ಪುಟ:ನನ್ನ ಸಂಸಾರ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಾದಂಬರಿಸಂಗ್ರಹ

ವಾದ ಚಿತ್ರಪಠಗಳಿಂದ ಅಲಂಕರಿಸಿದ್ದರು. ಈ ಗೃಹವು ಮೊದಲು ಸುವರ್ಣಪುರಾಧೀ ಶ್ವರನ ಬೇಸಿಗೆಯಕಾಲದ ಆರಾಮಮಂದಿರವಾಗಿದ್ದಿತು. ಅವಂತೀಶನು ಆ ರಾಜ್ಯ ವನ್ನು ತನ್ನ ಕೈವಶಮಾಡಿಕೊಂಡ ಕೂಡಲೇ ಪಟ್ಟಣದ ನಾನಾ ಭಾಗಗಳಲ್ಲಿಯ ಯುದ್ಧದಲ್ಲಿ ಮೃತಪಟ್ಟವರ ದೇಹಗಳು ನಾರುತ್ತಾ ಕೊಳೆತು ದುರ್ಗಂಧಗಳನ್ನು ಬಿಸಿ ದೆಸೆಗೂ ಬೀರುತ್ತಿದ್ದುದರಿಂದ ಆ ದುರ್ಗಂಧವನ್ನು ಸಹಿಸಲಾರದೆ ಈ ಮಂದಿರದಲ್ಲೇ ವಾಸಿಸುತ್ತಿದ್ದನು. ಸೇನಾಪತಿಯು ರೋಹಿಣಿ ಕರುಣಾಂಬೆಯರೊಂದಿಗೆ ಆ ಮಂದಿರಕ್ಕೆ ಪ್ರವೇಶಿಸಿ ದನು. ದಿವಾನಖಾನೆಯಲ್ಲಿ ಆರಾಮಕುರ್ಚಿಯಮೇಲೆ ಸುಖಾಸೀನನಾಗಿದ್ದ ಅವಂತೀಶ್ವ ರನಿಗೆ ರೋಹಿಣಿ ಕರುಣಾಂಬೆಯರನ್ನು ತಾನು ಹುಡುಕಿಸಿ ಕರತಂದಿರುವೆನೆಂದು ವಿಜ್ಞಾವಿ ಸಿಕೊಂಡು ಆ ಯುವತಿಯರಿಬ್ಬರನ್ನೂ ದಿವಾನಖಾನೆಯಲ್ಲಿಯೇ ಬಿಟ್ಟು ತಾನು ಹೊರಟು ಹೋದನು. ಆ ಅವಂತೀಶನು, ಮೌನದಿಂದ ತಲೆವಾಗಿ ರೋಹಿಣಿ ಕರುಣಾಂಬೆಯರನ್ನು ಕುರಿತು ನೀವು ಯಾರೆಂದು ಪ್ರಶ್ನೆ ಮಾಡಲು ಯಾವ ಉತ್ತರವೂ ಬರಲಿಲ್ಲ. ಅವಂತೀಶ :-ಎಲೌ ಸುಂದರಿಯರೆ ಏತಕ್ಕೆ ಮೌನವನ್ನು ಧರಿಸಿರುವಿರಿ? ನನ್ನನ್ನು ನಿಮ್ಮ ಸಹೋದರನೆಂದು ನಂಬಿ ನಿಮ್ಮ ವೃತ್ತಾಂತವನ್ನ ತಿಳಿಸಿರಿ. ಕರುಣಾಂಬೆ :-ಭೂಮೀಶ್ವರನೆ ! ನಾನು ಸುವರ್ಣಪುರಾಧೀಶ್ವರನ ತೃತೀಯ ಪತ್ನಿ ಯು. ಈಕೆಯು ನನ್ನ ಸೋದರಪಾಲಿತ ಪುತ್ರಿ. ಅವಂತೀಶ :-ಹಾಗಾದರೆ ನಿಮ್ಮ ಸೋದರರು ಯಾರು ? ಕರುಣಾಂಬೆ:-ಆ ಪರೋಪಕಾರಶಿಖಾಮಣಿಗಳು ತಮಗೂ, ಸುವರ್ಣಪುರಾ ಧೀಶ್ವರನಿಗೂ, ನಡೆದ ಯುದ್ಧರಂಗದಲ್ಲಿ ಘಾಯಪಟ್ಟು ಮರಣೋನ್ಮುಖರಾಗುವವರ ಸಹಾಯಕರಾಗಿ ಇಲ್ಲಿ ಇರುವರೆಂದು ತಿಳಿದು, ಬಂದೆವು. ಅವಂತೀಶ :-ಹಾಗಾದರೆ ನೀವು ಕರುಣಾಕರ, ದಯಾಕರರ ಸಹೋದರಿಯರೊ? ಕರುಣಾಂಬೆ :-ಹೌದು, ಮಹಾಪ್ರಭು ! ಅವಂತೀಶ :-ನಿಮ್ಮ ಬಳಿಯಲ್ಲಿ ನಿಂತಿರುವ ಈ ಸುಂದರೀಮಣಿಯು ಕರುಣಾಕ ರರ, ದಯಾಕರರ ಸಾಕುಮಗಳೆಂದು ಹೇಳಿದರಷ್ಟೆ ? ಅದು ಹೇಗೆ ? ಕರುಣಾಂಬೆಯು ಅವಂತೀಶನೊಡನೆ ರೋಹಿಣಿಯು ಶಿಶುವಾಗಿದ್ದಾಗಿನಿಂದಲೂ ಅವಳ ಚರಿತ್ರೆಯನ್ನು ಸವಿಸ್ತಾರವಾಗಿ ವಿಜ್ಞಾಪಿಸಿಕೊಂಡಳು. ಇದನ್ನು ಕೇಳಿದ ಕೂಡಲೇ ಅವಂತೀಶನು ತುಂಬಾ ವ್ಯಸನಾಕ್ರಾಂತನಾಗಿ ರೋಹಿಣಿ ಕರುಣಾಂಬೆಯರ ಅಷಕಿ ೩೫...