ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕಾದಂಬರಿಸಂಗ್ರಹ

ರೋಹಿಣಿಯು ತನ್ನ ಅತ್ತೆಯೊಡನೆ ರಾತ್ರಿಯೆಲ್ಲಾ ಭಯದಿಂದಲೂ, ಕರುಣಾ ಕರ, ದಯಾಕರರು ಸಿಗಲಿಲ್ಲ ವೆಂಬ ವ್ಯಸನದಿಂದಲೂ, ಕಲ್ಯಾಣಪುರದಿಂದ ನಡೆದು ಬಂದುದರಿಂದುಂಟಾದ ಆಯಾಸದಿಂದಲೂ, ಮುಂದಕ್ಕೆ ಒಂದು ಹೆಜ್ಜೆಯನ್ನಾ ದರೂ ಇಡುವುದಕ್ಕೆ ಆಗದೆ ಹೋಗಲು ಅಲ್ಲಿಯೇ ಕುಳಿತುಬಿಟ್ಟಳು. ಭೃತ್ಯರಲ್ಲಿ ಒಬ್ಬನು ಇವರಿ ಬ್ಬರನ್ನೂ ದೂರದಿಂದಲೇ ನೋಡಿ ಶವದುರ್ಗಂಧವಾದ ರಣಾಂಗದಲ್ಲಿ ಹೀಗೆ ಯೋಚ ನಾಸರಳಾಗಿ ಕುಳಿತಿರುವ ಯುವತಿ ಯಾರು ? ಇವರು ಯಾವ ಕಾರ್ಯಾರ್ಥವಾಗಿ ಕುಳಿತಿರಬಹುದು ? ನಮ್ಮ ಸೇನಾಪತಿಯು ಕರತರಬೇಕೆಂದು ಆಜ್ಞಾಪಿಸಿದ್ದು ಇವರನ್ನೇ ಇರಬಹುದೆ ? ಹಾಗೆ ಇವರೇ ನಾವು ಹುಡುಕುವ ವ್ಯಕ್ತಿಯಾದಲ್ಲಿ ನನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ ಎಂದು ತನ್ನಲ್ಲಿತಾನೇ ಆಲೋಚಿಸುತ್ತಾ ಅವರಿಬ್ಬರ ಬಳಿಗೆ ಹೋಗಿ ತಾಯೆ ! ತಾವು ಯಾರು ? ಇಲ್ಲಿಗೆ ಯಾತಕ್ಕಾಗಿ ಬಂದಿರುವಿರಿ? ಎಂದು ಕೇಳಲು ರೋಹಿಣಿಯು ನಾವು ಯಾರಾದರೇನು ? ನಿನಗೆ ತಿಳಿದಿದ್ದರೆ ಕರುಣಾಕರ ದಯಾಕರರ ಸಮಾಚಾರವನ್ನು ತಿಳಿಸು ಇಲ್ಲವಾದರೆ ನಿನ್ನ ದಾರಿಯನ್ನು ಹಿಡಿದುಕೊಂಡು ಹೊರಡ ಬಹುದು. ನಮ್ಮ ವೃತ್ತಾಂತವನ್ನು ತಿಳಿಸುವುದಕ್ಕೆ ಮುಂಚಿತವಾಗಿ ಕರುಣಾಕರ ದಯಾಕರರ ಸಮಾಚಾರವನ್ನು ತಿಳಿಯಲು ನಮ್ಮ ಮನಸ್ಸು ಬಾಧಿಸುತ್ತಿರುವುದು. ಎಂದು ಹೇಳಿದಳು ಈ ಮಾತುಗಳನ್ನು ಕೇಳಿದ ಭೃತ್ಯನು ತನ್ನ ಸೇನಾಪತಿಬಳಿಗೆ ಹೋಗಿ ಅಲ್ಲಿ ನಡೆದ ವಿದ್ಯಮಾನಗಳನ್ನು ಆದ್ಯಂತವಾಗಿ ತಿಳಿಸಿದರು. ಕೂಡಲೇ ಸೇನಾಪತಿಯು ಭೃತ್ಯನ ಜೊತೆಯಲ್ಲಿ ಆ ವನಿತೆಯರಿಬ್ಬರಿದ್ದ ಸ್ಥಳಕ್ಕೆ ಹೊರಟನು. ಪೂರ್ವಪರಿಚಿತನಾದ ಸೇನಾಪತಿಯನ್ನು ನೋಡಿ ಕರುಣಾಂಬೆಯು ಅವನ ಬರುವಿಕೆಗೆ ಕಾರಣವನ್ನು ಕೇಳಿದಳು. ಅದಕ್ಕೆ ಸೇನಾಪತಿಯು ಚಕ್ರವರ್ತಿಸಾರ್ವಭೌಮರು ತಮ್ಮನ್ನು ಅವರ ಬಿಡಾರಕ್ಕೆ ಕರೆತರುವಂತೆ ಆಜ್ಞಾಪಿಸುವರು. ಅದೇ ಪ್ರಕಾರ ನಿಮ್ಮನ್ನು ಹುಡುಕುವುದಕ್ಕೋಸ್ಕರ ಅನೇಕ ಸೇವಕರನ್ನು ಕಳುಹಿಸಿ ಕಡೆಗೆ ಈ ನೃತ್ಯ ನಿಂದ ತಮ್ಮ ಸಮಾಚಾರವನ್ನು ತಿಳಿದು ನಾನೇ ಬಂದಿರುವೆನು. ಜಾಗ್ರತೆಯಾಗಿ ತಾವು ಹೊರಟರೆ ತಮ್ಮನ್ನು ಚಕ್ರವರ್ತಿಸಾ ರ್ವಭೌಮರವರ ಸನ್ನಿಧಿಗೆ ಕರದುಕೊಂಡು ಹೋಗುವೆನು ಎಂದು ಬಹು ನಮ್ರಭಾವದಿಂದ ಹೇಳಲು, ರೋಹಿಣಿ ಮತ್ತು ಕರು ಣಾಂಬೆಯರು ತಮ್ಮನ್ನು ಚಕ್ರವರ್ತಿಯು ಕರೆಸಲು ಕಾರಣವೇನಿರಬಹುದು ? ರಣಾಂಗಕ್ಕೆ ಪ್ರವೇಶಿಸಿದ ಸಂಗತಿಯನ್ನು ತಿಳಿದು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದಿರಬಹುದೆಂದು ಶಾಸನಮಾಡಲೇನಾದರೂ ಕರೆಸಿರುವನೋ ? ಹೇಗಿದ್ದರೂ ಹೋಗಿಯೇ ತೀರಬೇಕು. ಅವರ ಬಲಾತ್ಕಾರದಿಂದ ನಾವು ಹೋಗುವುದಕ್ಕಿಂತಲೂ, ಮರ್ಯಾದೆಯಾಗಿ ನಾವೇ