ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೫


                                 ರಾಧವ್ವ 
   ಸುಮಾರಾಗಿ ಮರೆತೇ ಹೋಗಿರುವ ನನ್ನ ಬಾಲ್ಯದ ದಿನಗಳ ಪೈಕಿ ಇನ್ನೂ ಆಗಾಗ ನೆನಪಿಗೆ ಬರುತ್ತಿರುವ ಕೆಲವೇ ಘಟನೆಗಳಲ್ಲಿ ಒಂದು- ನಾವು ಮನೆಯವರೆಲ್ಲ ಕೂಡಿಕೊಂಡು ನಮ್ಮ ನಗರದಿಂದ ಸುಮಾರು ಐವತ್ತು ಕಿಲೋಮೀಟರು ದೂರವಿರುವ ಹನುಮಾಪುರವೆಂಬ ಹಳ್ಳಿಯ ಹನುಮಂತದೇವರ ದರ್ಶನಕ್ಕೆ ತಪ್ಪದೆ ಹೋಗುತ್ತಿದ್ದುದು. ಬಹು ಜಾಗೃತ ಪ್ರಾಣದೇವರೆಂಬ ಖ್ಯಾತಿಯ ಆ ದೇವರ ದರ್ಶನಕ್ಕಗಿ ಹಳೆಯ ಮುಂಬಯಿ ಪ್ರಾಂತ್ಯದ ಹಾಗೂ ಈಗಿನಾ ಉತ್ತರ ಕರ್ನಟಕದ ಎಲ್ಲೆಡೆಯಿಂದ ಜನ ಬರುತ್ತಿದ್ದರು. ಪ್ರತಿ ವರ್ಷ ವೈಶಾಖ ಶುದ್ಧ ಪ್ರತಿಪದೆಯಿಂದ ವ್ಯಾಸಪೂರ್ಣಿಮೆಯವರೆಗೆ ಹದಿನೈದು ದಿನ ಅಲ್ಲಿ ತುಂಬಾ ವಿಜೃಂಭಣೆಯಿಂದ ಜರುಗುವ ಉತ್ಸವದ ಖರ್ಚನ್ನು ಒಂದೊಂದು ದಿನ ಒಬ್ಬೊಬ್ಬ ಗಣ್ಯ ಶ್ರೀಮಂತ ಭಕ್ತರು ನಿರ್ವಹಿಸುತ್ತಿದ್ದರು. ಆ ಉತ್ಸವದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಜನ ಸೇರುವ ರಾಮನವಮಿಯ ದಿನದ ಖರ್ಚು ನನ್ನ ತಂದೆಯವರ ಪಾಲಿನದಾಗಿತ್ತು. ನನ್ನ ತಂದೆ-ತಾಯಿ ಇಬ್ಬರೂ ತುಂಬಾ ಶ್ರದ್ಧೆ-ನಂಬಿಕೆ-ಭಕ್ತಿಯಿಂದ ಆ ಉತ್ಸವವನ್ನು ಮಾಡಿಸುತ್ತಿದ್ದರು. ಸೇರಿದ ಸಾವಿರಾರು ಜನರಿಗೆ ಆ ದಿನ ಜಿಲೇಬಿ-ಬೂಂದಿ, ಲಾಡು-ಬೇಸನ್, ಲಾಡು-ಹಯಗ್ರೀವ ಇತ್ಯಾದಿಗಳ ಸಮಾರಾಧನೆಯಾಗಿತ್ತಿತ್ತು. ಉಳಿದ ದಿನಗಳಲ್ಲೆಲ್ಲ ಬರಿ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿರುತ್ತಿದ್ದ ಸಮಾರಾಧನೆ ರಾಮನವಮಿಯ ದಿನ ಮಾತ್ರ ಎಲ್ಲ ಜಾತಿಯವರಿಗೂ ತಲುಪುತ್ತಿತ್ತು. ನನ್ನ ತಾಯಿ ಸ್ವತಃ ಸೆರೆಗು ಕಟ್ಟಿ ನಿಂತು ದೇವಸ್ಥಾನದ ಉಳಿಗದವರಿಗೆ ಹಾಗು ಊರಿಲ್ಲಿನ ಎಲ್ಲ ಶೂದ್ರರಿಗೆ ಒತ್ತಾಯ ಮಾಡಿ ಉಣಬಡಿಸುತ್ತಿದ್ದುದು ನನಗಿನ್ನೂ ನೆನಪಿದೆ. ಅಷ್ಟೇ ಅಲ್ಲ, ಊಟದ ನಂತರ ಆಕೆ ಅವರೆಲ್ಲರೊಂದಿಗೆ ಕೂತು ಅವರ ಸುಖ-ದುಃಖ ವಿಚಾರಿಸಿ, ಅವರಿಗೆ ಬಟ್ಟೆ ಬರೆ ದಾನಮಾಡಿ,ಔಷಧೋಪಚಾರದ ವ್ಯವಸ್ಥೆಯನ್ನು ಮಾಡಿ, ಸಾಕಷ್ಟು ಧನ ಸಹಾಯವನ್ನೂ ಮಾಡುತ್ತಿದ್ದರು. ಈ ಪರಂಪರೆ ರಾಮನವಮಿಯ ದಿನ ಮಾತ್ರವಲ್ಲ, ಕಾರ್ತಿಕ ಮಾಸದಲ್ಲೊಮ್ಮೆ, ಚೈತ್ರ ಮಾಸದಲ್ಲೊಮ್ಮೆ, ನಡುನಡುವೆ ಮಹತ್ವದ ಅಮಾವಾಸ್ಯೆಗಳು ಬಂದಾಗ, ಹಾಗೂ ನಗರದ ನಮ್ಮ ಮನೆಯಲ್ಲಿ ಏನಾದರೂ ಸಮಾರಂಭ ನಡೆದ ನಂತರ,ಹೀಗೆ