ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಕಾದಂಬರೀ ಸಂಗ್ರಹ ಎಲ್ಲವನ್ನೂ ಪತ್ತೆಮಾಡಿರುವ ವಿಷಯವನ್ನು ನೋಡಿ ನನಗೆ ಆಶ್ಚರವಾಗುತ್ತದೆ. ಕಳ್ಳರನ್ನು ಯಾವಾಗ ಹಿಡಿಯೋಣ ?

     ಭಾಸ್ಕರ :-ನಾನು ವಾಸವಪುರದ ಜಾಮೀನ್ದಾರನ ಪರವಾಗಿ ಇಲ್ಲಿಗೆ ಬಂದು 

ಅವನ ಮಗನ ವಿಷಯವಾಗಿ ಪತ್ತೇಮಾಡುತ್ತಿರಲು ಇತರ ವಿಷಯಗಳೂ ನನ್ನ ಮಾರ್ಗ ದಲ್ಲಿ ತಾವಾಗಿಯೇ ಬಂದವು.

     ಭಾಸ್ಕರನೂ ಪೊಲೀಸ್ ಕಮಿಷನರೂ "ಬಹಳಹೊತ್ತು ಮಾತನಾಡುತ್ತಿದ್ದು 

ಎಲ್ಲಾ ವಿಷಯಗಳನ್ನೂ ಕ್ರಮವಾಗಿ ತೀರ್ಮಾನಮಾಡಿಕೊಂಡ ಮೇಲೆ ಭಾಸ್ಕರನು ಆಪ್ಪಣೆಯನ್ನು ಪಡೆದು ಗೋವಿಂದನ ಮನೆಗೆ ಹೋದನು, ಅದೇ ದಿವಸ ಮಧ್ಯಾಹ್ನ ಹರಿಚಂದ್ರನು ಭಾಸ್ಕರನ ನಯಭಯಗಳಿಗೊಳಪಟ್ಟು ತಮ್ಮ ಸಂಘಕ್ಕೆ ಸಂಬಂಧವಾದ ಎಲ್ಲಾ ವಿಷಯಗಳನ್ನೂ ಅಂದರೆ (1) ಮಧುಸೂದನನನ್ನು ವಿಶ್ವನಾಥನು ಎತ್ತಿಕೊಂಡು ಹೋದ ವಿಷಯವನ್ನೂ, (2)ವಿವಾಹದ ದಿವಸ ತಾನು ಜನಗಳ ಮಧ್ಯದಲ್ಲಿ ನುಗ್ಗಿ ತಮ ಯಜಮಾನನಾದ ವಿಶ್ವನಾಥನು ಬಂದು ಮಧುಸೂದನನ ಕೊಠಡಿಯಲ್ಲಿ ಕಾದಿರುವ್ಮ ಹಾಗೂ ತಕ್ಷಣವೇ ಬಾರದಿದ್ದರೆ ಮಧುಸೂದನನು ತನಗೆ ಕೊಡಬೇಕಾದ ಇಪ್ಪತ್ತು ಸಾವಿರ ರೂಪಾಯಿಗಳ ವಿಷಯವನ್ನೂ ಮತ್ತು ಅವನು ತನ್ನ ಮಗಳನ್ನು ಮದುವೆ ಯಾಗುವೆನೆಂದು ಮಾತು ಕೊಟ್ಟಿದ್ದ ವಿಷಯವನ್ನೂ ತಿಳಿಸುವುದಾಗಿ ಹೇಳಿರುವನೆಂಬ ವಿಷಯಗಳನ್ನೆಲ್ಲಾ ಅವನೊಡನೆ ಹೇಳಿದನು. ಭಾಸ್ಕರನು ಅವನನ್ನು ಸರ್ಕಾರದ ವರ ಪಕ್ಷದ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿ ಅವನನ್ನು ಪುನಃ ಕೊಠಡಿ ಯಲ್ಲಿ ಕೂಡಿಟ್ಟನು.

   ಅದೇ ದಿವಸ ಮಧ್ಯಾಹ್ನ 'ಎಂ' ಸಂಘದವರ ಗುಪ್ತ ಗೃಹದಲ್ಲಿ ಮಾರನೇದಿವ

ಸದ ವಿವಾಹಕ್ಕಾಗಿ ಎಲ್ಲವನ್ನೂ ಸಿದ್ಧ ಪಡಿಸಿಟ್ಟುಕೊಳ್ಳುತ್ತಿದ್ದರು. ಒಂದು ಕಡೆಯಲ್ಲಿ ಮಧುಸೂದನನೂ ವಿಶ್ವನಾಥನೂ ಕುಳಿತುಕೊಂಡು ಮಾತನಾಡುತ್ತಿದ್ದರು. ಅವರ ಮುಂದುಗಡೆ ಮೇಜಿನಮೇಲೆ ಮೂರು ಶೀಸೆಗಳ ವ್ಹಿಸ್ಕಿಯೂ, ಒಂದು ತಟ್ಟೆಯಲ್ಲಿ ಕೆಲವು ಫಲಹಾರ ಸಾಮಗ್ರಿಗಳೂ ಮತ್ತೊಂದುಕಡೆ ಕೆಲವು ಹೊಗೆಯಬತ್ತಿಗಳೂ ಇದ್ದವು. ವಿಶ್ವನಾಥನು ಬಟ್ಟಲುಗಳಲ್ಲಿ ಮದ್ಯವನ್ನು ತುಂಬಿತುಂಬಿ ಮದುಸೂದನನಿಗೆ ಕುಡಿಸುತ್ತಿದ್ದನು. ಅಯ್ಯೋ ! ಅತ್ಯಂತ ಆಚಾರಸಂಪನ್ನನಾದವನ ಪುತ್ರನಾಗಿ ಹುಟ್ಟಿ ತಾನೂ ಆಚಾರಸಂಪನ್ನನಾಗಿದ್ದು ಈಗ ಸಹವಾಸದೋಷದಿಂದ ಒಂದೇಸಲಕ್ಕೆ ತನ್ನ ಆಚಾರವನ್ನೂ, ಶೀಲವನ್ನೂ, ಜಾತಿಯನ್ನೂ ಮರೆತು ಮದ್ಯಪಾನ ಮಾಡುತ್ತಿರು