106 ಕರ್ಣಾಟಕ ಕವಿಚರಿತೆ. [15 ನೆಯ ದೇಹದಿಜೈಯನತಿಗಳೆದು ನಮ್ಮ ಸಕಲೇಶ್ವರದೇವಂಗೋತು ನೀನೆಂಬ ಭ್ರಮೆಯಲರಿ ಯಾ ಮರುಳೆ 2 ಬಸವ 1 ಈತನು ತನ್ನ ಆತ್ಮದೈವವಾದ ಕೂಡಲಸಂಗಮದೇವರ ಅಂಕಿತ ದಲ್ಲಿ ವಚನಗಳನ್ನು ಬರೆದಿದ್ದಾನೆ. ವಚನಗಳು. (1) ಹಾತೊ ಇವೆಗೆ ಬೆಲ್ಲದಂತಹ ಕೆಸು, ಸಕ್ಕರೆಯಂತಹ ಮಟಿಲು, ತದರಾಜನಂತಹ ನೆರೆತೆರೆಗಳು, ಇಂತಪ್ಪ ಆದ್ಯರ ವಚನವಿರಲು ಬೇವ ಬಾವಿಯ ತೋಡಿ ಉಪ್ಪು ನೀರ ಸವಿದಂತಾಯಿತ್ತಯ್ಯಾ ಎನ್ನ ಯುಕ್ತಿ, ನಿಮ್ಮ ವಚನಂಗಳ ಕೇಳದೆ ಅನ್ಯ ಪುರಾಣಗಳ ಕೇಳಿ ಕೆಟ್ಟೆನಯ್ಯಾ ಕೂಡಲಸಂಗಮದೇವ. (2) ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾರಿ ಘನ ವಾಯಿತು; ಎನ್ನ ನಿಂದಲ್ಲಿ ನಿಲ್ಲಲೀಯದು; ಎನ್ನ ಕುಳಿತಲ್ಲಿ ಕುಳ್ಳಿರಲೀಯದು; ಕ್ಷಣದಲ್ಲಿ ಪಾತಾಳಕೈದುತ್ತಿದೆ ; ಕ್ಷಣದಲ್ಲಿ ಆಕಾ ಶಕೈದುತ್ತಿದೆ ; ಕ್ಷಣದಲ್ಲಿ ದಿಗ್ಗಸೆಗೈದುತ್ತಿದೆ ; ಕೂಡಲಸಂಗಮದೇವ ಈ ಮನವೆಂಬ ಮರ್ಕಟನ ದಾಟಿಯನೆಂದಿಗೆ ನೀಗಿ ಎಂದು ನಿಮ್ಮ ನೊಡಗೂಡುವೆನಯ್ಯಾ. (3) ಹೊನ್ನ ಹಾವುಗೆಯ ಮೆಟ್ಟಿದಾತನ, ಮಿಡಿಮುಟ್ಟಿದ ಕೆಂಜೆಡೆಯವನ, ಮೈಯಲ್ಲಿ ವಿಭೂತಿಯ ಪೂಸಿದವನ, ಕರದಲ್ಲಿ ಕಪಾಲವ ಹಿಡಿದವನ, ಶರೀರದಲರ್ಧನ ಸತಿಗೆ ಕೊಟ್ಟವನ, ಬಾಣನ ಬಾಗಿಲ ಕಾದವನ, ನಂಬಿಗೆ ಕುಂಟಣಿಯಾದವನ, ಜೋ ಭಂಗ ಹೊನ್ನ ಮನೆಯ ಕದವನ ಮಾಡಿದ ಪೂಜೆಯ ಕೊಂಬವನ, ಸದ್ಭಕ್ತರ ಹೃದಯಲ್ಲಿಪ್ಪವನ, ಕೊಂಡುಬಾರೆಲಾ ಕೂಡಲಸಂಗಯ್ಯನೆಂಬವನ 3 ಚೆನ್ನ ಬಸವ 2 ಈತನ ವಚನಗಳಲ್ಲಿ ಕೂಡಲಚನ್ನಸಂಗಮದೇವರ ಅಂಕಿತವಿದೆ. ವಚನಗಳು (1) ಪರರಾಶೆಯೆಂಬ ಜ್ವರ ಹತ್ತಿ ನಾನು ಕಳವಳಿಸಿ ನುಡಿವೆನಯ್ಯಾ, ಹೊ ನ್ನು ಹೆಣ್ಣು ಮಣ್ಣು ಬಯಸಿ ವಿಕಳತೆಗೊಂಡಂತೆ ಪ್ರಲಾಪಿಸುತ್ತ ನುಡಿವೆನಯ್ಯಾ, ಈ I, Vol I, 142 2, 16td , 145
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೧
ಗೋಚರ