ಪುಟ:ನನ್ನ ಸಂಸಾರ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



            ರೋಹಿಣಿ 

'""""''''''''"""""""""" ಮಾಡಲು ಅಷ್ಟು ಹೊತ್ತಿಗೆ ಎಲ್ಲಿಂದಲೋ ಒಂದು ಪಿರಂಗಿಯ ಗುಂಡು ರೋಹಿಣಿಯ ಕೈಯನ್ನು ಸವರಿಕೊಂಡು ಹೋಯಿತು, ಮತ್ತು ಅನೇಕ ಜನ ಸಿಪಾಯಿಗಳು ಬಂದು ಇವರನ್ನು ಸುತ್ತಿಕೊಂಡರು. ಅಷ್ಟರಲ್ಲಿ ಈ ಸಮಾಚಾರವು ಸೈನ್ಯಾಧಿಪತಿಗೂ ತಿಳಿಯಿತು. ಆ ಸಮಯದಲ್ಲಿ ಆತನು ಅಲ್ಲಿಗೆ ಬಂದು ಬಾರಮ್ಮ ಹುಡುಗಿ ! ನನ್ನೊಡನೆ ! ಎಂದು ಕರೆದನು ಆ ಸಮಯದಲ್ಲಿ ರೋಹಿಣಿಯು "ತನ್ನ ಸುತ್ತಮುತ್ತಲೂ ಸುತ್ತಿಕೊಂಡಿರುವ ಜನರು ತನ್ನನ್ನು ಹಿಂಸಮಾಡುತಲಿದಾರೆ ಅದನ್ನು ತಪಿಸಿಕೊಡಬೆಕು. ನಾನು ಯಾರಿಗೂ ತೊಂದರೆಯನ್ನು ಕೊಡುವುದಕ್ಕೆ ಬಂದವಳಲ್ಲ. ನಾನು ಸಹಾಯವಿಲ್ಲದ ಅಬಲೆ ಕಾರ್ಯಾಂತರವಾಗಿ ಈ ಯುದ್ಧರಂಗಕ್ಕೆ ಬಂದಿರುವೆನು, ಆದ್ದರಿಂದ ನನ್ನ ಗೋಜಿಗೆ ಬರದಂತೆ ಈ ಸಿಪಾಯಿಗಳಿಗೆ ಕಟ್ಟಪ್ಪಣೆಯನ್ನು ಮಾಡಬೇಕೆಂದು ಪ್ರಾರ್ಥಿ ಸಿದಳು. ಅದಕ್ಕೆ ಆತನು ಈ ಪಟ್ಟಣವನ್ನು ನೀವುಗಳು ಪ್ರವೇಶಮಾಡುವುದಕ್ಕೆ ಮುಂಚೆಯೆ, “ ನೀವು ಪ್ರವೇಶಮಾಡಬೇಡಿ ಹಾಗೆ ಪ್ರವೇಶಮಾಡಿದರೆ ತೊಂದರೆ ಯುಂಟಾಗುವುದು' ಎಂದು ಯಾರು ಎಚ್ಚರಿಸಲಿಲ್ಲವೆ ? ಅದನ್ನು ನೀವು ಲಕ್ಷಿಸದೆ ಹೇಗೆ ಪುರಪ್ರವೇಶಮಾಡಿದಿರಿ ? ಈಗ ಸಿಪಾಯಿಗಳು ಹಿಂಸಿಸುವರು, ಅದನ್ನು ತಪ್ಪಿಸಬೇಕೆಂದು ಹೇಳುವಿರಿ ? ಬಂದದ್ದನ್ನೆಲ್ಲಾ ಅನುಭವಿಸಿಯೇ ತೀರಬೇಕು ಎಂದು ಆಕೆಗೆ ತಿಳಿಸಿ ನಿಂತಿರುವ ಸಿಪಾಯಿಗಳನ್ನು ಕರೆದು ನೀವು ಅವರ ಗೋಜಿಗೆ ಹೋಗಬೇಡಿ ನಿಮ್ಮ ಕೆಲಸಗಳಲ್ಲಿ ನಿರತರಾಗಿ ಎಂದಪ್ಪಣೆ ಮಾಡಿದನು.

 ನಂತರ ರೋಹಿಣಿಯ ಕಡೆಗೆ ತಿರುಗಿ ನೀನು ಯಾರು ? ಈಕೆಯು ಯಾರು ? ನಿನ್ನ ಹೆಸರೇನು ? ಈಕೆಯ ಹೆಸರೇನು ? ಈಕೆಗೆ ನೀನು ಏನುಆಗಬೇಕು ? ನೀವು ಇಲ್ಲಿಗೆ ಬರಲು ಕಾರಣವೇನು ? ಎಂಬೀ ಅಂಶಗಳನ್ನು ನಿರ್ವಂಚನೆಯಾಗಿ ತಿಳಿಸಬೇಕು ಎಂದು ದಕ್ಕೆ ರೋಹಿಣಿಯು ಆ ಸೈನ್ಯಾಧಿಪತಿಯನ್ನು ಕುರಿತು ನನ್ನ ಹೆಸರು ರೋಹಿಣಿ ಈಕೆಯ ಹೆಸರು ಕರುಣಾಂಬೆ ಈಕೆಯು ಪೂರ್ವದಲ್ಲಿ ಈ ಪುರಾಧ್ಯಕ್ಷನಾಗಿದ್ದವನ ಪತ್ತಿ ಯು ನಿನ್ನೆಯದಿವಸ ನನ್ನ ಸಾಕುತಂದೆಯಾದ ಕರುಣಾಕರನು ಈ ಯುದ್ಧದ ಸಂಗತಿಯನ್ನು ಸವಾರನ ಮೂಲಕ ನಮಿಗೆ ತಿಳಿಸಿದನು, ಆತನನ್ನು ಇಂತಹ ಕಷ್ಟ ಕಾಲದಲ್ಲಿ ಖಂಡಿತವಾಗಿಯೂ ನೋಡಲೇಬೇಕೆಂಬ ಕುತೂಹಲದಿಂದ ಈ ತೊಂದರೆಗಳ ನ್ನೆಲ್ಲಾ ಅನುಭವಿಸಿಕೊಂಡು ಒಂದೆವು, ಆತನನ್ನು ನೋಡಲು ಸಾವಕಾಶವಾಗುವುದು. ಜಾಗ್ರತೆಯಾಗಿ ಅಪ್ಪಣೆ ಕೊಡಿ ಎಂದು ಹೊರಡಲುದ್ಯುಕ್ತಳಾದಳು.
  ಸೇನಾಪತಿಯು ಈಕೆಯ ಧೈರ್ಯವನ್ನೂ , ಪಿತೃವಾತ್ಸಲ್ಯವನ್ನೂ, ನೋಡಿ ಆನಂದಭರಿತನಾದಾಗ್ಯೂ ಅದನ್ನು ತೋರ್ಪಡಿಸದೆ ಕರುಣಾಕರನು ನಿನಗೆ ಹೇಗೆ ಸಾಕು                           ೪