ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಗಂಡಸರು
ಹುಟ್ಟಿದಂದಿನಿಂದಲೂ ಬರಿ ವ್ಹಿಸ್ಕಿ ಕುಡಿದೇ ಬೆಳೆದಿರುವಂತೆನ್ನಿಸಿತು.
* * * ಸುಮಾರು ಒಂದು ಗಂಟೆಯ ನಂತರ, ಇನ್ನೂ ಕುಡಿಯುತ್ತಲೇ ಇದ್ದ ಶಾಂತಿಗೆ ಒಮ್ಮೆಲೇ ಎಲ್ಲವೂ ತಮಾಷೆಯೆನ್ನಿಸಿ ಆಕೆ ಗಟ್ಟಿಯಾಗಿ ನಕ್ಕುಬಿಟ್ಟಳು. "ಯಾಕೆ ನೀವು ನಗ್ತಿರೋದು ?" -ಅಂದ ಆತ. "ಹಿಂಗೇ ಸುಮ್ಮನೇ" -ಅಂತ ಆಕೆ ಗ್ಲಾಸನ್ನು ಕೆಳಗಿಟ್ಟು ಮತ್ತಷ್ಟು ನಗತೊಡಗಿದಳು. "ಎಲಾ ಹುಚ್ಚು ಹುಡುಗಿ!" ಅಂತ ಆತ ಗ್ಲಸು ಕೆಳಗಿಟ್ಟು ಎದ್ದು ಆಕೆಯ ಹತ್ತಿರ ಬಂದ. ಆಕೆಯನ್ನೆ ಒಂದು ಗಳಿಗೆ ನೋಡಿ ತನ್ನ ಬಲಗೈ ಆಕೆಯ ಕಡೆ ಚಾಚಿ, "ಶಂತಿ, How about sleeping with me? ಅಂದ್ರೆ....ಒತ್ತಾಯವಿಲ್ಲ...." ಆತನ ಕೈಹಿಡಿದುಕೊಂಡು ತಡವರಿಸುತ್ತ ಎದ್ದುನಿಂತ ಆಕೆ ತಲೆ ಕೊಡಹಿ "ಓ ಯಸ್,ಆಲ್ ರೈಟ್" ಅಂದಳು. * * * ವಿಶೇಷ ಸಂಚಿಕೆಯ ಕೆಲಸವೆಲ್ಲ ಮುಗಿದ ನಂತರ ವಿಶ್ರಾಂತಿ-ವಿರಾಮಕ್ಕೆಂದು ಶಾಂತಿ ಜಾನ್ ನ ಜೊತೆ ಹದಿನೈದು ದಿನ ಖಂಡಾಲಾಕ್ಕೆ ಹೋಗಿದ್ದಳು. ಹಗಲು ರಾತ್ರಿ ವ್ಹಿಸ್ಕಿ,ವ್ಹಿಸ್ಕಿಗಿಂತ ಬೆಚ್ಚಗಾದ ಆತನ ಅಪ್ಪುಗೆ,ಬೇರೆಯೇ ಲೋಕವೊಂದರ,ಇಲ್ಲಿ ನದೆಲ್ಲ ಮರೆಸಿಬಿಟ್ಟಂತಹ ಅನುಭವ. ಪ್ರತಿ ಬೆಳಿಗ್ಗೆ ಆಕೆ ಹಾಸಿಗೆ ಬಿಟ್ಟು ಏಳುವ ಮುನ್ನ ಆಕೆಯನ್ನು ಬರಸೆಳೆದು ಬಿಗಿದಪ್ಪಿ ಒರಟಾಗಿ ಚುಂಬಿಸಿ ಆತ ಹೇಳುತ್ತಿದ್ದ, "You are a wonderful woman!" "You are wonderful too." ಅನ್ನುತ್ತಿದ್ದಳು ಆಕೆ. ನಿಜವಾಗಿ ಅದ್ಭುತ ಶಕ್ತಿಯುಳ್ಳ ಮನುಷ್ಯ. ಒಂದು ದಿನಕ್ಕೆ ಎಂಟು ಸಲ,ಹತ್ತು ಸಲ,ಕೆಲವೊಮ್ಮೆಯಂತೂ ತಾಸಿಗೊಮ್ಮೆ.... ಪ್ರತಿ ಸಲವೂ ಅರ್ಧ ಗಂಟೆಗಿಂತ ಹೆಚ್ಚು,ಪ್ರತಿ ಸಲವೂ ಅದೇ ಮೊದಲನೆಯ ಸಲವೇನೋ ಎಂಬಂತೆ.... ಆಕೆ ಯೋಚಿಸುತ್ತಿದ್ದಳು: ಇದೆಲ್ಲಕ್ಕೆ ಏನಾದರೂ ಒಂದು ಅರ್ಥವಿದೆಯೇ? ಎಲ್ಲಿಯ ಜಾನ್, ಎಲ್ಲಿಯ ಕ್ರಾಂತಿ, ಎಲ್ಲಿಯ ವ್ಯಕ್ತಿಸ್ವಾತಂತ್ರ,ಎಲ್ಲಿಯ ಸಾತಾರೆ,ಎಲ್ಲಿಯ ತಾನು,ಇದೆಲ್ಲ ಕೊಡಿದ್ದು ಹೇಗೆ.... -ಮುಂದೆ ವಿಚಾರಿಸಲು ಆಕೆಯ ಬೇಡವಾಯಿತು.ಯಾವುದೇ ಆಗಲಿ,ಶುರುವಾದಾಗ.ಅದು ಹೇಗೆ ಮುಂದುವರಿದೀತು,ಹೇಗೆ ನಡೆದೀತು,ಕೊನೆಗೆ ಹೇಗೆ ಮುಗಿದೀತು.ಇದೆಲ್ಲದರ ಅರ್ಥವೇನು.ಹೀಗೆಲ್ಲ ಯೋಚಿಸುವುದೇ ತಪ್ಪು ಅನಿಸಿತು.