26. ಕಾದಂಬರಿಸಂಗ್ರಹ "'"""""'"""""""'"'""""""""""""" ತಂದೆಯು ? ಆತನಿಗಾಗಿ ನೀನು ಹೋಗಿ ಕಾರಾಗಾರವನ್ನು ಸೇರುವುದು ಯುಕ್ತವಲ್ಲ ಎಂದು ಸಾರಿ ಹೇಳುತ್ತಿದ್ದರೂ ರೋಹಿಣಿಯೂ ಕೂಡ ಸೇನಾಪತಿಯೇ ! ಲೋಕದಲ್ಲಿ ಹೆತ್ತತಂದೆ, ವಿದ್ಯೆಹೇಳಿದವನು, ಆಪತ್ಕಾಲದಲ್ಲಿ ಸಹಾಯಮಾಡಿದವನು, ಒಪ್ಪತ್ತು ಊಟಕ್ಕಿಕ್ಕಿದವನು, ಹೆಣ್ಣುಕೊಟ್ಟು ಮನೆಯನ್ನು ಉದ್ಧಾರಮಾಡಿದವನು ಇವರೆ ವರೂ ಪಿತೃಗಳು, ಮರಣೋನ್ಮುಖಳಾಗಿ ಹಿಮದಲ್ಲಿ ಬಿದ್ದಿದ್ದ ನನ್ನನ್ನು ಕರೆತಂದು ಸಾಕಿ ಸಲಹಿ ಕಷ್ಟಪಟ್ಟ ಕರುಣಾಕರನು ಇಂತಹ ಯುದ್ದದಲ್ಲಿ ಏನಾನೆಂಬುದನ್ನು ಸಹ ನೋಡದೆ ಇರಲು ನಾನೇನು ಅಂತಹ ಕೃತ ಇಲ್ಲ, ಇದು ನಿನ್ನಂಥ ಪ್ರಾಜ್ಞನಾದ ಮನುಷ್ಯನು ತಿಳಿಯದ ವಿಷಯವಲ್ಲ ಎಂದು ಹೇಳಿ ಪ್ರತ್ಯುತ್ತರವನ್ನು ನಿರೀಕ್ಷಿಸ ದೆಯೇ ರೋಹಿಣಿಯು ಕರುಣಾಂಬೆಯ ಸಹಿತವಾಗಿ ಪುರವನ್ನು ಪ್ರವೇಶಿಸಿದಳು.
ರೋಹಿಣಿಯು ಲಕ್ಷ್ಮಮಾಡದೆ ಪ್ರವೇಶಿಸಿದ್ದನ್ನು ಸೇನಾಧಿಕಾರಿಯು ಚಕ್ರವರ್ತಿ ಯವರಿಗೆ ಅರಿಕೆಮಾಡಿದನು. ಚಕ್ರವರ್ತಿಯು ಕೂಡ ಈಕೆಯ ಧೈಯ ಅರಿಕೆಮಾ, ಪಿತೃವಾತ್ಸಲ್ಯ ಇವುಗಳನ್ನು ಕೇಳಿ ಆಶ್ಚರ್ಯಭರಿತನಾಗಿ ಆಕೆಯನ್ನು ನೋಡಲು ಕುತೂ ಹಲಪಟ್ಟು ಸೈನ್ಯಾಧಿಕಾರಿಯನ್ನು ಕುರಿತು ಆಕೆಯೊಬ್ಬಳೇ ಪ್ರವೇಶಿಸಿರುವಳೇ ? ಅಥವಾ ಮತ್ತಾರಾದರೂ ಜೊತೆಯಲ್ಲಿ ಬಂದಿರುವರೆ ? ಎಂದು ಪ್ರಶ್ನಿಸಲು ಸೇನಾಧಿಕಾರಿಯು ತಾನು ಆಕೆಯನ್ನು ಕಂಡುದು ಮೊದಲ್ಗೊಂಡು ಸನ್ನಿಧಿಗೆ ಬರುವವರಿಗೆ ನಡೆದ ಸಮಾಚಾರವನ್ನು ಅರಿಕೆ ಮಾಡಿದನು. ಇದನ್ನೆಲ್ಲಾ ಸಾವಧಾನದಿಂದ ಕೇಳಿದ ಚಕ್ರವ ರ್ತಿಯು ಆಕೆಗೇನೂ ತೊಂದರೆ ಕೊಡದೆ ತನ್ನ ಬಳಿಗೆ ಕರತರಬೇಕೆಂದು ಸೇನಾಧಿಕಾರಿಗೆ ಆಜ್ಞಾಪಿಸಿದನು.
ಇತ್ತ ರೋಹಿಣಿಯು ಕರುಣಾಂಬೆಯೊಡನೆ ಯುದ್ಧರಂಗದಲ್ಲಿ ತನ್ನ ಸಾಕುತಂದೆ ಯಾದ ಕರುಣಾಕರನನ್ನು ಹುಡುಕುತ್ತ ಅನೇಕ ಶವಗಳನ್ನು ತುಳಿಯುತ್ತಲೂ ದಾಟು ತ್ತಲ, ಮರಣಸಂಕಟದಿಂದ ನರಳುತ್ತಿರುವ ಅನೇಕ ಯೋಧರನ್ನು ನೋಡಿ ಕನಿಕರಪಡುತ್ತಲೂ ಡುತ್ತಲೂ, ಬಹುದೂರ ಅಲೆದಾಗ್ಯೂ ಕರುಣಾಕರ, ದಯಾಕರರ ಸುಳಿವೇ ತಿಳಿಯ ಲಿಲ್ಲ. ಅಷ್ಟರಲ್ಲೆ ಸೂರ್ಯದೇವನು ಅಸ್ತಂಗತವಾದನು. ರಣಾಂಗದಲ್ಲಿ ನಾಯಿ ನರಿಗಳು, ಗೂಬೆಗಳು, ಭೂತಪ್ರೇತ ಪಿಶಾಚಾದಿಗಳು ತಮ್ಮ ಬಳಗಗಳೊಳಗೊಂಡು ಶುಭಶೋಭನಾದಿಗಳನ್ನು ಮಾಡುತ್ತ ಅನೇಕವಿಧವಾದ ಭೋಜನಗಳಿಂದ ಉಪಚರಿಸುತ್ತ ತೃಪ್ತಿ ಹೊಂದಿ ಬೊಬ್ಬಿಡುತ್ತಲಿದ್ದುವು, ಅಂಧಕಾರ-ಅದರಲ್ಲೂ ಈ ಘೋರಭೀಕರವಾದ ಶಬ್ದ ಇವುಗಳ ನಡುವೆ ಸಂಚರಿಸುತ್ತಿರುವ ರೋಹಿಣಿಯ ಮನಸ್ಸಿನ ರೀತಿಯನ್ನು ಫಾಠಕಮಹಾಶಯರೇ ಊಹಿಸಿಕೊಳ್ಳಲಿ.