ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

      ಮಧುಸೂದನ          25 ದಕ್ಕೆ ಸ್ವಲ್ಪ ನೀರು ತರಿಸಿಕೊಡುತ್ತೇನೆ. ಭಾಸ್ಕರ:-ನಾನು-ಏನು-ನಾನು-ಕುಡಿದಿರುವೆನೋ ನಿನಗೇನು ತಲೆತಿರುಗು ತ್ತದೋ ನಾನೆಂದಿಗೂ ಕುಡಿಯುವುದಿಲ್ಲ. ನೀನು-ನಿನಗೆ ದುಡ್ಡಿಲ್ಲವೇ ನೀರು ನನಗೆ ಬೇಡಾ ಇಕೋ ತಕೋ ಈ ಹತ್ತು ರೂಪಾಯಿಗಳಿಗೆ ಮದ್ಯತರಿಸು ಕುಡಿಯೋಣ ನಾನು ನಾನು ನಾನೇನು ಬಡವನಾ ಇದೋ ನೋಡು ಇನ್ನೂ ಹಣವಿದೆ ಎಲೋ ಯಾರೋ ಅಲ್ಲಿ ಮೂರುಶೀಸೆ ಬರಾಂದಿ ತೆಗೆದುಕೊಂಡುಬಾರೋ. ಅಲ್ಲಿದ್ದ ಸೇವಕನು ನಗುತ್ತಾ ಮೂರುಶೀಸೆ ಬ್ರಾಂದಿಯನ್ನೂ ಬಟ್ಟಲುಗಳನ್ನೂ ತಂದಿಟ್ಟು ಹೋದನು. ಭಾಸ್ಕರನು ಬಟ್ಟಲುಗಳನ್ನು ತುಂಬಿ ಅಲ್ಲಿದ್ದ ಮನುಷ್ಯನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿಸುತ್ತಾ ಎಲ್ಲವನ್ನೂ ತಾನು ಉಡುಪಿನಹಿಂದೆ ಬಚ್ಚಿಟ್ಟು ಕೊಂಡಿದ್ದ ಚೀಲದೊಳಕ್ಕೆ ಪತ್ತೇದಾರರಿಗೇನೆ ತಿಳಿಯದ ರೀತಿಯಿಂದ ತುಂಬಿ ಕೊಳ್ಳುತ್ತಿದ್ದನು. ಈ ವಿಧವಾದ ಮೋಸಮಾಡುವಿಕೆಯು ಅಕ್ಬರಿನ ಕಾಲದಿಂದಲೂ ಬಂದಿ ದೆಯೆಂದು ಅನೇಕ ವಿಷಯಗಳಿಂದ ತಿಳಿದುಬರುತ್ತದೆ. ಇವನು ಹೀಗೆ ಬಹಳ ಬೆಲೆ ಯುಳ್ಳ ಮದ್ಯವನ್ನು ಕೊಡುವುದನ್ನು ನೋಡಿದ ಅಲ್ಲಿದ್ದ ಒಬ್ಬ ಮನುಷ್ಯನು ನಗುತ್ತಾ ಅವನು ಕೊಟ್ಟಿದ್ದನ್ನೆಲ್ಲಾ ಕುಡಿಯುತ್ತಾ ಬಂದನು. ಮದ್ಯವು ಬಹಳ ಖಾರವುಳ್ಳುದಾ ದ್ದರಿಂದ ಬಹಳಬೇಗ ಮತ್ತನ್ನುಂಟುಮಾಡತಕ್ಕುದಾಗಿತ್ತು. ಮತ್ತೇರಿದಹಾಗೆಲ್ಲಾ ಇನ್ನೂ ಕುಡಿಯಬೇಕೆಂಬಭಿಲಾಷೆಯು ಅಂಕುರಿಸಿತು, ಇದನ್ನ ರಿತ ಭಾಸ್ಕರನು "ಛೇ ! ಬಿಡಯ್ಯಾ ! ಏನು ಕುಡಿದೆ ನೀನು-ನಾನು ಇಲ್ಲ ನೀನು ಮನುಷ್ಯನೇ ಏನೂ ಕುಡಿಯ ಲಿಲ್ಲಾ. ಎಲ್ಲವನ್ನೂ ನಾನೇ ಕುಡಿದುಬಿಟ್ಟೆನು. (ಕುಣಿದಾಡತೊಡಗಿದನು) ಆಹಹ ! ಮದ್ಯವು ಬಹಳ ಸೊಗಸಾಗಿದೆಯಪ್ಪ ! ಅಯ್ಯೋ ಎಲ್ಲಾ ಆಗಿಹೋಯಿತು, ? ಓಹೋ ನಾನೇನು ಬಡವನಾ ? ಎಲೋ ಆಳು ಇಲ್ಲಿ ಬಾರೋ ಇಕೋ ತಕೋ ತಕ್ಕೊಂಡು ಬಾರೋ ಇನ್ನಿಷ್ಟು ಬರಾಂದಿ-ಒಳ್ಳೇದಾಗಿರಬೇಕು. ಗೊತ್ತಿದೆಯೋ ನಾನು ಯಾರು ? ನೀಲಕಂಠಬಾಬು ಈಗ ಹೋಗು ಇದೋ ರೂಪಾಯಿ (ಎಂದು ಹೇಳಿ ತೂರಾಡುತ್ತಾ ಎದ್ದು ನಿಂತುಕೊಂಡು) ಇನ್ನಿಪ್ಪತ್ತು ರೂಪಾಯಿಗಳನ್ನು ಧಣಧಣವೆಂದು ಮೇಜಿನಮೇಲೆ ಹಾಕಿದನು. ಅಲ್ಲಿದ್ದ ಮನುಷ್ಯನು ಇನ್ನೂ ಸಂಪೂರ್ಣವಾಗಿ ಮತ್ತೇರಲ್ಪಟ್ಟವನಾಗಿರ ಲಿಲ್ಲವಾಗಿ ಇದೆಲ್ಲವನ್ನೂ ನೋಡಿ ಇವನು ಯಾರೋ ಮಹದೈಶ್ವರ್ಯವಂತನು. ಹೀಗೆ ಧನವನ್ನು ಖರ್ಚುಮಾಡುತ್ತಿದ್ದಾನೆಂದು ಯೋಚಿಸಿ ನಗುತ್ತಾ ಕುಳಿತಿದ್ದನು. ಸ್ವಲ್ಪ ಹೊತ್ತಿಗೆಲ್ಲಾ ಮದ್ಯವೂ ಬಂದಿತು. ಪುನಹಾ ಭಾಸ್ಕರನು ಬಟ್ಟಲುಗಳಲ್ಲಿ ತುಂಬಿತುಂಬಿ ಆ ಮನುಷ್ಯನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿಸಿದನು. ಸಂಶಯಕ್ಕಾಸ್ಪದವಾ