ಕಾದಂಬರೀ ಸಂಗ್ರಹ ೨೭೭
ಎಂದು ನುಡಿದಾಮಾತಕೇಳುತೆ| ಹಿಂದೆ ನಾವೇಗೆಯ್ದವದರಿಂ |
ದಿಂದು ಪುತ್ರರು ಪುಟ್ಟರೆಮ್ಮಯವಿಧಿಯ ನುಡಿದೇನು ||
ಕುಂದದೈಸಿರಿನಾಳ್ಗಳಿ೦ದೇಂ | ಸಂದಜನ್ಮದಿನೇಂಪ್ರಯೋಜನ |
ಮೆಂದುಬಗೆದುಪಯೋಗಮಿಲ್ಲೆನುತಿರ್‍ವರಾಡಿದರು ||೭||
ಬಳಿಕರಾಯನು ಪುತ್ರಕಾಮದೊ | ಳಿಳೆಯಹೊರೆಯನು ದಂಡಕೋಶವ |
ನಿಳಿಸಿ ಮಂತ್ರಿಯ ಪೆಗಲಮೇಲಕ್ಕವರನನುಸರಿಸಿ ||
ಎಳೆಯಳೊಂದಿಗೆ ರಥವನೇರುತೆ | ಪೊಳಲಪಾರ್‍ವರ ಹರಿಕೆಯೆಲ್ಲವ |
ತಳೆದು ವಿಪಿನಕೆ ತಪವಗೆಯ್ಯಲು ಪುರದೆಹೊರವಂಟ || ೮ ||
ಪಿಂತೆಬರ್ಪಾನಾಗರಿಕರನು | ಸಂತವಿಟ್ಟನುಒಳಿಕಒಲಗೊಂ |
ಡುಂತೆ ನೀವಿಂ ಪೊಳಲಸಾರ್‍ವುದೆನುತ್ತೆನೇಮಿಸಿದ ||
ಪಿಂತಿರುoಗುಲು ಜನವು ನೃಪತಾ | ನಂತು ದಾದಿಯೊಳತ್ತಪೋದನು |
ಚಿಂತೆಯಿಂದಲಿ ದೇಶದೇಶವ ನಲೆದುತೊಳಲಿದನು || ೯ ||
ಅರಸಿವೆರಸುತಲರಸಬನದೊಳು | ತಿರುಗಿಕಂಡನು ವೇದಘೋಷದೆ |
ಮೆರೆವಮೌನಿಯ ಪರ್ಣಶಾಲೆಯನಗ್ನಿಹೋತ್ರವನು ||
ತರುಸಮೂಹವೆ ಮೃಗದಬಳಗದೆ | ಮೆರೆವಪಾರ್‍ವರ ಪರ್ಣಶಾಲೆಯ |
ನಿರುಕಿಸುತ್ತಲಿನಲಿದನಾತ್ಮದೊಳಾಮಹೀಧವನು || ೧೦ ||
ಮಡದಿಯೊಡನಾರಾಯ, ಮೌನಿಗೆ | ಬಿಡದೆಪೊಡಮಡೆ ಕಂಡುಕಿತ್ತಡಿ |
ಯೊಡನೆನಿರುಕಿಸಿ, ಬಾಹ್ಯವೃತ್ತಿಯನಾಂತು ಮುನಿಪತಿಯು ||
ಒಡನೆಕುರುಪನು ನೋಡಿಯಾಗಳೆ | ಪೊಡವಿಯಾಣ್ಮನೆನುತ್ತೆಯೋಚಿಸಿ |
ಯೊಡೆಯ ನೀ ನಾರಿಲ್ಲಿಗೇಕೆಯ್ತಂದೆ ಪೇಳೆಂದ || ೧೧ ||
ನುಡಿಯಕೇಳ್ದುಂನೆಲವಮುಟ್ಟಿರೆ | ಮುಡಿಯು ರಾಯನ, ನೋಡಿಮುನಿಪನು | ಪಡಿಯನಾಡನದೇತಕೆಂದವಸರಿದುಯೋಗದಲಿ || ಪೊಡವಿಯಾಣ್ಮನದುಗುಡವರಿದಂ | ದೊಡೆಯ ನೀನೇಳೆಂದು ಬೇಗನೆ |
ನುಡಿದನಾತಗೆ ಮಗನುಜನಿಪನು ನಿಮ್ಮವೆಸರೇನು || ೧೨ ||
ಎಂಬ ನುಡಿಯನು ಕೇಳ್ದುನೃಪಮುಖ | ಬಿಂಬವಂದಾನಂದಲಹರಿಯ |
ನಿಂಬಿನಿಂದಲಿಸೂಸೆ, ಮುನಿಯನುನಮಿಸಿ ಪೇಳಿದನು ||
ಜಂಭವೈರಿಸುಮಾನ್ಯನಿನ್ನನೆ | ನಂಬಿದೆನು ನಿನ್ನು ಕ್ತಿಸತ್ಯವಿ |
ದೆಂಬೆಗುಣವತಿಯಾಕೆ ನಾನಭಿಜಿತ್ತೆನುತ್ತೊರೆದ || ೧೩ ||