿಯನು | 

ಬಿದಿಯ ವದನದೆ ಕೇಳಿವಾಣಿಯುವ್ಯಸನವೆಯ್ದಿದಳು || ೨೪ ||

  ಮುನ್ನಮಾಡಿದ ಪಾಪಕರ್‍ಮವು| ಬೆನ್ನ ಬಿಡುವುದೆ ಶಾಸ್ತ್ರಗಣ ಸಂ|

ಪನ್ನದರಿವುಂ ವೋಯ್ತುಒಪತಪವಾ ಸಮಾಧಿಗಳು ||

  ಸೊನ್ನೆಯಾದುವು ಸೈಸಲಾರೆನು | ಮುನ್ನ ನೋಡುವುದೊಳ್ಳಿತೆನ್ನುತೆ| 

ಕನ್ನೆಶಾಪಕೆಬೆದು ಬಗೆಯೊಳು ಚಿಂತೆಯೊಂದಿದಳು || ೨೫ ||

   ಎಲ್ಲಿ ವಿಜ್ಞಾನಾಧ್ವವಿವರಣೆ| ಎಲ್ಲಿ ಕಾಮಾಂಧಂಗೆರಸೆಯೊಳ| 

ದೆಲ್ಲಿ ನಾಚಿಕೆಯಿರ್‍ಕುಮೆಂದೆನೆ ನುಡಿದಳಒನೊಡನೆ ||

  ಬಲ್ಲೆನಿನಗಾನಣುಗಿ ಮೇಣ್ನೀ| ನೆಲ್ಲ ವಿಧದೊಳು ತಂದೆಯೌಗಿಹೆ|

ಬಲ್ಲರೀ ವಿಧಮಾಗಿಯಾಡರೆನುತ್ತೆ ಪೇಳಿದಳು ||೨೬ ||

   ನಿಜದ ರೂವವನೆನೆದು ನೋಡೈ| ಯಜನೆ ಬಗೆಯನು ಬಿನಿಸುಸಲ್ಲದು|

ಸುಜನವಂದಿತ ಕೇಳು ನೀನೆನೆ ಕಾಮಪರವಶನು ||

   ಅಜನು ವಾಣಿಯ ಮಾತಕೇಳದೆ| ಕುಜನು ಮತಿಯನು ದೂರಗೆಯ್ಯದೆ| 

ಬೊಜಗನೆಂಬಾ ದುಷ್ಟನಾಮಕೆ ತಾನು ಗುರಿಯಾದ || ೨೭ ||