ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಹಿಣಿ

ಹೋಗುವುದು ಉತ್ತಮ. ಆದರೆ ನಾನೇನೋ ವೃದ್ದಳು ರೋಹಿಣಿಯು ಯೌವನಾ ರಂಭದಲ್ಲಿರುವಳು. ಅಲ್ಲದೆ ಅಸಾಧಾರಣರೂಪವತಿಯ. ಜಗದೀಶ್ವರನು ಹಿಂದೆ ಅನಾಥ ಳಾಗಿದ್ದ ರೋಹಿಣಿಯನ್ನು ಕಾಪಾಡಿದಂತೆ ಈಗಲೂ ಪಾಲಿಸುವುದರಲ್ಲಿ ಸಂಶಯವೇನಿ ರುವುದು ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ಸೇನಾಪತಿಯೊಡನೆ ಹೊರಟಳು. ಎಲ್ಲರೂ ರಣಾಂಗಣವನ್ನು ಬಿಟ್ಟು ಒಂದು ಬಯಲಿಗೆ ಬಂದರು. ಅಲ್ಲಿ ಒಂದು ನದಿಯು ಹರಿಯುತ್ತಿತ್ತು, ತಪೋನಿಧಿಗಳಾದ ಬ್ರಾಹ್ಮಣರು ಲೋಕಕಲ್ಯಾಣಾರ್ಥವಾಗಿ ಸಂಚಾರ ಮಾಡಿಕೊಂಡು ಅಸ್ತಾಚಲಶಿಖರದಮೇಲೆ ವಿಶ್ರಮಿಸಿಕೊಂಡ ಸೂರ್ಯನಾರಾಯಣನಿಗೆ ಸೀತೋಪಚಾರಮಾಡಲೆಸಸಗಿರುವಂತೆ ಅಘ್ರ್ರಗಳನ್ನು ಕೊಡುತ್ತಲಿರುವರು. ಸುವಾಸಿನಿ ಯರು ತುರುಬಿನಲ್ಲಿ ಹೂ ಮುಡಿದು ತಾಂಬೂಲವನ್ನು ಸವಿಯುತ್ತಾ ಥಳಥಳಿಸುವ ಕೊಡಗಳನ್ನು ತೆಗೆದುಕೊಂಡು ದಂಡೆಯ ಮೇಲೆ ಕುಳಿತು ಪರಸ್ಪರ ವಿನೋದ ಹಾಸ್ಯಾ ಸ್ಪದವಾದ ಮಾತುಗಳನ್ನಾಡುತ್ತಿರುವರು. ಇದನ್ನು ನೋಡಿದರೆ ಸುರಾಂಗನೆಯರು, ಗಂಗೆಯ ಸುಧಾಮಯ ಸಲಿಲಕ್ಕಿಂತಲೂ ಈ ನದಿಯ ನೀರು ಹೆಚ್ಚು ಸವಿಯಾಗಿ ಕಂಡುಬಂದುದರಿಂದ ಸುವರ್ಣಕಲಶಗಳನ್ನು ತಂದು ಈ ನೀರನ್ನು ಒಯ್ಯುವರೋ ಎಂಬಂತೆ ಕಾಣುತ್ತಿತ್ತು. ರೋಹಿಣಿ ಕರುಣಾಂಬೆಯರು ಈ ಸೃಷ್ಟಿ ವೈಭವವನ್ನೂ ಕೂಡ ನೋಡದೆ ಸೇನಾಪತಿಯ ಹಿಂದೆ ಸಾಗಿದರು. ಒಂದು ರಮ್ಯವಾದ ವನಸಿಕ್ಕಿತು. ಸಂತ ಸವಾಗಿ ಹರಿಯುವ ಹಳ್ಳವು ನಾಗಮುರಿಯಂತೆ ಈ ಉದ್ಯಾನದಲ್ಲಿ ಹಾಯ್ದು ಹೋಗಿ ದ್ದುದರಿಂದ ಅದು ಬಹು ರಮಣೀಯವಾಗಿದ್ದಿತು. ಹೀಗೆ ಮುಂದೆ ಎರಡು ಮಗ್ಗು ಲಿಗೂ ವಿಧವಿಧವಾಗಿ ಗಿಡಗಳು ಹಾಕಲ್ಪಟ್ಟಿದ್ದವು. ಸ್ವಲ್ಪ ದೂರದಲ್ಲಿ ಒಂದು ರಮಣೀ ಯವಾದ ಸೌಧವು ಕಾಣಿಸಹತ್ತಿತು, ಸೌಧದಿಂದ ವನವನ್ನು ಸೇರಲು ನಾಲ್ಕು ಹಾದಿ ಗಳಿದ್ದುವು. ಅಲ್ಲಲ್ಲಿ ವೃಕ್ಷ ವಾಟಿಕೆಗಳಿದ್ದು ಅವುಗಳ ಮಧ್ಯದಲ್ಲಿ ವಿಶ್ರಾಂತಿಗಾಗಿ ಹಲಗೆಯ ಮತ್ತು ಕಬ್ಬಿಣದ ಆಸನಗಳನ್ನು ಹಾಕಿದ್ದರು. ಉಪವನದಿಂದ ಮಂದಿರಕ್ಕೆ ಹೋಗುವುದಕ್ಕೆ ಕೆಂಪುಮಣ್ಣು ಮರಳುಸೇರಿಸಿ ಅದರಿಂದ ಮಾಡಿದ ಪ್ರಶಸ್ತವಾದ ಮಾರ್ಗ. ಎದುರಿಗೆ ಮೂರು ಅಂತಸ್ತಿನ ಮಹಡಿಯ ಮನೆ. ಅದಕ್ಕೆ ಹತ್ತುವುದಕ್ಕೆ ಅಮೃತಶಿಲೆಯಿಂದ ನಿರ್ಮಿತವಾದ ಮೆಟ್ಲುಗಳು, ಮನೆಯ ಮುಂಭಾಗದಲ್ಲಿ ಉಭಯ ಪಾರ್ಶ್ವದಲ್ಲಿಯೂ ಪಹರೆ ಯವರು ಇರುವುದಕ್ಕೆ ಮನೆಗಳು. ಮಹಡಿಯಮೇಲೆ ಸುಂದರವಾದ ನೆಲಕ್ಕೆ ಚಿತ್ರಮಯವಾದ ರತ್ನ ಗಂಬಳಿಯನ್ನು ಹಾಸಿದ್ದರು. ಮಧ್ಯಭಾಗದಲ್ಲಿ ಒಳ್ಳೆಯ ನುಣುಪಾದ ಕರೀ ಹಲಗೆಯ ವಿಸ್ತಾರವಾದ ದುಂಡುಮೇಜವಿದ್ದಿತು. ಅದರ ಸುತ್ತಲೂ ನಾಲ್ಕಾರು ಕುರ್ಚಿಗಳಿದ್ದುವು. ಗೋಡೆಗಳನ್ನು ನಾನಾವಿಧವಾದ ಸುಂದರ