ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸಾಹಿತ್ಯ ಪರಿಷತ್ತು ತರಗತಿಯ ಸಾಧಾರಣ ಸಭ್ಯರು (Ordinary members of the 1st & 2nd classes), ಮತ್ತು ಗೌರವಾರ್ಥಸಭ್ಯರು (Honorary members),ಎಂಬ ಏಳುತರಗತಿಗಳಾಗಿ ವಿಂಗಡಿಸಿಯಿದೆ. ಇವರಲ್ಲಿ ಪೋಷಕೋಪವೋಷಕರಿಗೆ ಧನಕ್ಲಪ್ತಿಯನ್ನು ಹೇಳದೆ, ೧ ಸಾವಿರ ರೂಪಾಯಿ ಕೊಡತಕ್ಕವರು ಪ್ರದಾತೃಗಳೆಂದೂ, ೫೦೦ ರೂಪಾಯಿ ಕೊಡತಕ್ಕವರು ಆಶ್ರಯದಾತರೆಂದೂ ಹೇಳಿದೆ. ಕ್ಲಪ್ತಿ ಹೇಳದ ಮೊದಲನೆಯ ಎರಡು ವರ್ಗದವರನ್ನು ಮಹಾಪೋಷಕರು (Grand Patrons) ಮತ್ತು ಪೋಷಕರು (Patrons) ಎಂಬುದಾಗಿ ಹೆಸರು ಬದಲಾಯಿಸಿ, ೧೦೦೦ ರೂಪಾಯಿ ಕೊಡತಕ್ಕವರನ್ನು ಉಪಪೋಷಕರೆಂದೂ, ೫೦೦ರೂ. ಕೊಡುವವರನ್ನು ಆಶ್ರಯದಾತರೆಂದೂ, ೨೫೦ ರೂ. ಕೊಡತಕ್ಕವರನ್ನು ಒಂದು ಹೊಸವರ್ಗವಾಗಿ ಏರ್ಪಡಿಸಿ ಪ್ರೋತ್ಸಾಹಕರೆಂದೂ ಕರೆದರೆ ಅಧಿಕಸಮಂಜಸವಾಗಬಹುದು. ಹಾಗೆಯೇ ಈಗ ಇರುವ ಆಜೀವಸಭ್ಯರ ಒಂದೇ ವರ್ಗದ ಬದಲಾಗಿ ಸಾಧಾರಣಸಭ್ಯರ ಎರಡು ವರ್ಗಗಳಿಗೆ ಸರಿಹೋಗುವಂತೆ ೧೦೦ ರೂ. ಕೊಡತಕ್ಕವರನ್ನು ಮೊದಲನೆಯ ವರ್ಗದ ಆಜೀವಸಭ್ಯರೆಂದೂ ೫೦ ರೂ. ಯವರನ್ನು ಎರಡನೆಯ ವರ್ಗದ ಆಜೀವಸಭ್ಯರೆಂದೂ ನಿಬಂಧಿಸಿದೆವಾದರೆ ಹಲವು ವಿಧವಾದ ಅನುಕೂಲತೆಗಳನ್ನು ಕೊಟ್ಟಂತಾಗುವುದು. ಹಾಗೆಯೇ ಸಾಧಾರಣಸಭ್ಯರ ಎರಡು ತರಗತಿಗಳಿಗೂ ಗೊತ್ತುಪಡಿಸಿದ ವಾರ್ಷಿಕ ವರ್ಗಣಿಯು ಅತ್ಯಧಿಕವಾಯಿತೆಂದು ನಾನು ಅಭಿ ಪ್ರಾಯಪಡುವೆನು. ೧೦೦ ರೂ. ಗೆ ವರ್ಷಕ್ಕೆ ೬ ರಂತೆ ಬಡ್ಡಿಯೆಣಿಸಿ ಮೊದಲನೆಯ ವರ್ಗದವರಿಗೆ ವರ್ಷಕ್ಕೆ ಆರುರೂಪಾಯನ್ನೂ ಎರಡನೆಯ ವರ್ಗದವರಿಗೆ ಮೂರು ರೂಪಾಯನ್ನೂ ಏರ್ಪಡಿಸುವುದು ಯುಕ್ತವೆಂದು ನನಗೆ ತೋರುತ್ತಿದೆ. ಈ ತಿದ್ದುಪಡೆಗಳನ್ನು ಮಾಡಿದೆವಾದರೆ ೫೦೦ ರೂಪಾಯಿಯ ಪ್ರೋತ್ಸಾಹ ಕರಿಂದ ಚಟ್ಟನೆ ೫೦ರೂ. ಯ ಅಚೇವಸಭಾಸದರ ವರ್ಗಕ್ಕೆ ಇಳಿಯಬೇಕಾಗಿರುವ ಈಗೆಳು ಅಭಾಸವು ಕಳೆದು ಹೋದಂತಾಗುವದು.

  • ಆಂಧ್ರಸಾಹಿತ್ಯ ಪರಿಷತ್ತಿನವರು ೫ ಸಾವಿರ ರೂ. ಕೊಡುವವರನ್ನು ಉದ್ದಾರಕ (Patrons) ರೆಂದೂ, ೧ ಸಾವಿರ ಕೊಡುವವರನ್ನು ಪೋಷಕ (Supporters) ರೆಂದೂ, ೧೦೦ ರೂ. ಕೊಡುವವರನ್ನು ಯ ಜೀವಸಭಾಸದಸರ (Life members) ರೆಂದೂ, ವರ್ಷಕ್ಕೆ ೬ ರೂ. ಕೊಡುವವರನ್ನು ಸಾಧಾರಣಸಭ್ಯರೆಂದೂ ಕರೆಯುವರು. ಇವರೆಲ್ಲರಿಗೂ ಆಂದ್ರ ಸಾಹಿತ್ಯ (ಮಾಸ) ಪತ್ರಿಕೆಯು ಉಚಿತವಾಗಿಯೇ ದೊರೆಯುವುದು. ಮಹಾರಾಷ್ಟ್ರ, ಸಾಹಿತ್ಯ ಪರಿಷತ್ತಿನ ನಿಬಂಧನೆಗಳು ಇನ್ನೂ ಕ್ರಮವಾಗಿ ಏರ್ಪಟ್ಟಂತೆ ತೋರಲಿಲ್ಲ. ಇವರು ೧೦೦ ರೂ ಕೊಡುವವರನ್ನು ಆಜೀವ ಸಭ್ಯರೆಂದೂ ವರ್ಷಕ್ಕೆ ೩ ರೂ. ಕೊಡುವವರನ್ನು ಸಾಧಾರಣಸಭ್ಯರೆಂದೂ ಪ್ರಕೃತದ ಮಟ್ಟಿಗೆ ಗೊತು ಪಡಿಸಿರುವರು. ಇವು ಮಹಾರಾಷ್ಟ್ರ, ಸಾಹಿತ್ಯ ಪತ್ರಿಕೆಗೆ ವರ್ಷಕ್ಕೊ೦ದು ರೂಪಾಯಿಕೊಡಬೇಕಾಗಿದೆ.

- -