ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಕಲೇಶಮಾದರಸ, ವಚನಕಾರರು, ಸು. 1150-1475 ಕಲ್ಲಮರದಪ್ರಭುದೇವನ (ಸು, 1430) ಲಿಂಗಲೀಲಾವಿಲಾಸಚಾರಿತ್ರ, ಜಕ್ಕಣಾರ್ಯನ(ಸು, 1430) ನೂರೊಂದುಸ್ಥಲ, ಗುಬ್ಬಿಯ ಮಲ್ಲಣ್ಣನ(ಸು. 1475) ಗಣಭಾಷ್ಯರತ್ನಮಾಲೆ ಈ ಗ್ರಂಥಗಳಲ್ಲಿ ಅನೇಕ ಪುರಾತನರ ವಚನಗಳು ಉದಾಹೃತವಾಗಿವೆ. ಈ ವಚನಕಾರರಲ್ಲಿ ಕೆಲವರು ಮಾತ್ರ ತಮ್ಮ ಹೆಸರನ್ನು ವ್ಯಕ್ತವಾಗಿ ಹೇಳಿಕೊಂಡಿದ್ದಾರೆ. ಉಳಿದವರೆಲ್ಲಾ ತಮ್ಮ ಆತ್ಮ ದೈವದ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಕೆಲವರ ಇಷ್ಟದೈವವು ಇಂಥದೆಂದು ತಿಳಿದಿರುವುದರಿಂದ ಅವರು ಇಂಥ ಕವಿಗಳೆಂದು ನಿಶ್ಚಯಿಸಬಹುದು. ಮಿಕ್ಕವರ ವಿಷಯದಲ್ಲಿ ಇದು ಸಾಧ್ಯವಿಲ್ಲ.

ಈ ಪುರಾತನರಲ್ಲಿ ಕೆಲವರು ಸ್ವಲ್ಪ ಹೆಚ್ಚು ಕಡಮೆ ಬಸವಣ್ಣನ ಸಮಕಾ ಲದವರಾಗಿಯೂ ಕೆಲವರು ಈಚೆಯವರಾಗಿಯೂ ಇದ್ದಂತೆ ತಿಳಿಯುತ್ತದೆ. ಅಂತು ಎಲ್ಲರೂ ಸುಮಾರು 1475 ಕ್ಕೆ ಹಿಂದೆ ಇದ್ದ ಕನ್ನಡ ಕವಿಗಳಾದುದರಿಂದ ಇವರ ವಿಷಯವನ್ನು ತಿಳಿದಮಟ್ಟಿಗೆ ಒಂದೇಕಡೆ ಹೇಳಿ ತತ್ಕೃತವಾದ ವಚನಗಳಲ್ಲಿ ಒಂದೆರಡನ್ನು ಉದ್ಧರಿಸಿ ಬರೆವುದು ಯುಕ್ತವಾಗಿ ತೋರುತ್ತದೆ. ಈ ಕವಿಗಳಲ್ಲಿ ಕೆಲವರ ಚರಿತವು ಪ್ರಥಮ ಸಂಪುಟದಲ್ಲಿ ಬರದಿದೆ. ಆದರೂ ಎಲ್ಲರೂ ವಚನಕಾರರಾದುದರಿಂದ ಅವರನ್ನೂ ಮಿಕ್ಕವರೊಡನೆ ಒಂದೇಕಡೆ ಸೇರಿಸಿ ತತ್ಕೃತವಾದ ವಚನಗಳಲ್ಲಿ ಒಂದೆರಡನ್ನು ಅನುವಾದಮಾಡಿ ತೋರಿಸುವುದು ಪ್ರಯೋಜನಕಾರಿಯಾಗದೆ ಇರಲಾರದು.

ಸಕಲೇಶಮಾದರಸ ಸು. 1150 | ಸಕಲೇಶ್ವರ ಎಂಬ ಅಂಕಿತವುಳ್ಳ ಕೆಲವು ವಚನಗಳಿವೆ. ಇವು ಕೆರೆಯ ಪದ್ಮರಸನ (ಸು. 1165) ಪಿತಾಮಹನಾದ ಸಕಲೇಶಮಾದರಸನಿಂದ ರಚಿತವಾದುವೋ ಏನೋ ತಿಳಿಯದು. ವಚನ ಬಲೀಂದ್ರನ ಸಿರಿಯಿಂದಲಧಿಕರ ನಾನಾರನೂ ಕಾಣೆ; ಅಂತಹ ಸಂಪತ್ತು ಮೂರಡಿಗೈದದೆ ಹೋಯಿತ್ತು. ಕೆಡುವಂತಿದ್ದಿತೇ ಕೌರವನ ರಾಜ್ಯ ? ಮಡಿವಂತಿದ್ದಿತೇ ರಾವಳನ ಬಲ್ಲಾಳಿಕೆ ? ಪರಸ್ತ್ರೀಲಕ್ಷ್ಮಿದೇವಿಗೊಲಿದು ಒಂದು ನಿಮಿಷದಲ್ಲಿ ಮಡಿದ. ಇದು ಸತ್ಯ. ಇದು ಸತ್ಯ. ಸಿರಿಸೌಕರ್ಯವೆಂಬುದು ಆಕಾಶದ ರಚನೆ, ಇದನರಿದು

1. Vol.I. 142-161. 2. Ibad, 189.