ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರೋಹಿಣಿ.

ಎಲೌ ! ಭಾತೃವಾತ್ಸಲರಾದ ರಮಣಿಯರೆ ? ನೀವು ಯಾವವಿಧವಾದ ಯೋಚ ನೆಯನ್ನೂ ಮಾಡದಿರಿ ! ಕರುಣಾಕರ ದಯಾಕರರೀರ್ವರನ್ನೂ ಈ ದಿನ ಸಂಧ್ಯಾ ಕಾಲ ದೊಳಗಾಗಿ ಎಲ್ಲಿದ್ದರೂ ಹುಡುಕಿಸಿ ತಮ್ಮ ಬಳಿಗೆ ಬರಮಾಡುವೆನು ಎಂದು ಹೇಳಿ ರೋಹಿಣಿಯನ್ನು ಕಣ್ಣು ತುಂಬ ನೋಡಿ ಆನಂದಪರವಶನಾಗಿ ಸೈನ್ಯಾಧಿಕಾರಿಯನ್ನು ಕುರಿತು ಈ ಯುವತಿಯರಿಬ್ಬರನ್ನೂ ಕರೆದುಕ್ಕೊಂಡು ಹೋಗಿ ಅವರಿಗಾಗಿ ಬೇರೆ ಯೊಂದು ಕೊಠಡಿಯನ್ನು ತೆರವುಮಾಡಿಕೊಡಬೇಕು. ಮತ್ತು ಇವರ ಉಪಚಾರಗಳನ್ನು ನೀನೇ ಸಾಕ್ಷಾತ್ತಾಗಿ ನೋಡಿಕೊಳ್ಳಬೇಕೆಂದು ಆಜ್ಞೆಯಿತ್ತು ಭೋಜನಶಾಲೆಯನ್ನು ಹೊಕ್ಕನು. ಭೋಜನಾಲಯದಲ್ಲಿ ಪದ್ಧತಿಗನುಸಾರವಾಗಿ ಎಲ್ಲವೂ ಸಿದ್ಧವಾಗಿದ್ದಿತು. ರಾಜಬಂಧುಗಳೂ, ಮಂತ್ರಿಗಳೂ, ಸೇನಾಧಿಕಾರಿಗಳೂ ಇತರ ಅಧಿಕಾರಿಗಳೂ ತಮ್ಮ ತಮ್ಮ ನಿಯಮಿತಸ್ಥಳಗಳಲ್ಲಿ ಕುಳಿತರು. ಎಲ್ಲರೂ ಭುಂಜಿಸಿದರು, ಆದರೆ ಚಕ್ರವ ರ್ತಿಯು ಮಾತ್ರ ನಿತ್ಯವೂ ಇದ್ದಂತೆ ಇರದೆ ಯಾರಜೊತೆಯಲ್ಲಿಯೂ ಮಾತನ್ನಾಡದೆ ಸುಮ್ಮನೆ ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದು ದನ್ನು ಕಂಡು ಉಳಿದವರೆ ಲ್ಲರೂ ಚಕಿತರಾದರು. ಆದರೆ ಕಾರಣವನ್ನು ಕೇಳಲು ಯಾರಿಗೆತಾನೇ ಧೈರ್ಯ. ಯಾರೊಬ್ಬರೂ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಸೇನಾಪತಿಯು ರೋಹಿಣಿ, ಕರುಣಾಂಬೆಯರನ್ನು ಕರೆದುಕೊಂಡು ಬಂದುಬಿಟ್ಟ ಸಂಗತಿ ವಿನಹ ಮತ್ಯಾವದನ್ನೂ ಅರಿಯನು.

ಸಸ್ತಮಲಹರಿ.

ಚಿಂತೆಗೂ ಚಿತೆಗೂ ಒಂದು ಬಿಂದು ಮಾತ್ರ ವ್ಯತ್ಯಾಸವಿರುವಾದರೂ ಮೊದಲ ನೆಯದು ನಿರ್ಜೀವ ವಸ್ತುಗಳನ್ನೂ ಎರಡನೆಯದು ಸಜೀವ ವಸ್ತುಗಳನ್ನೂ ದಹಿಸಿಬಿಡು ವುದು, ಲೋಕದಲ್ಲಿ ಎಲ್ಲಾ ರೋಗಗಳಿಗೂ ಔಷಧಗಳೂ ಚಿಕಿತ್ಸೆಗಳೂ ಉಂಟು. ಆದರೆ ಈ ಚಿಂತಾರೋಗಕ್ಕೆ ಯಾವ ಔಷಧವೂ ಚಿಕಿತ್ಸೆಯೂ ದೇವಲೋಕದ ವೈದ್ಯ ಶಿರೋಮಣಿಗಳಾದ ಅಶ್ನನೀದೇವತೆಗಳೂ ಕೂಡ ಕಂಡುಹಿಡಿದ ಹಾಗೆ ಕಾಣಬರಲಿಲ್ಲ.