ಪುಟ:ನನ್ನ ಸಂಸಾರ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೭೮ ಬೆನಕನ ಮಹಿಮೆ

  ಎನಗೆ ತನುಜರದೆಂತುವುಟ್ಟುವ | ರೆನುತನುಗ್ರಹದಿಂದೆ ಪೇಳ್ವುದು |

ನಿನಗೆ ನಾನಭಿವಂದಿಪೆನುಗಡ ನಿನ್ನನುಡಿ ನಿಜವು ||

  ಮುನಿಗಳಾಡಿದ ಮಾತಿಗೇಗಳು | ಹನನ ಬಾರದೆನುತ್ತರಾಯನು | 

ಮನದೆ ಮೆಚ್ಚಿದ ಪರಿಯನೇನೆಂದೊರೆವೆ ಕೇಳೆಂದ ||೧೪ ||

  ನರಪ ಕೇಳೈ ಸಿಂಧುತಟದೊಳು | ಸರಸಿಯೊಂದಿಹುದಮಲತೋಯದೆ |

ಮೆರೆಗುಮಲ್ಲಿಯೆ ಕಂದಮೂಲಸುಪುಷ್ಪಸಮಿಧೆಗಳು ||

  ದೊರೆಗುಮಲ್ಲಿಗೆ ನೀನು ಪೋಪುದು | ಚರಿಸುಜಪವನು ಮಾಡುಹೋಮವ |

ತರುಣಿಪೂಜಾದ್ರವ್ಯಮೊದಗಿಸಿ ನಿನ್ನ ಸೇವಿಸಲಿ ||೧೫ ||

  ಅರಸ ಕೇಳೈ ಮಾಸನಾಲ್ಕರೊ | ಳಿರದೆ ನಿಯಮವ ನೀನು ನಡೆಯಿಸಿ | 

ಪುರವನಾಂಪುದು ಬಳಿಕಮಲ್ಲಿಂ ಮಡದಿಯೊಡಗೂಡಿ ||

  ತೆರಳಿ ರಾಜ್ಯವ ಪಾಲಿಸುತ್ತಿರು | ತರಳನುದಿಪನು ನಿಮಗೆ ನಿಜದಿಂ

ದರಸಕೇಳ್ವುದೆನುತ್ತೆಪೇಳಲ್ಮುನಿಯನುತಿಸಿದನು ||೧೬ ||

 ಬಳಿಕರಸು ಸತಿವೆರಸಿಮುನಿಪದ | ನಳಿನಯುಗಳಕೆನಮಿಸಿ ನಡೆದನು |

ನಳಿನಲೋಚನೆಯೊಡನೆ ಸಂಭ್ರಮದಿಂದಪಲ್ವಲಕೆ ||

 ಕೊಳದೊಳರಸನು ಮಿಂದುಹೋಮಾ | ವಳಿಯ ಜಪಗಳನಾತನಾಜ್ಞೆಯ |

ತಳೆದು ಮಾಡಿದ ನೆಲ್ಲಕೃತ್ಯವನೃಪತಿನಲವಿಂದ || ೧೭||

 ಆಸರೋವರದಂಚಿನೊಳ್ತಾ | ನಾಸರಸ್ವತಿವೆರಸುಬೊಮ್ಮನು |

ವಾಸಮಿರ್ದನು ವಾಣಿಯಿಂದಲಿ ಸೇವೆಕೈಕೊಂಡು ||

 ಆಸರಸ್ವತಿಬಿಬ್ಬೆಗಾದ್ಯೆಯು | ಭಾಸುರಾಂಗಿಯು, ಕಾಂತಿರಾಶಿವೊ | 

ಲಾಸುಮಾನಿನಿಯಂದಮೊರೆವೊಡೆಸಾಧ್ಯಮಿಲ್ಲೆನಗೆ ||೧೮ ||

 ಸುದತಿಯಾಕಚಭರಕೆಸೋಲಲು | ಮೊದಲು ಚಮರಿಯು ಕಚವಪಿಂತೆಗೆ | 

ದದುವೆ ಕಾರಣದಿಂದ ನಾಣ್ಚಿಯೆಬನವಸಾರಿದುದು ||

 ವದನದಂದಕೆ ಸೋಲ್ತುಗಗನಕೆ | ಬಿದುವುಪಾರಿದನಂತೆ ಚೆಲ್ವೆಯ | 

ಪದದಗತಿಯನು ಪಡೆಯಲಂಚೆಯು ಜಲವಸೇರಿದುದು || ೧೯ ||

 ದನಿಯನೊಂದಲ್ಪಿಕವು ಸುದತಿಯ | ಬನದೊಳಿರ್ಪುದು ಚರಣಸಾಮ್ಯಕೆ | 

ವನಜಮಾಶಿಸಿಜಲದೆ ನಿಂದೇಂಜಪವಮಾಡುವುದೋ ||

 ಘನದ ತೇಜದೊಳಿಂತುಮೆರೆಯುವ | ಳನಘೆಸುದತಿಯನೇಹವಾಂತುರೆ | 

ತನುವಿಗುಣವತಿತರಲು ಪೋಪಳು ಗೆಡ್ಡೆಗೆಳಸುಗಳ || ೨೦ ||