ಪುಟ:AAHVANA.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




                 ಅನುಭಂದ
                 --:೦:--
   [೧೩೪-೧೩೬ನೇಯ ಪುಟಗಳಲ್ಲಿರುವ ಹಿಂದೀ ವಾರ್ತಾಪ್ರಸಾರದ 
ಕನ್ನಡಾನುವಾದ]
 
 ವಾರ್ತಾಪ್ರಸಾರಕ :
    ಇದು ರೇಡಿಯೋ ರಾಜಧಾನಿ. ಈಗ ಕೇಳಿರಿ. ನಾವು ಮೊದಲೇ 
 ತಿಳಿಸಿರುವಂತೆ ವಿದೇಶೀ ಸೈನ್ಯಗಳು ನಮ್ಮನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆ 
 ಹಾಕುತ್ತಿವೆ. ಅವರ ನೌಕಾ ಮತ್ತು ವಿಮಾನ ದಳ ಈ ಮುತ್ತಿಗೆಯಲ್ಲಿ ಪಾಲು 
 ಗೊಂಡಿವೆ. ನಾವೆಲ್ಲರೂ ಈಗ ಒಂದಾಗಲೇಬೇಕು ಎನ್ನುವಂಥ ಪರಿಸ್ಥಿತಿ 
 ನಮಗೆ ಒದಗಿದೆ. ಈಗ ನಾವು ನಮ್ಮ ಶ್ರಾವಕರ ನೆನಪಿಗೆ ತರಬಯಸುವ 
 ಅಂಶವೇನೆಂದರೆ, ನಮ್ಮ ಇತಿಹಾಸದಲ್ಲಿ ಈ ಮೊದಲು ಇಂಥ ಪರಿಸ್ಥಿತಿ ಒದಗಿದಾಗ 
 ನಮ್ಮ ಅಂತಃಕಲಹ ಹಾಗೂ ವಿದ್ರೋಹಗಳಿಂದಾಗಿ ವಿದೇಶೀಯರು ನಮ್ಮನ್ನು
 ಗೆದ್ದರು. [ಸ್ವಲ್ಪ ತಡೆದು, ಗಾಬರಿಯಿಂದ] ಇದೇ ಈಗ ತಾನೇ ಗೊತ್ತಾಯಿತು.
 ...ವಿದೇಶೀ ಸೈನ್ಯದ 'ಪ್ಯಾರಾಚೂಟ್' ದಳವೊಂದನ್ನು ಇಳಿಸಲಾಗು 
 ತ್ತಿದೆ ಎಂದು. ಈ ವಿಪತ್ತಿನಿಂದ ನಾವು ಗಾಬರಿಯಾಗುವ ಕಾರಣವಿಲ್ಲ. ಈ 
 ಸಮಯದಲ್ಲಿ ನಾವೆಲ್ಲರೂ ಒಂದಾಗಿ ಎದುರಿಸೋಣ.
    ನಾವು ನಮ್ಮ ಬಲದೊಂದಿಗೆ ಯಾವ ದಾರಿಯಗಿ ಮುನ್ನುಗ್ಗಬೇಕೆಂಬ   
 ದನ್ನು ಇತಿಹಾಸದ ಮುಳ್ಳು ಸೂಚಿಸು....
       [ಬೂಟುಗಾಲುಗಳ ಸಪ್ಪಳ. ಬಾಗಿಲು ತಳ್ಳಿ ಒಳಬಂದ ಸದ್ದು, “ಏಯ್!”
 ಗದರಿಕೆ.] ಕ್ಷಮಿಸಿರಿ. ಕ್ಷಮಿಸಿರಿ....
     
                      -----
                      ೧೭೮